ರಾಯಚೂರು: ತಾಲೂಕಿನ ಮಾಲಿಯಬಾದ್ ಗೋಶಾಲೆ ಗುಡ್ಡದ ಪ್ರದೇಶದಲ್ಲಿ ಅರಣ್ಯ ಇಲಾಖೆ ಅಳವಡಿಸಿದ ಬೋನಿನೊಳಗೆ ಚಿರತೆಯನ್ನು ಸೆರೆ ಹಿಡಿದು ರಾಯಚೂರು ವಲಯದ ಅರಣ್ಯ ಇಲಾಖೆ ಸಿಬ್ಬಂದಿಯು ಯಶಸ್ವಿಯಾಗಿದ್ದಾರೆ.
ವಲಯ ಅರಣ್ಯ ಅಧಿಕಾರಿಗಳಾದ ರಾಜೇಶ್ ನಾಯಕರವರು ಯೋಜನೆ ರೂಪಿಸಿರುವಂತೆ ಎರಡು ಬೋನ್ ಗಳನ್ನು ಅಳವಡಿಸಿ, ಚಿರತೆಯನ್ನು ಯಶಸ್ವಿಯಾಗಿ ಬೋನಿನ ಒಳಗೆ ಬೀಳುವಂತೆ ಉತ್ತಮ ಯೋಜನೆ-ತಂತ್ರಗಳನ್ನು ರೂಪಿಸಲಾಗಿತ್ತು, ಅದರಂತೆಯೇ ಚಿರತೆಯು ಬೋನಿನೊಳಗೆ ಸುಲಭವಾಗಿ ಪ್ರವೇಶಿಸಿ ಸೆರೆಯಾಗಿದೆ, ಮಾಲಿಯಬಾದ್ ಗೋಶಾಲೆ ಗುಡ್ಡದ ಪ್ರದೇಶದಲ್ಲಿ ಇದುವರೆಗೆ 3 ಚಿರತೆಗಳನ್ನು ಅರಣ್ಯ ಅಧಿಕಾರಿಗಳು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ರಾಯಚೂರು ವಲಯ ಅರಣ್ಯ ಅಧಿಕಾರಿಗಳಾದ ರಾಜೇಶ್ ನಾಯಕ ಇವರ ನೇತೃತ್ವದಲ್ಲಿ ಚಿರತೆ ಹಿಡಿಯುವ ತಂಡವನ್ನು ರಚಿಸಲಾಗಿತ್ತು, ರಾಯಚೂರು ವಲಯದ ಚಿರತೆ ಕಾರ್ಯಚರಣೆ ತಂಡದ ಸಿಬ್ಬಂದಿಗಳಾದ ಉಪ ವಲಯ ಅರಣ್ಯ ಅಧಿಕಾರಿಗಳಾದ ಮೌನೇಶ್, ಹುಸೇನ್ ಬಾಷಾ, ಗಸ್ತು ಅರಣ್ಯ ಪಾಲಕರಾದ ಯಲ್ಲಪ್ಪ , ಭೀಮೇಶ್, ವೀರೇಶ್, ಬಾವಸಾಬ್, ಅರಣ್ಯ ವೀಕ್ಷಕರಾದ ಕನಕಪ್ಪ, ದಿನಗೂಲಿ ನೌಕರರಾದ ಸುಗುರೇಶ್, ಶಿವಕುಮಾರ್, ರಮೇಶ್, ಮತ್ತು ವಾಹನ ಚಾಲಕರಾದ ವಿಜಯ್ , ಮೌನೇಶ್ ಆಚಾರಿ ಇವರೆಲ್ಲ ಚಿರತೆಯನ್ನು ಬೋನಿಗೆ ಬೀಳಿಸುವ ಕಾರ್ಯಚರಣೆಯಲ್ಲಿ ಯಶಸ್ವಿಯಾಗಿದ್ದಾರೆ,
ಅರಣ್ಯ ಇಲಾಖೆಯ ಮೇಲಾಧಿಕಾರಿಗಳಾದ ಸುರೇಶ್ ಬಾಬು ಎಸ್ , ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಗೋವಿಂದರಾಜು ಕೆ , ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ರಾಯಚೂರು ಇವರ ಮಾರ್ಗದರ್ಶನದಂತೆ ಚಿರತೆಯನ್ನು ಬೋನಿನೊಳಗೆ ಬೀಳಿಸಿ ಯಶಸ್ವಿ ಚಿರತೆ ಆಪರೇಷನ್ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ್ದಾರೆ.
ವರದಿ: ಗಾರಲದಿನ್ನಿ ವೀರನ ಗೌಡ




