Ad imageAd image

ಇಲ್ಲಿ  ನೋ ರೋಮ್ಯಾನ್ಸ್ ಪ್ಲೀಸ್

Bharath Vaibhav
ಇಲ್ಲಿ  ನೋ ರೋಮ್ಯಾನ್ಸ್ ಪ್ಲೀಸ್
WhatsApp Group Join Now
Telegram Group Join Now

ಹೋಟೆಲ್‌ ರೂಂ ಸೇವೆ ನೀಡುವ ಓಯೋ (OYO) ಬಗ್ಗೆ ಈಗಿನ ಪೀಳಿಗೆಗೆ ಚೆನ್ನಾಗಿಯೇ ಗೊತ್ತಿದೆ. ಕೆಲವರು ಕೆಟ್ಟ ವಿಚಾರಕ್ಕೂ ಈ ಪದಬಳಕೆ ಮಾಡೋದನ್ನ ಕೇಳಿರುತ್ತೀವಿ. ಇನ್ನು ಪ್ರೇಮಿಗಳ ವಿಚಾರಕ್ಕೆ ಬಂದರೆ ಈ ಓಯೋ ಪದ ಹೆಚ್ಚಾಗಿ ಬಳಕೆಯಲ್ಲಿದೆ. ಕೆಲ ಪ್ರೇಮಿಗಳು ಸಾವರ್ಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸಿದಾಗ, ಥೂ ಇದೇನ್‌ ಓಯೋ ಅನ್ಕೊಂಡ್ರಾ? ಎಂದು ಬೈಯೋದು ಕೂಡ ಕಾಮನ್‌.

ಆದ್ರೆ, ಬೆಂಗಳೂರಿನ ಕ್ಯಾಬ್‌ ಚಾಲಕನೊಬ್ಬ ಪ್ರಯಾಣಿಕರಿಗಾಗಿ ವಿಶೇಷ ಫಲಕವೊಂದನ್ನು ಅಳವಡಿಸಿದ್ದಾರೆ. ಇದರಲ್ಲೂ ಸಹ ಡ್ರೈವರ್‌ ಓಯೋ ಬಗ್ಗೆಯೇ ಉಲ್ಲೇಖಿಸಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಇದರ ಫೋಟೋಗಳು ವೈರಲ್‌ ಆಗಿವೆ. ಬೆಂಗಳೂರಿನ ಟ್ರಾಫಿಕ್‌ ರಸ್ತೆಗಳಲ್ಲಿ ಕ್ಯಾಬ್‌ಗಳ ಸಂಖ್ಯೆ ಕಡಿಮೆಯೇನಿಲ್ಲ. ಕೆಲವರು ಕ್ಯಾಬ್‌ ಹತ್ತಿದ ಮೇಲೆ ನಾವು ಎಲ್ಲಿದ್ದೇವೆ ಅನ್ನೋದನ್ನೂ ಮರೆತಿರುತ್ತಾರೆ. ಕೆಲ ಪ್ರೇಮಿಗಳು ಕೂಡ ಇತ್ತೀಚಿನ ದಿನಗಳನ್ನು ಕ್ಯಾಬ್‌ನಲ್ಲಿ ಸಂಚರಿಸುವಾಗ ಸುಮ್ಮನೆ ಕೂರುವ ಜಾಯಮಾನದವರಲ್ಲ. ಕೆಲವರು ಮಿತಿಮೀರಿ, ಮೈಮರೆತು ವರ್ತಿಸುವ ಘಟನೆಗಳು ಬೆಂಗಳೂರಿನಲ್ಲಿ ಕಾಮನ್‌ ಆಗಿಬಿಟ್ಟಿದೆ. ಹಿಂಬದಿ ಸೀಟ್‌ನಲ್ಲಿ ಪ್ರಯಾಣಿಕರಂತೆ ಕೂರುವ ಕೆಲ ಪ್ರೇಮಿಗಳು ಅಸಭ್ಯವಾಗಿ ವರ್ತಿಸುತ್ತಿರುತ್ತಾರೆ.

ಇದರಿಂದ ಮುಜುಗರ ಹಾಗೂ ಕಸಿವಿಸಿಗೆ ಒಳಗಾಗುವ ಚಾಲಕರು ಇದನ್ನು ಕಂಡೂ ಕಾಣದಂತೆ ಸುಮ್ಮನಾಗಿಬಿಡುತ್ತಾರೆ. ಇನ್ನೂ ಕೆಲವರು ಪ್ರಯಾಣಿಕರ ಮೇಲೆ ಜೋರು ಮಾಡಲು ಹೋದರೆ ನಮ್ಮ ಕೆಲಸಕ್ಕೆ ಕುತ್ತು ಬರುತ್ತದೆ ಎಂಬ ಕಾರಣದಿಂದಲೀ ಸೈಲೆಂಟ್‌ ಮೋಡ್‌ನಲ್ಲೇ ಇರ್ತಾರೆ. ರಸ್ತೆಗಳಲ್ಲಿ ಸಂಚರಿಸುವಾಗ ಅಕ್ಕಪಕ್ಕದಲ್ಲಿ ವಾಹನಗಳಿದ್ದರೂ ಕೆಲವರು ತಮ್ಮ ಮೈಮೇಲೆ ಪ್ರಜ್ಞೆಯೇ ಇಲ್ಲದಂತೆ ವರ್ತಿಸುತ್ತಾರೆ. ಇದನ್ನು ಕಂಡ ಸಾರ್ವಜನಿಕರು ಏನೂ ಮಾಡಲಾಗದೆ ಸುಮ್ಮನೆಯೇ ಇರುತ್ತಾರೆ.

ಕೆಲವರು ಅಲ್ಲಲ್ಲೇ ಇಂತವರಿಗೆ ಚಳಿ ಕೂಡ ಬಿಡಿಸುತ್ತಾರೆ. ಬೇರೆ ಊರಿನಿಂದ ಬೆಂಗಳೂರಿಗೆ ಬಂದಿರುವವರು ಈ ರೀತಿ ಅಸಭ್ಯವಾಗಿ ವರ್ತಿಸುತ್ತಾರೆ ಅನ್ನೋದು ಕ್ಯಾಬ್‌ ಚಾಲಕರ ಅನುಭವದ ಮಾತು. ಆದರೆ, ಇಂತಹ ಅಸಭ್ಯ ವರ್ತನೆಗಳಿಂದ ರೋಸಿ ಹೋಗಿದ್ದ ಬೆಂಗಳೂರಿನ ಕ್ಯಾಬ್‌ ಚಾಲಕರೊಬ್ಬರು ಒಂದೊಳ್ಳೆ ಪ್ರಯತ್ನ ಮಾಡಿದ್ದಾರೆ. ಕ್ಯಾಬ್‌ನ ಹಿಂಬದಿಯಲ್ಲಿ ಕೂರುವ ಪ್ರಯಾಣಿಕರಿಗಾಗಿ ಸೂಚನಾ ಫಲಕವೊಂದನ್ನು ಹಾಕಿರುವ ಚಾಲಕ, ಎಚ್ಚರಿಕೆ! ಇಲ್ಲಿ ನೋ ರೊಮ್ಯಾನ್ಸ್ಎಂದು ಬರೆದಿದ್ದಾರೆ.

ಇದು ಕ್ಯಾಬ್‌, ನಿಮ್ಮ ಪ್ರೈವೇಟ್‌ ಜಾಗವೂ ಅಲ್ಲ ಅಥವಾ ಓಯೋ ಕೂಡ ಅಲ್ಲ. ಹಾಗಾಗಿ ದಯವಿಟ್ಟು ಸುಮ್ಮನಿರಿ ಎಂದು ನೇರವಾಗಿಯೇ ವಾರ್ನಿಂಗ್‌ ಕೊಡುವ ಬೋರ್ಡ್‌ ಅಳವಡಿಸಿದ್ದಾರೆ. ಈ ಫೋಟೋ ಅನ್ನು ಪ್ರಯಾಣಿಕರೊಬ್ಬರು ಫೋಟೋ ಹಿಡಿದು ಶೇರ್‌ ಮಾಡಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

WhatsApp Group Join Now
Telegram Group Join Now
Share This Article
error: Content is protected !!