ನವದೆಹಲಿ: ಕ್ರಿಕೆಟ್ ನಲ್ಲಿ ಕೆಲವು 97, 99 ರನ್ ಗಳು ಶತಕಕ್ಕಿಂತ ಮಹತ್ವದಾಗಿರುತ್ತವೆ ಎಂದು ಪಂಜಾಬ್ ಕಿಂಗ್ಸ್ ತಂಡದ ಉಪ ಒಡತಿ ಪ್ರೀತಿ ಜಿಂಟಾ ಹೇಳಿದ್ದಾರೆ.
ಗುಜರಾತ್ ಟೈಟನ್ಸ್ ವಿರುದ್ಧ ಶ್ರೇಯಸ್ ಅಯ್ಯರ 97 ರನ್ ಗಳಿಸಿ ಅಜೇಯರಾಗಿ ಉಳಿದ ಬಗ್ಗೆ ಪ್ರತಿಕ್ರಯಿಸಿ ಅವರು ಮಾತನಾಡಿದರು. ತಂಡಕ್ಕಾಗಿ ಆಡಿದ ರನ್ ಗಳು ಶತಕಕ್ಕಿಂತ ಮೌಲ್ಯಯುತವಾಗಿರುತ್ತವೆ. ತಂಡ ಗೆಲ್ಲುವುದು ಮುಖ್ಯ. ಶತಕ ಮುಖ್ಯವಲ್ಲ ಎಂದು ಅವರು ಹೇಳಿದ್ದಾರೆ. ಅಷ್ಟಕ್ಕೂ ಶ್ರೇಯಸ್ ಶತಕ ನೋಡದೇ ಯುವ ಆಟಗಾರನನ್ನು ಹುರಿದುಂಬಿಸಿದ್ದಕ್ಕೆ ಜಿಂಟಾ ಅವರು ಶ್ರೇಯಸ್ ಗೆ ಸೆಲ್ಯೂಟ್ ( ಗ್ರೇಟ್) ಎಂದಿದ್ದಾರಂತೆ.
ಅಂದು ಟೈಟನ್ಸ್ ವಿರುದ್ಧ ಕೊನೆಯ ೋವರ್ ಆರಂಭವಾದಾಗ ಶ್ರೇಯಸ್ ಗೆ ಶತಕ ಪೂರೈಸಲು ಕೇವಲ 3 ರನ್ ಗಳ ಅಗತ್ಯವಿತ್ತು. ಆಗ ಶ್ರೇಯಸ್ ಅವರು ಯುವ ಆಟಗಾರನಿಗೆ ನನ್ನ ಶತಕದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ. ನಿನ್ನ ಾಕ್ರಮಣಕಾರಿ ಆಟ ಮುಂದುವರೆಸು ಎಂದಿದ್ದರು ಎಂದು ಆ ಯುವ ಆಟಗಾರ ಪಂದ್ಯದ ನಂತರ ಹೇಳಿದ್ದರು.