ಮಾದಿಗರ ಸಮುದಾಯದ ಮೇಲೆ ಸವರ್ಣಿಯರ ದೌರ್ಜನ್ಯ, ಹಲ್ಲೆ ಪ್ರಕರಣ ಖಂಡಿಸಿ
ಪಾವಗಡ : ಮಾದಿಗ ಸ್ವಾಭಿಮಾನಿ ಸಂಘಟನೆ ಒಕ್ಕೂಟ ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಪಾವಗಡ ಪಟ್ಟಣದಲ್ಲಿ ಇರುವ ನಿರೀಕ್ಷಣ ಮಂದಿರದಲ್ಲಿ ದಿನಾಂಕ, 15/09/25 ಸೋಮವಾರ ರಂದು ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಮಾದಿಗ ಸ್ವಾಭಿಮಾನಿ ಸಂಘಟನೆಗೆ ಒಕ್ಕೂಟ ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕೇಶವ ಮೂರ್ತಿ, ಮಾತನಾಡಿ ದಿನೇ ದಿನೇ ತುಮಕೂರು ಜಿಲ್ಲೆಯಲ್ಲಿ ದಲಿತರ ಮತ್ತು ಶೋಷಿತ ವರ್ಗಗಳ ಮೇಲೆ ಸವರ್ಣಿಯರ ಮತ್ತು ಪಾಳೇಗಾರರು ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಖಂಡಿಸಿ ಮಧುಗಿರಿಯಲ್ಲಿ ಇದೇ ತಿಂಗಳು 24 ಸೆಪ್ಟಂಬರ್ ರಂದು ಬೃಹತ ಪ್ರತಿಭಟನೆಯನ್ನು ಮಾದಿಗ ಸಂಘಟನೆಗಳ ಒಕ್ಕೂಟ ಮತ್ತು ದಲಿತ ಸಂಘಟನೆಗಳು ಶೋಷಿತ ವರ್ಗದವರಿಂದ ಪಕ್ಷಾತೀತವಾಗಿ ಪ್ರತಿಭಟನೆ ನಡೆಸಲಿದ್ದೇವೆ.
ನಂತರ ಕಳೆದ ಮೂರು ದಿನಗಳ ಹಿಂದೆ ಪಾವಗಡ ತಾಲೂಕಿನಲ್ಲಿ ಬೆಳ್ಳಿಬಟ್ಲು ಗ್ರಾಮದಲ್ಲಿ ಮಾದಿಗ ಜನಾಂಗಕ್ಕೆ ಸೇರಿದವರು ಹನುಮಂತಪ್ಪನ್ನುವರ ಮೇಲೆ ವಾಲ್ಮೀಕಿ ಜನಾಂಗಕ್ಕೆ ಸೇರಿದ ಯುವಕ ದೊಣ್ಣೆಯಿಂದ ಹಲ್ಲೆಗೊಳಿಸಿ ಕೊಲೆ ಮಾಡಿದ್ದಾನೆ, ನಂತರ ಹಾಗೂ ಒಂದು ವಾರದ ಹಿಂದೆ ಮಧುಗಿರಿ ತಾಲ್ಲೂಕು ಪೋಲೇನಹಳ್ಳಿ ಗ್ರಾಮದಲ್ಲಿ ನೀರಿನ ವಿಚಾರಕ್ಕೆ ಪ್ರಶ್ನೆ ಮಾಡಿದ ಮಾದಿಗ ಜನಾಂಗಕ್ಕೆ ಸೇರಿದ ವ್ಯಕ್ತಿಯನ್ನು ಗ್ರಾಮ ಪಂಚಾಯಿತಿಯ ಸದಸ್ಯ ನಾಗೇಶ್ ಎನ್ನುವ ಬೊಲೋರಿದಿಂದ ಗುದ್ದಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಈ ರೀತಿ ಮಾದಿಗ ಸಮುದಾಯಗಳ ಮೇಲೆ ನಿರಂತರ ದೌರ್ಜನ್ಯಗಳು ಮತ್ತು ಹಲ್ಲೆಗಳು ನಡೆಯುತ್ತಿದ್ದರು ಜನಪ್ರತಿನಿಧಿಗಳು ಮತ್ತು ಪೊಲೀಸ್ ಅಧಿಕಾರಿಗಳು ಮೌನವಾಗಿರುವುದು ದೌರ್ಜನ್ಯಕ್ಕೆ ಪುಷ್ಟಿ ನೀಡುವಂತಿದೆ ಎಂದು ಆರೋಪಿಸಿದವರು.
ಈ ವೇಳೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದವರು.ಜಿಲ್ಲಾಧ್ಯಕ್ಷ ಎಸ್.ಎಸ್. ಯೋಗಿ ಸಿದ್ದರಬೆಟ್ಟ , ಸಿದ್ದಲಿಂಗಯ್ಯ ಜಿಲ್ಲಾ ಮುಖಂಡರಾದ ಸತ್ಯಪ್ಪ , ರಾಜಣ್ಣ , ಮೇಘರಾಜ್, ಪಾವಗಡ ತಾಲ್ಲೂಕುನ ದಲಿತ ಹೋರಾಟಗಾರರಾದ , ಕನ್ನಮೇಡಿ ಕೃಷ್ಣ ಡಿಎಸ್ಎಸ್ ಬಿ ಹೊಸಹಳ್ಳಿ ಮಲ್ಲಿಕಾರ್ಜುನ. ಮೂರ್ತಿ ,ಮಂಗಳವಾಡ ಮಂಜಣ್ಣ ದೇವಲಕೆರೆ ನಿಂಗಣ್ಣ , ಉಮೇಶ್ ಬೆಳ್ಳಿಬಟ್ಲು, ಮಾದಿಗ ದಂಡೋರ ತಾಲ್ಲೂಕು ಅಧ್ಯಕ್ಷ ಹನುಮಂತರಾಯಪ್ಪ , ಕಡಪಲಕೆರೆ ನರಸಿಂಹಪ್ಪ , ಶೈಲಾಪುರ ನಾಗರಾಜ್. ಇನ್ನು ದಲಿತ ಹೋರಾಟಗಾರರು ಹಾಜರಿದ್ದರು.
ವರದಿ: ಶಿವಾನಂದ




