ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ಅಳವಡಿಕೆ ಮತ್ತು ಡೇಟಾ ಬಳಕೆಯಲ್ಲಿನ ಬೆಳವಣಿಗೆಯು ಭಾರತೀಯ ಟೆಲಿಕಾಂ ಕಂಪನಿಗಳಿಗೆ ಸರಾಸರಿ ಪ್ರತಿ ಬಳಕೆದಾರ ಆದಾಯದ (ARPU) ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುತ್ತಿದೆ.
ಇದರ ಲಾಭ ಪಡೆಯಲು ಟೆಲ್ಕೋಗಳು ಗ್ರಾಮೀಣ ಸಂಪರ್ಕವನ್ನು ಬಲಪಡಿಸುತ್ತಿವೆ. ಇದರಿಂದ ಡೇಟಾ ಚಂದಾದಾರರ ನೆಲೆ ಮತ್ತು ಆದಾಯವನ್ನು ವಿಸ್ತರಿಸಲು ಸಹಾಯವಾಗಲಿದೆ. ಇತ್ತೀಚಿನ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
ಕ್ರಿಸಿಲ್ ರೇಟಿಂಗ್ಸ್‌ನ ವರದಿಯ ಪ್ರಕಾರ, 2024ರ ಡಿಸೆಂಬರ್ 31ಕ್ಕೆ ಕೊನೆಗೊಳ್ಳುವ ನಾಲ್ಕು ಕ್ಯಾಲೆಂಡರ್ ವರ್ಷಗಳಲ್ಲಿ ಗ್ರಾಮೀಣ ಭಾರತದಲ್ಲಿ ಇಂಟರ್ನೆಟ್ ಬಳಕೆ ಶೇಕಡಾ 59ರಿಂದ 78ಕ್ಕೆ ಏರಿಕೆಯಾಗಿದೆ. ಈ ಬೆಳವಣಿಗೆಯ ಮೂಲಕ ನಗರ ಪ್ರದೇಶಗಳನ್ನು ಹಿಂದಿಕ್ಕಿದೆ. ನಗರ ಪ್ರದೇಶಗಳಲ್ಲಿ ಇಂಟರ್ನೆಟ್ ಪ್ರವೇಶವು ಶೇಕಡಾ 77ರಿಂದ 90ಕ್ಕೆ ಏರಿಕೆದೆ.
ಆನ್‌ಲೈನ್ ಕಮ್ಯುನಿಕೇಶನ್, ಡಿಜಿಟಲ್ ಪೇಮೆಂಟ್ಸ್ ನಿರಂತರ ಅಳವಡಿಕೆ, ಸಾಮಾಜಿಕ ಮಾಧ್ಯಮ, ಕಂಟೆಂಟ್ ಸ್ಟ್ರೀಮಿಂಗ್ ಸೇವೆಗಳು ಮತ್ತು ಇ-ಕಾಮರ್ಸ್‌ನ ಹೆಚ್ಚುತ್ತಿರುವ ಬಳಕೆಯೊಂದಿಗೆ 2026ರ ಹಣಕಾಸು ವರ್ಷದ ಅಂತ್ಯದ ವೇಳೆಗೆ ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ಬಳಕೆಯು ಶೇ.4-5ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.




