ಕಿತ್ತೂರು: ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಚುನಾವಣೆ ಕಾವು ದಿನೇ ದಿನೇ ಜೋರಾಗುತ್ತಿದ್ದು, ಬರುವ 28 ರಂದು ಚುನಾವಣೆ ನಡೆಯಲಿದೆ. ಈ ಭಾರಿ ಮಲಪ್ರಭಾ ಸಕ್ಕರೆ ಕಾರ್ಖಾನೆಯ ಚುನಾವಣೆಗೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಈ ಭಾರಿ ಕರ್ನಾಟಕ ರಾಜ್ಯ ರೈತ ಸಂಘಗಳ ಕಬ್ಬುಬೆಳೆಗಾರರ ಹಾಗೂ ಕಾರ್ಖಾನೆ ಅಭಿವೃದ್ಧಿ ಪ್ಯಾನಲ್ ಅನ್ನು ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷರಾಗಿದ್ದ ದಿ. ರುದ್ರಪ್ಪ ಮೊಕಾಶಿಯವರ ಸುಪುತ್ರ ಬಸವರಾಜು ರುದ್ರಪ್ಪ ಮೊಕಾಶಿ ನೇತೃತ್ವದಲ್ಲಿ ಸ್ಪರ್ಧೆಗೆ ಇಳಿದಿದ್ದು, ಇಂದು ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ನಡೆಸಿದ ಸಂವಾದದಲ್ಲಿ ಮಾತನಾಡಿದ ರೈತಸಂಘಗಳ ಕಬ್ಬುಬೆಳೆಗಾರರ ಹಾಗೂ ಕಾರ್ಖಾನೆ ಅಭಿವೃದ್ಧಿ ಪ್ಯಾನಲ್ ನಿಂದ ಈ ಭಾರಿ ಮಹಿಳಾ ಅಭ್ಯರ್ಥಿಯಾಗಿರುವ ಹಾಲಿ ನಿರ್ದೇಶಕಿಯು ಆದ ಮೀನಾಕ್ಷಿ ನೆಲಗಳಿ ಅವರು ತಮ್ಮ ಪ್ಯಾನಲ್ ಸ್ಪರ್ಧೆ, ಕಾರ್ಖಾನೆಯ ಪ್ರಸ್ತುತ ಪರಿಸ್ಥಿತಿ ಹಾಗೂ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಹಾಕಿಕೊಂಡ ಕಾರ್ಯತಂತ್ರಗಳ ಬಗ್ಗೆ ಮುಕ್ತವಾಗಿ ಸಂವಾದ ಮಾಡಿದ್ದಾರೆ.
ವರದಿ: ಬಸವರಾಜು




