ಲಕ್ನೋ: ಗಂಡನನ್ನು ಕೊಲೆ ಮಾಡಿದ ಬಳಿಕ ಉತ್ತರ ಪ್ರದೇಶದ ಮುಸ್ಕಾನ್ ರಸ್ತೋಗಿ ಪ್ರಿಯಕರ ಸಾಹಿಲ್ ಜೊತೆ ಹೋಳಿ ಹಬ್ಬ ಆಚರಿಸಿ ಡ್ಯಾನ್ಸ್ ಮಾಡಿದ್ದ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಉತ್ತರಪ್ರದೇಶದ ಸೌರಭ್ ತಿವಾರಿ ಕೇಸ್ ಈಗ ಭಾರೀ ಸುದ್ದಿಯಾಗುತ್ತಿದೆ. ತನ್ನ ಕಳ್ಳ ಸಂಬಂಧಕ್ಕೆ ಅಡ್ಡಿಯಾಗುತ್ತದೆಂದು ಪತಿ ಸೌರಭ್ ತಿವಾರಿಯನ್ನು ಪ್ರಿಯಕರ ಸಾಹಿಲ್ ಜೊತೆ ಸೇರಿಕೊಂಡು ಮುಸ್ಕಾನ್ ಕೊಲೆ ಮಾಡಿದ್ದಳು. ಬಳಿಕ ಮೃತದೇಹವನ್ನು ಪೀಸ್ ಪೀಸ್ ಮಾಡಿ ಡ್ರಮ್ ಒಂದರಲ್ಲಿ ಮುಚ್ಚಿ ಸಿಮೆಂಟ್, ಮರಳು ತುಂಬಿಸಿದ್ದಳು. ಆದರೆ ಮುಸ್ಕಾನ್ ಮಗಳು ತನ್ನ ತಂದೆಯನ್ನು ತಾಯಿಯೇ ಕೊಲೆ ಮಾಡಿರುವ ವಿಚಾರವನ್ನು ನೆರೆಮನೆಯವರ ಮುಂದೆ ಬಾಯ್ಬಿಟ್ಟಿದ್ದಳು.
ಇದೀಗ ಮುಸ್ಕಾನ್ ಮತ್ತು ಪ್ರಿಯಕರ ಸಾಹಿಲ್ ಪೊಲೀಸರ ಅತಿಥಿಯಾಗಿದ್ದಾರೆ. ಮುಸ್ಕಾನ್ ಮತ್ತು ಸಾಹಿಲ್ ಕುರಿತಾದ ಮತ್ತೊಂದು ಬೆಚ್ಚಿಬೀಳಿಸುವ ವಿಚಾರ ಹೊರಬರುತ್ತಿದೆ. ಗಂಡನನ್ನು ಅಷ್ಟು ಕ್ರೂರವಾಗಿ ಕೊಲೆ ಮಾಡಿದ ಬಳಿಕ ಮುಸ್ಕಾನ್ ಬಳಿಕ ಪ್ರಿಯಕರನ ಜೊತೆ ಹೋಳಿ ಹಬ್ಬ ಆಚರಿಸಿದ್ದಳು.
ಗಂಡನನ್ನು ಕೊಲೆ ಮಾಡಿದ ಕಿಂಚಿತ್ತೂ ಪಶ್ಚಾತ್ತಾಪ, ಭಯವಿಲ್ಲದೇ ಪ್ರಿಯಕರನ ಜೊತೆ ಬಿಂದಾಸ್ ಆಗಿ ಬಣ್ಣ ಎರಚುತ್ತಾ ಡ್ಯಾನ್ಸ್ ಮಾಡಿದ್ದಾಳೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈಕೆ ಗಂಡನನ್ನು ಕೊಂದು ಪ್ರಿಯಕರನ ಜೊತೆ ಬಣ್ಣವಾಡಿ, ಡ್ಯಾನ್ಸ್ ಮಾಡಿದಳು !!
