ಬೆಂಗಳೂರು/ ದಾವಣಗೆರೆ : ರಸ್ತೆ ಅಪಘಾತದಲ್ಲಿ ಭೀಕರವಾಗಿ ಗಾಯಗೊಂಡು ಮೃತಪಟ್ಟ ಯುವಕನ ಅಂಗಾಂಗದಾನದಿಂದ 12 ಮಂದಿಯ ಜೀವನ ಸುಗಮವಾಗಿದೆ. ದಾವಣಗೆರೆ ಮೂಲದ ದರ್ಶನ್ (29) ಈ ಹೆಗ್ಗಳಿಕೆಗೆ ಪಾತ್ರನಾಗಿದ್ದು, ತನ್ನ ಮರಣದ ನಂತರವೂ ದರ್ಶನ್ ಚಿರಕಾಲ ಜೀವಿಸಲಿದ್ದಾರೆ.
ದಾವಣಗೆರೆಯ ಹುಡಾಳು ಗ್ರಾಮದ ದರ್ಶನ್ ಮಾ.22 ರಂದು ಬೆಂಗಳೂರಿನ ನಾಯಂಡನ ಹಳ್ಳಿ ಬಳಿ ಅಪಘಾತವಾಗಿತ್ತು. ತೀವ್ರ ರಕ್ತಸ್ರಾವದಿಂದ ದರ್ಶನ್ ಮೆದುಳು ಮೃತ ಸ್ಥಿತಿಯಲ್ಲಿದೆ ಎಂದು ವೈದ್ಯರು ಘೋಷಿಸಿದ್ದರು.
ಈ ವೇಳೆ ಭಾವೋದ್ವೇಗಕ್ಕೆ ಒಳಗಾಗದ ಕುಟುಂಬಸ್ಥರು ಸಂತಾಪದಲ್ಲಿಯೂ ಸಹ ಅನುಕಂಪ, ಮಾನವೀಯ ಗುಣಗಳನ್ನು ಮೆರೆದಿದ್ದರು. ದರ್ಶನ್ ಅಂಗಾಂಗದಾನಕ್ಕೆ ಕುಟುಂಬಸ್ಥರು ಸಮ್ಮತಿಸಿದ್ದರು. ಇದು ದರ್ಶನ್ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.