ನವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ 295 ಸ್ಥಾನಗಳಲ್ಲಿ ಗೆಲ್ಲುವುದು ಬಹುತೇಕ ಖಚಿತವಾಗಿದೆ. ಆದರೆ ಈ ಮಧ್ಯೆ INDIA ಮೈತ್ರಿಕೂಟ NDA ಮೈತ್ರಿಕೂಟದಲ್ಲಿರುವ ಪಕ್ಷಗಳನ್ನು ತಮ್ಮತ್ತ ಸೆಳೆಯಲು ಕಸರತ್ತು ನಡೆಸುತ್ತಿವೆ.
ಇದಕ್ಕಾಗಿ ಜೆಡಿಯು ಪಕ್ಷದ ಮುಖ್ಯಸ್ಥ ನಿತೀಶ್ ಕುಮಾರ್ ಹಾಗೂ ಟಿಡಿಪಿ ನೇತೃತ್ವದ ಚಂದ್ರಬಾಬು ನಾಯ್ಡುಗೆ ಬಿಗ್ ಆಫರ್ ಕೊಟ್ಟಿದ್ದಾರೆ.
ಇಂಡಿಯಾ ಮೈತ್ರಿಕೂಟದ ಜೊತೆ ಬಂದರೆ ನಿತೀಶ್ ಕುಮಾರ್ ರನ್ನು ಉಪ ಪ್ರಧಾನಿ ಹಾಗೂ ಆಂಧ್ರಪ್ರದೇಶಕ್ಕೆ ಸಿಎಂ ಆಗಲಿರುವ ಚಂದ್ರಬಾಬು ನಾಯ್ಡುಗೆ ಆಂಧ್ರಕ್ಕೆ ರಾಜ್ಯ ವಿಶೇಷ ಸ್ಥಾನಮಾನ ನೀಡುವ ಆಫರ್ ಅವರನ್ನು ಇಂಡಿಯಾ ಮೈತ್ರಿಕೂಟ ಕೊಟ್ಟಿದೆ. ಈ ಮೂಲಕ ಕೇಂದ್ರದಲ್ಲಿ ಬಿಜೆಪಿಯನ್ನು ಹೊರಗಿಡಲು ಇಂಡಿಯಾ ಮೈತ್ರಿಕೂಟ ಪ್ರಯತ್ನಿಸುತ್ತಿದೆ.
ಲೋಕಸಭೆಗೆ 272 ಸ್ಥಾನಗಳು ಸರಳ ಬಹುಮತವಾಗಿದ್ದು ಎನ್ಡಿಎ ಮೈತ್ರಕೂಟ 296 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನು 228 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವ ಇಂಡಿಯಾ ಮೈತ್ರಿಕೂಟಕ್ಕೆ ಸರಳ ಬಹುಮತಕ್ಕೆ ಇನ್ನು 44 ಸ್ಥಾನಗಳು ಬೇಕಿರುವುದರಿಂದ ಸ್ವತಂತ್ರ್ಯವಾಗಿ ನಿಂತು ಗೆದ್ದಿರುವ ಅಭ್ಯರ್ಥಿಗಳನ್ನು ಹಾಗೂ ಎನ್ ಡಿಎ ಮೈತ್ರಿಕೂಟದಲ್ಲಿರುವ ಅಭ್ಯರ್ಥಿಗಳನ್ನು ತಮ್ಮತ್ತ ಸೆಳೆಯಲು ಕರಸತ್ತು ನಡೆಸುತ್ತಿದೆ.