Ad imageAd image

 ದೈವಕ್ಕಿಂತ ಯಾರೂ ದೊಡ್ಡವರಲ್ಲ, : ಶಾಸಕ ರಮೇಶ ಜಾರಕಿಹೋಳಿ

Bharath Vaibhav
 ದೈವಕ್ಕಿಂತ ಯಾರೂ ದೊಡ್ಡವರಲ್ಲ, : ಶಾಸಕ ರಮೇಶ ಜಾರಕಿಹೋಳಿ
WhatsApp Group Join Now
Telegram Group Join Now

ಗೋಕಾಕ: ತಾಲೂಕಿನ ಕೊಣ್ಣೂರ ಗ್ರಾಮ ದೇವತೆಯ ಜಾತ್ರೆಯ ಬಗ್ಗೆ ಗೊಂದಲ ಉಂಟಾಗಿ ಮೂರು ಬಾರಿ ಸಭೆ ಕರೆದರು ಸಹ ಜಾತ್ರೆಯಲ್ಲಿ ಹೊನ್ನಾಟ ಮತ್ತು ರಥೋತ್ಸವದ ಬಗ್ಗೆ ಹಲವು ಸ್ಥಳಿಯರು ಒಪ್ಪದೆ ಒಮ್ಮತ ಸಿಗದೆ ಗೊಂದಲಕ್ಕಿಡಾಗಿತ್ತು.

 

ಅದರ ಹಿನ್ನೆ ಲೆಯಲ್ಲಿ ಇವತ್ತು ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ಸರ್ವ ಸಮಾಜದವರನ್ನು ಒಗ್ಗಟ್ಟಾಗಿಸಿ ಮುಂಬರುವ ಗ್ರಾಮದೇವತೆಯ ಜಾತ್ರೆ ನಿಮಿತ್ಯ ಮರಡಿಮಠದ ಮ,ಘ,ಚ, ಶ್ರೀ ಪವಾಡೇಶ್ವರ ಶ್ರೀಗಳ ಸಾನಿದ್ಯದಲ್ಲಿ ಗೋಕಾಕ ಶಾಸಕ ರಮೇಶ ಜಾರಕಿಹೋಳಿಯವರು ಕೊಣ್ಣೂರಿನ ಶ್ರೀ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಜಾತ್ರಾ ದಿನಾಂಕ ಮತ್ತು ಪತ್ರಿಕಾ ಬಿಡುಗಡೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಸ್ಥಳಿಯ ಮುಖಂಡರಿಂದ ಸನ್ಮಾನ ಸ್ವೀಕರಿಸಿ ಶಾಸಕ ರಮೇಶ ಜಾರಕಿಹೋಳಿಯವರು ಮಾತನಾಡಿ ಗೋಕಾಕ ಜಾತ್ರೆಯಂತೆ ಕೊಣ್ಣೂರ ಗ್ರಾಮದೇವತೆ ಜಾತ್ರೆ ಶಾಂತಿ ರೀತಿಯಲ್ಲಿ ಭಕ್ತಿಯಿಂದ ಯಾವುದೆ ಅಹಿತಕರ ಘಟನೆ ನಡೆಯದಂತೆ ಹಿರಿಯರ ಜೊತೆ ಚರ್ಚಿಸಿ ಅವರ ಮಾರ್ಗದರ್ಶನದಲ್ಲಿ ನಡೆಸಬೇಕೆಂದರು,

ಇನ್ನು ಗೋಕಾಕ ಜಾತ್ರೆ ನಮ್ಮಿಂದಲೆ ಆಗಿದೆ ಅಂದರೆ ತಪ್ಪು ಯಾಕೆಂದರೆ ಯಾರು ಎಷ್ಟೆ ದೊಡ್ಡವರಾಗಿದ್ದರು ದೈವಕ್ಕಿಂತ ಯಾರು ದೊಡ್ಡವರಲ್ಲ ನಾನು ಜಾತ್ರಾ ಕಮೀಟಿಯ ಸದಸ್ಯನಷ್ಟೆ ,ಗೋಕಾಕ ಜಾತ್ರೆ ಆಗಿದ್ದು ಎಲ್ಲರೂ ಕೈ ಜೋಡಿಸಿ ಸಹಕಾರ ನೀಡಿದ್ದರಿಂದ ಅದ್ದೂರಿಯಾಗಿ ಜರುಗಿತು,

ಅದಕ್ಕಾಗಿ ತಾವುಗಳು ಎಲ್ಲರೂ ಒಟ್ಟಾಗಿ ಒಗ್ಗಟ್ಟಾಗಿ ಎಲ್ಲ ಸಮಾಜದವರನ್ನು ಗಣನೆಗೆ ತೆಗೆದುಕೊಂಡು ಮಿತವಾಗಿ ಖರ್ಚು ಮಾಡಿ ಕೆಮಿಕಲ್ ಬಂಢಾರ ಹಾರಿಸದಂತೆ ನೋಡಿಕೊಳ್ಳಬೇಕು.
ಅಂತವರು ಕಂಡು ಬಂದಲ್ಲಿ ಪೋಲಿಸರಿಗೆ ಪ್ರಿ ಹ್ಯಾಂಡ ಕೊಡಬೇಕು ಎಂದರು.

ಇನ್ನು ಎರಡು ಮೂರು ಬಾರಿ ಜಾತ್ರೆಯ ಬಗ್ಗೆ ಸಭೆ ಕರೆದು ಚರ್ಚಿಸಿ ಪ್ರತಿ ಸಮಾಜ,
ವಾರ್ಡುಗಳಿಗೆ ತೆರಳಿ ಅವರ ವಿಚಾರ ಕೇಳಿ ಅದ್ದೂರಿಯಾಗಿ ಜಾತ್ರೆ ಮಾಡಲು ತಿಳಿಸಿ ಸ್ಥಳಿಯ ಮುಖಂಡರೋಡನೆ ಜಾತ್ರೆಯ ಪತ್ರಿಕೆ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಸ್ಥಳಿಯ ಮುಖಂಡರಾದ ಶಿವಾನಂದ ಗಣಾಚಾರಿ,ಪುರಸಭೆ ಸದಸ್ಯರಾದ ಪ್ರಕಾಶ ಕರನಿಂಗ, ಮುಖ್ಯಾಧಿಕಾರಿ ಶಿವಾನಂದ ಹೀರೆಮಠ ಇವರು ಜಾತ್ರೆಗೆ ಬೇಕಾಗುವ ಸೌಲಭ್ಯಗಳನ್ನು ಪುರಸಭೆಯ ವತಿಯಿಂದ ಒದಗಿಸಿ ಕೊಡುತ್ತೇವೆಂದು ಭರವಸೆ ನೀಡಿದರು.

ಇವತ್ತಿನ ಕೊಣ್ಣೂರ ಗ್ರಾಮದೇವತೆಯ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಪುರಸಭೆಯ ಅದ್ಯಕ್ಷ ವಿನೋದ ಕರನಿಂಗ,ಗೋಕಾಕ ತಹಸಿಲ್ದಾರ ಮೊಹನ‌ ಬಸ್ಮೆ, ಸಿಪಿಆಯ್ ಆರ್, ಸುರೇಶಬಾಬು,ಪಿ,ಎಸ್,ಆಯ್, ಕೆ,ವಾಲಿಕರ, ತಾಲೂಕಾ ಮಟ್ಟದ ಅಧಿಕಾರಿಗಳಾದ ಡಾ: ಅಂಟಿನ್, ಹೆಸ್ಕಾಂ ಅಧಿಕಾರಿ ಬಾಗಡಿ, ತಾಲೂಕಾ ವೈದ್ಯಾದಿಕಾರಿ ಮುತ್ತಪ್ಪ ಕೊಪ್ಪದ ಸೇರಿದಂತೆ ನೂರಾರು ಜನ ಬಾಗಿಯಾಗಿದ್ದರು, ಇನ್ನು ನ್ಯಾಯವಾದಿ ರಮೇಶ ಈರನಟ್ಟಿ ಸ್ವಾಗತಿಸಿ ವಂದಿಸಿದರು.

ಮನೋಹರ ಮೇಗೇರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!