ಗೋಕಾಕ : ವಿಚಾರಣಾಧಿನ ಖೈದಿಗಳಿಗೆ ನೀಡುವ ಆಹಾರದಲ್ಲಿಂದಿಷ್ಟು ಜೈಲಿನ ಸಿಬ್ಬಂದಿಗಳಿಗೂ ನೀಡುತ್ತಿರುವುದು ಗೋಕಾಕ ಸಬ್ ಜೈಲಿನಲ್ಲಿ ಕಂಡು ಬಂದಿದೆ.
ಹೌದು ಗೋಕಾಕ ನಗರದಲ್ಲಿರುವ ಸಬ್ ಜೈಲಿನಲ್ಲಿರುವ ವಿಚಾರಣಾಧಿನ ಮತ್ತು ಶಿಕ್ಷೆಗೆ ಒಳಪಟ್ಟಿರುವ ಖೈದಿಗಳಿಗೆ ಸರಕಾರದಿಂದ ವಾರಕೊಮ್ಮೆ ಖೈದಿಗಳ ಸಂಖ್ಯೆ ಅನುಗುಣವಾಗಿ ತತ್ತಿ ಮತ್ತು ಚಿಕನ್ ನೀಡಲಾಗುತ್ತದೆ.
ಆದರೆ ಗೋಕಾಕದ ಸಬ್ ಜೈಲಿನಲ್ಲಿರುವ ಖೈದಿಗಳಿಗೆ ನೀಡುವ ಚಿಕನನಲ್ಲಿಂದ ಅಲ್ಲಿನ ಸಿಬ್ಬಂದಿಗಳಿಗೂ ಕೂಡ ಚಿಕನ್ ನೀಡುತ್ತೇವೆಂದು ಸಬ್ ಜೈಲಿಗೆ ಚಿಕನ್ ಪೊರೈಸುವ ಬಿಸ್ಮಿಲ್ಲಾ ಚಿಕನ ಸೆಂಟರನಲ್ಲಿ ಕೆಲಸ ಮಾಡುತ್ತಿರುವಾತ ಬಾಯಿ ಬಿಟ್ಟಿದ್ದಾನೆ,
ಪ್ರತಿ ಶುಕ್ರವಾರದಂದು ಗೋಕಾಕ ಸಬ್ ಜೈಲಿನಲ್ಲಿರುವ ವಿಚಾರಣಾಧಿನ ಖೈದಿಗಳಿಗೆ 8 ಕಿಲೊ ಮತ್ತು ಜೈಲಿನ ಸಿಬ್ಬಂದಿಗಳಿಗೆ 5 ಕಿಲೊ ಚಿಕನ್ ಕೊಡುತ್ತೇವೆಂದು ಬಿಸ್ಮಿಲ್ಲಾ ಚಿಕನ ಸೆಂಟರನಿಂದ ತಂದು ಕೊಡುವಾತ ಹೇಳಿದ್ದಾನೆ,
ಅಷ್ಟೆ ಅಲ್ಲ ಇತನು ಕೂಡ ಬಾಲಕನಾಗಿದ್ದು ಇಂತಹವನಿಂದ ಜೈಲಿನ ಅಧಿಕಾರಿ,ಸಿಬ್ಬಂದಿಗಳು ಚಿಕನ್ ತರಿಸಿಕೊಳ್ಳುತ್ತಿರುವುದು ಅಕ್ಷ್ಯಮ ಅಪರಾದವಗಿದೆ, ಈ ರೀತಿ ಖೈದಿಗಳಿಗೆ ನೀಡುವ ಆಹಾರವನ್ನು ಕಸಿದುಕೊಳ್ಳುತ್ತಿರುವುದು ಎಷ್ಟು ಸರಿ,
ಇತ್ತ ಗೋಕಾಕ ಕಾರ್ಮಿಕ ನೀರಿಕ್ಷಕರು ಬಾಲಕನ ಕೈಯಲ್ಲಿ ಜೈಲಿಗೆ ಚಿಕನ್ ಕೊಟ್ಟು ಕಳಿಸುತ್ತಿರುವ ಬಿಸ್ಮಿಲ್ಲಾ ಚಿಕನ್ ಸೆಂಟರ ಮೇಲೆ ಮತ್ತು ಜೈಲ್ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನ ಜನ ಕಾದು ನೋಡುತಿದ್ದಾರೆ…
ವರದಿ : ಮನೋಹರ ಮೇಗೇರಿ