
ಗೋಕಾಕ : ಕಳೆದ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮಾದಿಗ ಒಳಮಿಸಲಾತಿ ಜಾರಿಗೆ ಆಗ್ರಹಿಸಿ ಗೋಕಾಕ ತಾಲೂಕಾ ನೂರಾರು ಮಾದಿಗರು ನಗರದಲ್ಲಿ ಅರೆಬೆತ್ತಲೆಯಾಗಿ ಉರುಳು ಸೇವೆ ಮಾಡಿ ಭಾರಿ ಪ್ರತಿಭಟನೆ ನಡೆಸಿದರು.
ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಹಸಿಲ್ದಾರ ಕಚೇರಿವರೆಗೆ ಅರೆಬೆತ್ತಲೆ ಮೆರವಣಿಗೆ ಮಾಡಿ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಭಾರಿ ಪ್ರತಿಬಟನೆ ಮಾಡಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ದಲಿತ ಮುಖಂಡ ಸತೀಶ ಹರಿಜನ ಒಳಮೀಸಲಾತಿಯನ್ನು ಜಾರಿ ಮಾಡುತ್ತೇವೆಂದು ಕುಂಟು ನೆಪ ಹೆಳುತ್ತಾ ಬಂದಿದ್ದಾರೆ, ಇನ್ನೆನು ಜಾರಿಯಾಗುವ ಸಂದರ್ಭದಲ್ಲಿ ನಮ್ಮ ಬಕಗೈ ಸಮುದಾಯದವರು ವಿರೋದ ಮಾಡಿದರು,ಕೂಡಲೇ ಜಾರಿ ಮಾಡದೇ ಇದ್ದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಮಾದಿಗರು ಕುಟುಂಬ ಸಮೇತ ಅಸಹಕಾರ ಚಳವಳಿಯನ್ನು ಮಾಡುತ್ತೇವೆ ಎಂದು ಎಚ್ಚರಿಸಿದರು.
ಇನ್ನೊರ್ವ ದಲಿತ ಮುಖಂಡ ಈಶ್ವರ ಗುಡಜ ಇವರು ಕಾಂಗ್ರೇಸ್ ಸರಕಾರ ದಲಿತರ ಪಕ್ಷ ಎಂದು ನಂಬಿಕೆಯಿತ್ತು,ಆದರೆ ಅವರು ಇವತ್ತು ಕಾಂಗ್ರೆಸ್ ಸರಕಾರ ಒಳಮಿಸಲಾತಿ ಜಾರಿಮಾಡದೆ ನಿರಾಸೆ ಮಾಡಿದೆ,ಅದಿವೇಶನದಲ್ಲಿ ಒಳಮಿಸಲಾತಿ ಜಾರಿ ಮಾಡದಿದ್ದರೆ ಮುಂದೆ ಕಾಂಗ್ರೆಸ್ ಸರಕಾರ ರಚನೆ ಆಗದಂತೆ ಮಾಡ್ತೀವಿ ಎಂದು ಎಚ್ಚರಿಸಿದರು.
ಬಳಿಕ ತಹಸಿಲ್ದಾರ ಕಚೇರಿಯ ಆವರಣದಲ್ಲಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿ ತಾಲೂಕಾಡಳಿತ ಮೂಲಕ ಮುಖ್ಯಮಂತ್ರಿಗಳಿಗೆ ಒಳಮಿಸಲಾತಿ ಜಾರಿ ಮಾಡುವಂತೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗೋಕಾಕ ದಲಿತ ಮುಖಂಡರಾದ ಬಸವರಾಜ ಆರೆನ್ನವರ, ಗೋವಿಂದ ಕಳ್ಳಿಮನಿ,ಬಾಳೇಶ ಸಂತವ್ವಗೋಳ, ಈಶ್ವರ ಗುಡಜ, ಬಸು ಮೇಸ್ತ್ರಿ,ರವಿ ಕಡಕೋಳ,ಮಂಜುಳಾ ರಾಮಗಾನಟ್ಟಿ ಸೇರಿದಂತೆ ಗೋಕಾಕ ತಾಲೂಕಿನ ನೂರಾರು ಮಾದಿಗ ಸಮಾಜದ ಯುವಕರು,ಹಿರಿಯರು, ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮನೋಹರ ಮೇಗೇರಿ




