Ad imageAd image

ವಿವಾಹ ನಂತರ ಹೆಣ್ಣಿನ  ಗೌಪ್ಯತೆಯ ಹಕ್ಕು ದುರ್ಬಲಗೊಳ್ಳುವುದಿಲ್ಲ: ಅಲಹಾಬಾದ್ ಹೈಕೋರ್ಟ್

Bharath Vaibhav
ವಿವಾಹ ನಂತರ ಹೆಣ್ಣಿನ  ಗೌಪ್ಯತೆಯ ಹಕ್ಕು ದುರ್ಬಲಗೊಳ್ಳುವುದಿಲ್ಲ: ಅಲಹಾಬಾದ್ ಹೈಕೋರ್ಟ್
WhatsApp Group Join Now
Telegram Group Join Now

ಅಲಹಾಬಾದ್: ವಿವಾಹದಿಂದ ಪತಿಗೆ ಪತ್ನಿ ಮೇಲೆ ಮಾಲೀಕತ್ವ ಅಥವಾ ನಿಯಂತ್ರಣವನ್ನು ನೀಡುವುದಿಲ್ಲ ಅಥವಾ ವಿವಾಹ ನಂತರ ಹೆಣ್ಣಿನ ಸ್ವಾಯತ್ತತೆ ಅಥವಾ ಗೌಪ್ಯತೆಯ ಹಕ್ಕು ದುರ್ಬಲಗೊಳ್ಳುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ಫೇಸ್‌ಬುಕ್‌ನಲ್ಲಿ ತನ್ನ ಪತ್ನಿಯೊಂದಿಗೆ ಆತ್ಮೀಯವಾಗಿರುವ ವಿಡಿಯೊವನ್ನು ಅಪ್‌ಲೋಡ್ ಮಾಡಿದ ಆರೋಪ ಹೊತ್ತಿರುವ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸುವ ಸಂದರ್ಭದಲ್ಲಿ ಅಲಹಾಬಾದ್ ಹೈಕೋರ್ಟ್ ಈ ತೀರ್ಪು ನೀಡಿದೆ.

ತನ್ನ ವಿರುದ್ಧದ ಆರೋಪಪಟ್ಟಿಯನ್ನು ರದ್ದುಗೊಳಿಸುವಂತೆ ಪತಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ವಿನೋದ್ ದಿವಾಕರ್, ಫೇಸ್‌ಬುಕ್‌ನಲ್ಲಿ ಪತ್ನಿ ಜೊತೆ ಖಾಸಗಿಯಾಗಿ ಕಳೆದ ಕ್ಷಣದ ವೀಡಿಯೊವನ್ನು ಅಪ್‌ಲೋಡ್ ಮಾಡುವ ಮೂಲಕ ವೈವಾಹಿಕ ಸಂಬಂಧದ ಪಾವಿತ್ರ್ಯವನ್ನು ಗಂಭೀರವಾಗಿ ಉಲ್ಲಂಘಿಸಿದ್ದಾರೆ. ಪತಿಯ ಮೇಲೆ ಪತ್ನಿ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸವನ್ನು ಗೌರವಿಸಬೇಕು, ಎಂದು ಹೇಳಿದರು.

ಪತ್ನಿಯೊಂದಿಗೆ ಖಾಸಗಿಯಾಗಿ ಕಳೆಯುವ ಕ್ಷಣದ ವಿಡಿಯೊ ಬಹಿರಂಗ ಮಾಡುವ ಕ್ರಿಯೆಯು ಪತಿ ಮತ್ತು ಪತ್ನಿಯ ನಡುವಿನ ಬಾಂಧವ್ಯವನ್ನು ವ್ಯಾಖ್ಯಾನಿಸುವ ಅಂತರ್ಗತ ಗೌಪ್ಯತೆಯ ಉಲ್ಲಂಘನೆಗೆ ಸಮಾನವಾಗಿದೆ. ಈ ನಂಬಿಕೆಯ ಉಲ್ಲಂಘನೆಯು ವೈವಾಹಿಕ ಸಂಬಂಧದ ಅಡಿಪಾಯವನ್ನೇ ಹಾಳು ಮಾಡುತ್ತದೆ ಮತ್ತು ವೈವಾಹಿಕ ಬಂಧದಿಂದ ರಕ್ಷಿಸಲ್ಪಡುವುದಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದರು.

ಪತ್ನಿ ತನ್ನ ಪತಿಯ ಮುಂದುವರಿದ ಭಾಗವಲ್ಲ, ಬದಲಾಗಿ ತನ್ನದೇ ಆದ ಹಕ್ಕುಗಳು, ಆಸೆಗಳು ಮತ್ತು ಸ್ವತಂತ್ರತೆಯನ್ನು ಹೊಂದಿರುವ ವ್ಯಕ್ತಿ. ಅವಳ ದೈಹಿಕ ಸ್ವಾಯತ್ತತೆ ಮತ್ತು ಗೌಪ್ಯತೆಯನ್ನು ಗೌರವಿಸುವುದು ಕೇವಲ ಕಾನೂನು ಬಾಧ್ಯತೆಯಲ್ಲ ನಿಜವಾದ ಸಮಾನ ಸಂಬಂಧವನ್ನು ಬೆಳೆಸುವಲ್ಲಿ ನೈತಿಕ ಕಡ್ಡಾಯವಾಗಿದೆ ಎಂದು ನ್ಯಾಯಾಲಯವು ಹೇಳಿದೆ.

ಮಿರ್ಜಾಪುರ ಜಿಲ್ಲೆಯಲ್ಲಿ ಪ್ರದುಮ್ನ್ ಯಾದವ್ ಎಂಬ ವ್ಯಕ್ತಿಯ ವಿರುದ್ಧ ಅವರ ಪತ್ನಿ ಐಟಿ ಕಾಯ್ದೆಯ ಸೆಕ್ಷನ್ 67 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರದುಮ್ನ್ ಯಾದವ್ ತನ್ನ ಅರಿವಿಲ್ಲದೆ ಮತ್ತು ಒಪ್ಪಿಗೆಯಿಲ್ಲದೆ ತಮ್ಮ ನಡುವೆ ನಡೆದ ಆತ್ಮೀಯ ಸಂಬಂಧದ ಅಶ್ಲೀಲ ವೀಡಿಯೊವನ್ನು ಮೊಬೈಲ್ ನಲ್ಲಿ ವಿಡಿಯೊ ಮಾಡಿ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಲ್ಲದೆ ಹಲವರೊಂದಿಗೆ ವಿಡಿಯೊವನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.

WhatsApp Group Join Now
Telegram Group Join Now
Share This Article
error: Content is protected !!