Ad imageAd image

20 ನಿಮಿಷಗಳ ಹೆಚ್ಚುವರಿ ದೃಶ್ಯಗಳೊಂದಿಗೆ ಶೀಘ್ರ ತೆರೆ ಕಾಣಲಿದೆ ಚಿತ್ರ

Bharath Vaibhav
20 ನಿಮಿಷಗಳ ಹೆಚ್ಚುವರಿ ದೃಶ್ಯಗಳೊಂದಿಗೆ ಶೀಘ್ರ ತೆರೆ ಕಾಣಲಿದೆ ಚಿತ್ರ
WhatsApp Group Join Now
Telegram Group Join Now

ಜನವರಿ 17 ರಂದು ಬಿಡುಗಡೆಯಾಗಿ ಕೆಲ ವಾರಗಳ ನಂತರ ಚಿತ್ರಮಂದಿರಗಳಿಂದ ಸದ್ದಿಲ್ಲದೆ ಎತ್ತಂಗಡಿ ಆಗಿದ್ದ ಚಿತ್ರ 20 ನಿಮಿಷಗಳ ಹೆಚ್ಚುವರಿ ದೃಶ್ಯಗಳೊಂದಿಗೆ ಹೊಸ ಆವೃತ್ತಿಯೊಂದಿಗೆ ಮರಳಲು ಸಿದ್ಧವಾಗಿದೆ. ಇದೇ ಕಥೆಯ ಜೀವಾಳ ಆಗಿದೆ ಎಂದು ನಿರ್ದೇಶಕ ನಾಗಶೇಖರ್ ಹೇಳಿದ್ದಾರೆ.

ನಾನು ಕಲ್ಪಿಸಿಕೊಂಡಂತೆ ಸಿನಿಮಾ ತೋರಿಸಲು ಆಗಿರಲಿಲ್ಲ. ಕಾನೂನು ಗೋಜಲಿನಿಂದ ಮೊದಲ ಆವೃತ್ತಿ ಚೆನ್ನಾಗಿ ಮೂಡಿಬರಲಿಲ್ಲ. ಅಂತಿಮ ಲ್ಯಾಬ್ ಆವೃತ್ತಿಯನ್ನು ಥಿಯೇಟರ್ ನಲ್ಲಿ ಬಿಡುಗಡೆ ಮಾಡುವಾಗ ಅಳವಡಿಸದಂತೆ ನ್ಯಾಯಾಲಯ ತಡೆಯಿತು. ಲಭ್ಯವಿರುವುದನ್ನು ಬಿಡುಗಡೆ ಮಾಡುವುದನ್ನು ಬಿಟ್ಟು ನನಗೆ ಬೇರೆ ಆಯ್ಕೆ ಇರಲಿಲ್ಲ ಎಂದು ತಿಳಿಸಿದರು.

ಸಿನಿಮಾ ನೋಡಿದ ವೀಕ್ಷಕರು, ದೃಶ್ಯಗಳು ಆಕಸ್ಮಿಕವಾಗಿ ಒಟ್ಟಿಗೆ ಸೇರಿಕೊಂಡಿವೆ ಎಂದು ಹೇಳಿದರು. ಅಲ್ಲದೇ, ರಾಗಿಣಿ ದ್ವಿವೇದಿ ಕೇವಲ ಒಂದು ಹಾಡನ್ನು ಹೊರತುಪಡಿಸಿ ಅವರ ಪ್ರಮುಖ ದೃಶ್ಯಗಳು ಕಾಣೆಯಾಗಿದ್ದವು. ರಂಗಾಯಣ ರಘು ಮತ್ತು ಸಂಪತ್ ರಾಜ್ ಅವರೊಂದಿಗಿನ ದೃಶ್ಯಗಳಲ್ಲಿ ಯಾವುದೇ ಭಾವನಾತ್ಮಕ ಸಂಪರ್ಕ ಇರಲಿಲ್ಲ. ಈ ಸಂಪರ್ಕವನ್ನು ಈಗ ಮತ್ತೆ ತರುತ್ತಿದ್ದೇನೆ ಎಂದರು.

ಈಗಾಗಲೇ ಬಿಡುಗಡೆಯಾಗಿದ್ದ ಆವೃತ್ತಿಯಲ್ಲಿ ಚಿತ್ರದ ಅವಧಿ 2 ಗಂಟೆ ಮತ್ತು 2 ನಿಮಿಷ ಇತ್ತು. ಈಗ ಅದನ್ನು 2 ಗಂಟೆ 23 ನಿಮಿಷಕ್ಕೆ ಹೆಚ್ಚಿಸಲಾಗಿದೆ. ಆ 20 ನಿಮಿಷ ಫಿಲ್ಲರ್ ಅಲ್ಲ. ಅದು ಆತ್ಮ. ಅದು ಇಲ್ಲದೆ, ಚಿತ್ರ ನಿರ್ಜೀವವಾಗಿತ್ತು ಎಂದು ನಾಗಶೇಖರ್ ಹೇಳಿದರು. ಸಂಜು ವೆಡ್ಸ್ ಗೀತಾ 2 ನಾಗಶೇಖರ್ ಅವರ 11 ನೇ ಚಿತ್ರವಾಗಿದೆ. ಪ್ರತಿ ಚಿತ್ರವು ಏನಾದರೊಂದು ಕಲಿಸುತ್ತದೆ. 10 ಸಿನಿಮಾ ಮಾಡಿ ಆದ ನನ್ನ ಅನುಭವವನ್ನು ಇದರಲ್ಲಿ ತಂದಿದ್ದೇನೆ. ನಾನು ಹೇಳಲು ಉದ್ದೇಶಿಸಿದ್ದನ್ನು ನಿಖರವಾಗಿ ತೋರಿಸಬೇಕಾಗದ ಅಗತ್ಯವಿದೆ ಎಂದರು.

ಮರು ಬಿಡುಗಡೆ ಮುನ್ನಾ ಇದನ್ನು ಎಸ್ ಮಹೇಂದರ್ ಮತ್ತು ಕೆಪಿ ಶ್ರೀಕಾಂತ್ ಅವರಂತಹ ಚಿತ್ರೋದ್ಯಮದ ಹಿರಿಯರಿಗೆ ತೋರಿಸಿದೆ. ಇದೊಂದು ಸುಂದರವಾದ ಚಿತ್ರ. ಇದನ್ನು ನೋಡಬೇಕಾಗಿದೆ ಎಂದು ಅವರು ನನಗೆ ಹೇಳಿದರು. ಅದು ನನಗೆ ಪುಶ್ ನೀಡಿತು. ಶೀಘ್ರದಲ್ಲಿಯೇ ಮರು ಬಿಡುಗಡೆ ದಿನಾಂಕವನ್ನು ಘೋಷಿಸಲಾಗುವುದು ಎಂದು ಅವರು ತಿಳಿಸಿದರು. ಛಲವಾದಿ ಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಶ್ರೀಧರ್ ವಿ ಸಂಗೀತ ಮತ್ತು ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!