ಸಿಂಧನೂರು : ಮಾ.22 ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಬುದ್ಧ ವಿಹಾರದಲ್ಲಿ ನಡೆಯುವ ಪರಿಸರ ಅಧ್ಯಯನ ಶಿಬಿರದಲ್ಲಿ ಕೊಪ್ಪಳ ಬಲ್ಡೋಟ್ ಎಂ ಎಸ್ ಪಿ ಎಲ್ ಕಾರ್ಖಾನೆಯ ಹೊಗೆ ಬೂದಿಯಿಂದಾಗಿ ಬಾದಿತ ಅನಾರೋಗ್ಯ ಪೀಡಿತ 20 ಗ್ರಾಮಗಳ ಯುವಕರು ಮತ್ತು ವಿದ್ಯಾರ್ಥಿಗಳು ಕೊಪ್ಪಳ ಜಿಲ್ಲೆಯ ಹಿತಾಸಕ್ತಿಯುಳ್ಳ ಜನರು ಸಂಘಟನೆಯ ಮುಖಂಡರು ಭಾಗವಹಿಸಲು ಕೊಪ್ಪಳ ಜಿಲ್ಲಾ ಬಚಾವೋ ಅಂದೋಲನ ಸಮಿತಿಯಿಂದ 23 ಮತ್ತು 24 ಮಾರ್ಚ್ 2025 ರಂದು ತಾವರಗೇರ ಬುದ್ಧ ವಿಹಾರದಲ್ಲಿ ನಡೆಯುವ ಪರಿಸರ ಅಧ್ಯಯನ ಶಿಬಿರದಲ್ಲಿ ಪಾಲ್ಗೊಳ್ಳಲು ಎಸ್ ಆರ್. ಹಿರೇಮಠ ಪರಿಸರ ಹೋರಾಟಗಾರರು ಹಾಗೂ ಅಲ್ಲಮಪ್ರಭು ಬೆಟ್ಟದೂರು ಕೊಪ್ಪಳ ಜಿಲ್ಲಾ ಅಂದೋಲನ ಸಮಿತಿ ಮುಖಂಡರು ಹಾಗೂ ಇನ್ನಿತರ ಬುದ್ಧಿಜೀವಿಗಳು ಭಾಗವಹಿಸಲಿದ್ದಾರೆ ಎಂದು ಡಿ ಎಚ್, ಪೂಜಾರ ಕೊಪ್ಪಳ ಜಿಲ್ಲಾ ಬಚಾವೋ ಅಂದೋಲನ ಸಮಿತಿ ಮುಖಂಡರು ಬಲ್ಡೋಟ್ ಕಾರ್ಖಾನೆ ಇಂದ ಬಾದಿತ ಗ್ರಾಮಗಳ ಜನತೆಗೆ ಕರೆ ಕೊಟ್ಟಿದ್ದಾರೆ,
ವರದಿ : ಬಸವರಾಜ ಬುಕ್ಕನಹಟ್ಟಿ.