ಚೇಳೂರು: ಕ್ಷೇತ್ರ ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆ ವತಿಯಿಂದ ಇಂದು ಶ್ರೀ ಮಾತೃಶ್ರೀ ಹೇಮಾವತಿ ಹೆಗ್ಡೆ ರವರ ಹುಟ್ಟುಹಬ್ಬದ ಪ್ರಯುಕ್ತ ಚೇಳೂರು ತಾಲ್ಲೂಕಿನ ಹೊರ ವಲಯ ಕೇಂದ್ರ ಭಾಗದ ರಕ್ಷಣಾ ಅನಾಥ ಆಶ್ರಮ ಹಣ್ಣು ಹಾಗೂ ಹಾಲು ವಿತರಣೆ ಮಾಡಲಾಯಿತು, ಅಲ್ಲದೇ ಅಮ್ಮನವರಿಗೆ ಎಲ್ಲರು ಸೇರಿ ದೇವರಲ್ಲಿ ಪ್ರಾರ್ಥನೆ ಮಾಡಿ ಶುಭ ಹಾರೈಸಿದರು, ಅಲ್ಲದೇ ವರ್ಷ -ವರ್ಷವೂ ಇದೇ ರೀತಿ ನಮ್ಮ ಸೇವೆಯನ್ನು ಚಿರು -ಋಣಿಯಾಗಿ ಇರುತ್ತೆವೆ ಎಂದು ಆ ಭಗವಂತನಲ್ಲಿ ಬೇಡಿಕೊಂಡರು.

ಈ ಸಂದರ್ಭದಲ್ಲಿ ಮೇಲ್ವಿಚಾರಕರಾದ ರಾಧಿಕಾ, ಸೇವಾಪ್ರತಿನಿಧಿಗಳಾದ ಮಂಜುಳಾ, ಶಭಾನ, ವೆಂಕಟರಮಣಮ್ಮ, ಹಾಗೂ ದಿಲಷಾದ್, ಲಕ್ಷ್ಮಿ, ಭಾಗ್ಯ, ರವಿ ಮತ್ತು ಸಿಬ್ಬಂದಿಗಳು ಹಾಜರಿದ್ದರು.
ವರದಿ :ಯಾರಬ್. ಎಂ.




