
ಬೆಂಗಳೂರು: ವಿಜಯದಶಮಿಯ ನವರಾತ್ರಿ ಅಂಗವಾಗಿ 9 ಅವತಾರ ಪೂಜಾಗಳು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರವರೆಗೆ ತಿಪ್ಪೇನಹಳ್ಳಿಯ ಶ್ರೀ ಕ್ಷೇತ್ರದ ಶ್ರೀ ಮುನೇಶ್ವರ ಸ್ವಾಮಿ ಹಾಗೂ ಆದಿಶಕ್ತಿ ಅಮ್ಮನವರ ದೇವಸ್ಥಾನದಲ್ಲಿ ನವರಾತ್ರಿ ಪೂಜಾ ಮಹೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು ವಿವಿಧ ಅಲಂಕಾರ ಉತ್ಸವ ಅನ್ನದಾನಾದಿ ಸೇವೆಗಳನ್ನು ಏರ್ಪಡಿಸಲಾಗಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು’, ಎಂದು ತಿಪ್ಪೇನಹಳ್ಳಿಯ ಶ್ರೀ ಮುನೇಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಧರ್ಮದರ್ಶಿ ಗಂಗರಾಜು ಹೇಳಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರದ ತಿಪ್ಪೇನಳ್ಳಿ ಶ್ರೀ ಕ್ಷೇತ್ರ ಶ್ರೀ ಮುನೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಸೆಪ್ಟೆಂಬರ್ 22 ರಿಂದ ಶ್ರೀ ಮುನೇಶ್ವರ ಆದಿಶಕ್ತಿ, ಮಹಾಗಣಪತಿ ಶ್ರೀ ಭಕ್ತಾಂಜನೇಯ ಹಾಗೂ ನಾಗದೇವತೆ ಸಪತ್ನಿ ಸಮೇತ ನವಗ್ರಹ ದೇವಾಲಯದಲ್ಲಿ ನವರಾತ್ರಿಯ ವಿಶೇಷ ಅಲಂಕಾರಗಳನ್ನು ಹಮ್ಮಿಕೊಳ್ಳಲಾಗಿದ್ದು ನವರಾತ್ರಿ ಅಂಗವಾಗಿ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರ ವರೆಗೆ ಸೋಮವಾರ ಅರಿಶಿಣ ಕುಂಕುಮ ಅರ್ಚನೆ ಹಾಗೂ ವಿವಿಧ ವಿಶೇಷ ಅಲಂಕಾರ ಪೂಜಾ ಪುನಸ್ಕಾರಗಳು ಮಹಾಮಂಗಳಾರತಿ ಪ್ರತಿದಿನ ದೇವತಾ ಕಾರ್ಯ ಜರುಗಲಿದ್ದು.
ಅಕ್ಟೋಬರ್ 1ರಂದು ದುರ್ಗಾ ಅಲಂಕಾರ ದೊಂದಿಗೆ ಆಯುಧ ಪೂಜೆ ಮತ್ತು ವಿಜಯ ದಶಮಿ ದಿನದಂದು ಬನ್ನಿ ಮರಕ್ಕೆ ತೆರಳಿ ಕುಂಕುಮ ಅರಿಷಿಣ ಅಕ್ಷತೆ ಮಹಾಮಂಗಳಾರತಿ ಪೂಜಾ ಸಲ್ಲಿಸಿ ಬನ್ನಿ ಮುರಿಯುವ ಏರ್ಪಡಿಸಲಾಗಿದೆ’, ಎಂದು ತಿಳಿಸಿದರು.
ಕಾರ್ಯಕ್ರಮವನ್ನು ದಿವಂಗತ ಗಂಗರಮಯ್ಯ ಹಾಗೂ ಲಕ್ಷ್ಮೀದೇವಮ್ಮ ಕುಟುಂಬಸ್ಥರು ಹಾಗೂ ತಿಪ್ಪೇನಹಳ್ಳಿಯ ಅಕ್ಕಪಕ್ಕದ ಬಡಾವಣೆಯ ನಿವಾಸಿಗಳು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ವಿಜೃಂಭಣೆಯಿಂದ ಆಚರಿಸಲು ಸಕಲ ವ್ಯವಸ್ಥೆ ಮಾಡಲಾಗುತ್ತಿದೆ. ಅಕ್ಟೋಬರ್ 2ರಂದು ಗುರುವಾರದಂದು ರಾಜ ಬೀದಿಗಳಲ್ಲಿ ತಮಟೆ ವಾದ್ಯ ಸಮೇತರಾಗಿ ಶ್ರೀ ಮುನೇಶ್ವರ ಸ್ವಾಮಿ ಹಾಗೂ ಶ್ರೀ ಆದಿಶಕ್ತಿ ಅಮ್ಮನವರ ಉತ್ಸವ ನೆರವೇರಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಪ್ರಯುಕ್ತ ಪ್ರತಿದಿನ ಸಂಜೆ 6:00ಗೆ ಹೋಮ ದುರ್ಗ ಪಾರಾಯಣ 7:30ಕ್ಕೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿದೆ. ಅನ್ನದಾನ ಹಾಗೂ ಅಲಂಕಾರ ಸೇವೆ ಮಾಡಲಿಚ್ಛಿಸುವವರು ಅರ್ಚಕರಾದ ಹರೀಶ್ ಕುಲಕರ್ಣಿ ಹಾಗೂ ಗಣೇಶ್ ಮತ್ತು ತಂಡದವರನ್ನು ಸಂಪರ್ಕಿಸಲು ಕೋರಲಾಗಿದೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ. 9901116102, ಜಿ. ಗಂಗರಾಜು, ಅಧ್ಯಕ್ಷರು ಹಾಗೂ ಧರ್ಮದರ್ಶಿಗಳು
ಶ್ರೀ ಮುನೇಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟ್ ,ಶ್ರೀ ಕ್ಷೇತ್ರ, ತಿಪ್ಪೇನಹಳ್ಳಿ.ಬೆಂಗಳೂರು.
ವರದಿ: ಅಯ್ಯಣ್ಣ ಮಾಸ್ಟರ್




