ಕಂಪ್ಲಿ : ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ಹಂಪಾ ದೇವನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪಂಚಾಯತ್, ಹಾಗೂ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಸಮೂಹ ಸಂಪನ್ಮೂಲ ಕೇಂದ್ರ ದೇವಸಮುದ್ರ ಕ್ಲಸ್ಟರ್ ಮಟ್ಟದ ವತಿಯಿಂದ ನಡೆದ ಎಫ್.ಎಲ್.ಎನ್ ಮಕ್ಕಳ ಕಲಿಕಾ ಹಬ್ಬವನ್ನು ಮಂಗಳಾ ವಾರ ಸಮಯ. ಮಧ್ಯಾನ ೧೨ ೩೦ ಕ್ಷೇತ್ರ ಶಿಕ್ಷಣ ಅಧಿಕಾರಿಗಳು
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿದ್ದಲಿಂಗಯ್ಯ ಮೂರ್ತಿಯವರು ಚಾಲನೆ ನೀಡಿದರು
ನಂತರ ಮಾತನಾಡಿ ಸಂತೋಷದಾಯಕ ಗಣಿತ ಚಟುವಟಿಕೆ, ಗಟ್ಟಿ ಓದುವುದು, ಜ್ಞಾಪಕ ಶಕ್ತಿ, ಕಥೆ ಹೇಳುವುದು.
ರಸಪ್ರಶ್ನೆ, ಕೈ ಬರಹದ ಚಟುವಟಿಕೆಗಳಲ್ಲಿ ಮಕ್ಕಳನ್ನು ಭಾಗಿಯಾಗಿಸುವ ಮೂಲಕ ಮಕ್ಕಳು ಉತ್ಸಾಹಿಸಿಗಳಾಗುವಂತೆ ಮಾಡುವುದು.
ಕಲಿಕಾ ಸ್ಥಾನ ಗುರುತಿಸುವಿಕೆ, ಮೂಲ ಸಾಕ್ಷರತಾ ಕಾರ್ಯವನ್ನು ಮೂಡಿಸುವುದು ಈ ಕಲಿಕಾ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ.
ಈ ಎಲ್ಲಾ ಕಾರ್ಯಕ್ರಮದಲ್ಲಿ ಮಕ್ಕಳು ಪಾಲ್ಗೊಂಡು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿ, ಕಲಿಕಾ ಹಬ್ಬದ ಸದುಪಯೋಗ ಪಡೆಯಬೇಕೆಂದು ತಿಳಿಸಿದರು
ಈ ಸಂದರ್ಭದಲ್ಲಿ ದೇವಸಮುದ್ರ ಕ್ಲಸ್ಟರ್ ಮಟ್ಟದ ಸಿ ಆರ್ ವೀರೇಶ್. ಆ ಶಾಲೆ ಮುಖ್ಯ ಗುರುಗಳು. ಎನ್‌ಪಿಎಸ್ ರಾಜ್ಯಾಧ್ಯಕ್ಷರಾದ ನಾಗನಗೌಡ. ಸುನಿತಾ .ರಾಜೇಶ್ವರಿ. ದೊಡ್ಡ ಬಸಪ್ಪ ಜಡೇಪ್ಪ .ಮಲ್ಲಿಕಾರ್ಜುನ . ರುದ್ರಪ್ರ ವೀರಪ್ಪ ಇಸಿಓ . ಹುಲಗಪ್ಪ . ಹುನುಂತಪ್ಪ . ಮಂಜುನಾಥ್ . ರೇವಣ್ಣ ಇ ಸಿ ಓ . ಹಾಜರಿದ್ದರು