Ad imageAd image

ಸದ್ದಿಲ್ಲದೇ ಎಚ್‌ .ಡಿ. ದೇವೇಗೌಡರನ್ನ ಭೇಟಿಯಾದ ಸತೀಶ್ ಜಾರಕಿಹೊಳಿ 

Bharath Vaibhav
ಸದ್ದಿಲ್ಲದೇ ಎಚ್‌ .ಡಿ. ದೇವೇಗೌಡರನ್ನ ಭೇಟಿಯಾದ ಸತೀಶ್ ಜಾರಕಿಹೊಳಿ 
WhatsApp Group Join Now
Telegram Group Join Now

ನವದೆಹಲಿ : ರಾಜ್ಯ ರಾಜಕಾರಣದಲ್ಲಿ ಹಲವು ವಿವಾದಗಳು ನಡೆಯುತ್ತಿರುವಂತೆಯೇ ಸಚಿವ ಸತೀಶ್‌ ಜಾರಕಿಹೊಳಿ , ಜೆಡಿಎಸ್‌ ವರಿಷ್ಠರಾದ ಎಚ್‌ .ಡಿ. ದೇವೇಗೌಡ ಮತ್ತು ಎಚ್‌ .ಡಿ. ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಮಂಗಳವಾರ ರಾತ್ರಿ ಡಿನ್ನರ್‌ ನೆಪದಲ್ಲಿ ನವದೆಹಲಿಯಲ್ಲಿ ಈ ಭೇಟಿ ನಡೆದಿದೆ.

ಕಳೆದ ಕೆಲವು ದಿನಗಳಿಂದ ಮುಖ್ಯಮಂತ್ರಿ ಸ್ಥಾನ ಬದಲಾವಣೆಗೆ ಡಿ.ಕೆ. ಶಿವಕುಮಾರ್‌ ಒತ್ತಾಯಿಸುತ್ತಿರುವುದು ಕಾಂಗ್ರೆಸ್‌ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ಇದೇ ವೇಳೆ ಸಿಎಂ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಸತೀಶ ಜಾರಕಿಹೊಳಿ ದೇವೇಗೌಡರನ್ನು ಭೇಟಿಯಾಗಿರುವುದು ಕುತೂಹಲ ಕೆರಳಿಸಿದೆ.

ಈ ಬಗ್ಗೆ ದೇವೇಗೌಡರಾಗಲೀ , ಸತೀಶ್‌ ಜಾರಕಿಹೊಳಿ ಅವರಾಗಲೀ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಶೀಘ್ರದಲ್ಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಗಲಿದ್ದು, ಸತೀಶ್‌ ಜಾರಕಿಹೊಳಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!