ಪೀಣ್ಯ ದಾಸರಹಳ್ಳಿ: ವಿಶ್ವಕರ್ಮ ಸಮಾಜವು ಎಲ್ಲಾ ಸಮುದಾಯಗಳ ಪ್ರೀತಿ ವಿಶ್ವಾಸ ನಂಬಿಕೆ ಇಟ್ಟು ಕೊಂಡು ಬಾಳುತ್ತಿರುವ ಯಾವುದಾದರೂ ಸಮಾಜ ಇದ್ದರೆ ಅದು ವಿಶ್ವಕರ್ಮ ಸಮಾಜ ಎಂದರೆ ತಪ್ಪಾಗಲಾರದು ಎಂದು ವಿರಾಟ್ ವಿಶ್ವ ಗ್ಲೋಬಲ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಮಾಳಿಂಗಾಚಾರ್ ಹೇಳಿದರು.
ವಿರಾಟ್ ವಿಶ್ವ ಗ್ಲೋಬಲ್ ಫೌಂಡೇಶನ್ ಸಂಸ್ಥೆಯ ಪದಾಧಿಕಾರಿಗಳ ನೇತೃತ್ವದಲ್ಲಿ ಬೆಂಗಳೂರು ನಗರ ಪ್ರತಿಷ್ಠಿತ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್ನಲ್ಲಿ ಆಯೋಜಿಸಿದ್ದ ಸಂಸ್ಥೆಯ
೨ನೇ ವಾರ್ಷಿಕೋತ್ಸವ “ಯುವ ವೈಭವ” ಮತ್ತು ಎಸ್ಎಸ್ಎಲ್ಸಿ, ಪಿ. ಯು.ಸಿ ಮಕ್ಕಳಿಗೆ ವಿದ್ಯಾರ್ಥಿ ವೇತನ ಪ್ರತ್ಯೇಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಗೌರವ ಸನ್ಮಾನ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಮಾಳಿಗಾಚಾರ್ ಮಾತನಾಡಿದರು.
ಈಗಿನ ಕಂಪ್ಯೂಟರ್ ಯುಗದಲ್ಲಿ ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದೆ, ಐಪಿಎಸ್, ಐಎಎಸ್ ಮತ್ತು ಕೆಎಎಸ್ ಅಧಿಕಾರಿ ಆಗುವುದು ಸಲಭ ಎಕೆಂದರೆ ಇಂಗ್ಲಿಷ್ ಓದಿದವರು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಬಹುದು ಎಂಬ ವಿಚಾರ ತೆಗೆದು ಹಾಕಿರಿ ಕನ್ನಡದಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಸುಲಭವಾಗಿ ಪರೀಕ್ಷೆ ಬರೆಯ ಬಹುದು ೫,೬ ತರಗತಿ ಪುಸ್ತಕಗಳು ಹಿಡಿದು ಓದುವ ಅಭ್ಯಾಸ ಮಾಡಿ ನಿಮ್ಮ ಗುರಿ, ಛಲ ಮತ್ತು ಶ್ರಮ ಇದ್ದಾಗ ಮಾತ್ರ ಮನುಷ್ಯನ ಉಜ್ವಲ ಭವಿಷ್ಯಕ್ಕೆ ನಾಂದಿ ಆಗುತ್ತದೆ ಎಂದು ಡಾ. ವೆಂಕಟೇಶ್ ಮುಖ್ಯ ಮಂತ್ರಿಗಳ ಆಪ್ತ ಕಾರ್ಯದರ್ಶಿ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರಾದವರು ನಾವುಗಳು ಯಾವುದರಲ್ಲೂ ಕಡಿಮೆ ಇಲ್ಲಾ ಎಂದು ವಿಜಯ ರವಿಕುಮಾರ್ ನಿರ್ದೇಶಕಿ ಆಡಳಿತ ಶಾಲಾ ಶಿಕ್ಷಣ ಇಲಾಖೆ ಇವರು ಮಹಿಳೆಯರಿಗೆ ಗೌರವಿಸಿ ಮಾತನಾಡಿದರು.
ಹರಿಶೇಖರ್ ನ್ ಪೊಲೀಸ್ ಮಹಾನಿರ್ದೇಶಕರು, ಅಂತಾರಾಷ್ಟ್ರೀಯ ಹಾಕಿ ಆಟಗಾರ ಸುನೀಲ್ ಆಚಾರ್ಯ, ಶ್ರೀ ಷಾ ಅರೆಯೂರು ಅಧ್ಯಕ್ಷರು ಬ್ರಾಹ್ಮಣ ವಿದ್ಯಾ ಪೀಠ ಉಡುಪಿ ಇವರುಗಳು ಮಾತನಾಡಿದರು.
ಈ ಸಂದರ್ಭದಲ್ಲಿ ಕೆ.ಆರ್.ಬಡಿಗೇರ್ ನಿವೃತ್ತ ಕಾರ್ಯದರ್ಶಿ ಕರ್ನಾಟಕ ಸರ್ಕಾರ, ವಿರಾಟ್ ವಿಶ್ವ ಗ್ಲೋಬಲ್ ಫೌಂಡೇಷನ್ ಮತ್ತು ಕರ್ನಾಟಕ ರಾಜ್ಯ ವಿಶ್ವಕರ್ಮ ಎಜುಕೇಷನ್ ಟ್ರಸ್ಟ್ ಪದಾಧಿಕಾರಿಗಳು ಸದಸ್ಯರು ಮತ್ತು ವಿವಿಧ ಜಿಲ್ಲಾ ತಾಲೂಕಿನ ಪ್ರತಿನಿಧಿಗಳು ವಿದ್ಯಾರ್ಥಿಗಳು ಪೋಷಕರು ಸಮಸ್ತ ಸಮಾಜದ ಮುಖಂಡರು ಮಹಿಳೆಯರು ಮುಂತಾದವರು ಇದ್ದರು.
(ವರದಿ: ಅಯ್ಯಣ್ಣ ಮಾಸ್ಟರ್