ಬೆಳಗಾವಿ: ಸ್ವಾಮಿ ವಿವೇಕಾನಂದ ತತ್ವಾರ‍್ಶಗಳನ್ನು ವಿದ್ಯರ‍್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯರ‍್ಥಿ ಜೀವನದಲ್ಲಿ ಶಿಸ್ತು ಪರಿಪಾಲನೆ ಮಾಡಿ ಕಠಿಣ ಪರಿಶ್ರಮ ವಹಿಸಿ ಅಧ್ಯಯನ ಮಾಡಬೇಕು ಅಂದಾಗ ಮಾತ್ರ ವಿದ್ಯರ‍್ಥಿಗಳು ತಮ್ಮ ಮುಂದಿನ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದು ಬೆಳಗಾವಿ ರಾಮಕೃಷ್ಣ ಆಶ್ರಮದ ಸ್ವಾಮಿ ಮೋಕ್ಷಾತ್ಮಾನಂದ ಸ್ವಾಮಿಗಳು ವಿದ್ಯರ‍್ಥಿಗಳಿಗೆ ಕಿವಿ ಮಾತು ಹೇಳಿದರು.
ನಗರದ ಕೋಟೆ ಆವರಣದ ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ಸೋಮವಾರ ಸ್ವಾಮಿ ವಿವೇಕಾನಂದ ೧೬೪ ನೇ ಜನ್ಮದಿನೋತ್ಸವ ಸಂರ‍್ಭದಲ್ಲಿ ನಡೆದ ಯುವ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ವಿದ್ಯರ‍್ಥಿ ಜೀವನ ಅಮೂಲ್ಯವಾದುದು ಈ ಸಮಯದಲ್ಲಿ ವಿದ್ಯೆ ಕಲಿಯುವದರ ಬಗ್ಗೆ ಮಾತ್ರ ಗಮನ ಹರಿಸಬೇಕು. ವಿದ್ಯರ‍್ಥಿಗಳು ಈ ಸಮದಯಲ್ಲಿ ಮೊಬೈಲ್‌ಗಳ ಮಿತವಾಗಿ ತಮ್ಮ ಅಧ್ಯಯನಕ್ಕಾಗಿ ಮಾತ್ರ ಬಳಸಬೇಕೆಂದು ಕಿವಿ ಮಾತು ಹೇಳಿದರು.
ಧಾರವಾಡ ತಡಕೋಡದ ವಂದೇ ಮಾತರಂ ಗುರುಕುಲಂ ಸಂಸ್ಥಾಪಕ ಮಧುಸೂಸನ್ ಮಾತನಾಡಿದರು. ಉಪನ್ಯಾಸಕ ಉದಯ ಪಾಟೀಲ್ ನಿರೂಪಿಸಿದರು. ನಗರದ ವಿವಿಧ ಕಾಲೇಜುಗಳ ಸುಮಾರು ೬೦೦ ವಿದ್ಯರ‍್ಥಿಗಳು ಪಾಲ್ಗೊಂಡಿದ್ದರು.
ಸ್ವಾಮಿ ವಿವೇಕಾನಂದ ತತ್ವಾರ‍್ಶಗಳನ್ನು ಅಳವಡಿಸಿಕೊಳ್ಳಿ’




