Ad imageAd image

೨೦ಕ್ಕೆ ದೈವಜ್ಞ ಬ್ರಾಹ್ಮಣ ಸುವರ್ಣಕಾರ ಸೊಸಾಯಿಟಿ ಚುನಾವಣೆ

Bharath Vaibhav
೨೦ಕ್ಕೆ ದೈವಜ್ಞ ಬ್ರಾಹ್ಮಣ ಸುವರ್ಣಕಾರ ಸೊಸಾಯಿಟಿ ಚುನಾವಣೆ
WhatsApp Group Join Now
Telegram Group Join Now

ಹುಬ್ಬಳ್ಳಿ: ನಗರದ ದಿ. ದೈವಜ್ಞ ಬ್ರಾಹ್ಮಣ ಸುವರ್ಣಕಾರ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ನಿರ್ದೇಶಕ ಮಂಡಳಿ ಚುನಾವಣೆಯು ಸೆ. ೨೦ ರಂದು ಶನಿವಾರ ನಗರದ ಸಿಬಿಟಿಯ ಹೊಸಕಿಲ್ಲಾ ೩ನೇ ಕ್ರಾಸ್‌ನ ಶ್ರೀನಿಧಿ ಅನೆಕ್ಸ್ ನ ಮೊದಲನೆಯ ಮಹಡಿಯಲ್ಲಿರುವ ಸೊಸೈಟಿಯಲ್ಲಿ ಜರುಗಲಿದೆ ಎಂದು ಅಭ್ಯರ್ಥಿ ಸತೀಶ್ ಸದಾನಂದ ಶೇಜವಾಡಕರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾನವು ಸೆ. ೨೦ರಂದು ಬೆ. ೯ ರಿಂದ ಸಂಜೆ ೪ ಗಂಟೆವರೆಗೆ ಇರಲಿದೆ. ಚುನಾವಣೆಗಾಗಿ ಆನಂದ ರಾಯ್ಕರ್, ಮಹೇಶ್ ಶೇಟ್, ಮಂಜುನಾಥ ವರ್ಣೇಕರ, ಮಂಜುನಾಥ ಪಾಲನಕರ, ವಿಷ್ಣು ರಾಯ್ಕರ್, ಶ್ರೀಪಾದ ರೇವಣಕರ, ಸತೀಶ್ ಶೇಜವಾಡಕರ ಇವರು ಉಮೇದು ವಾರರಾಗಿ ಸಾಮಾನ್ಯ ಸ್ಥಾನಕ್ಕೆ ೭ ಅಭ್ಯರ್ಥಿಗಳು ಹಾಗೂ ಅ ವರ್ಗದ ಮೀಸಲು ಸ್ಥಾನಕ್ಕೆ ಅಮೃತ ಜನ್ನು ಅವರು ಸ್ಪರ್ಧೆ ಮಾಡಿದ್ದು ಇವರನ್ನು ಸಮಾಜದ ಸೊಸೈಟಿ ಮತದಾರರು ಬಹುಮತದಿಂದ ಆರಿಸಿ ಸೊಸೈಟಿಯ ಸೇವೆ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
೧೦ ಅಭ್ಯರ್ಥಿಗಳ ಪೈಕಿ ಪ್ರೇಮಾ ಭಟ್ ಹಾಗೂ ಶೈಲಾ ಶೇಟ್ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ೧೮೭೫ ಷೇರುದಾರರು ಇದ್ದು, ೧೪೭೫ ಷೇರುದಾರರು ಚುನಾವಣೆಗೆ ಅರ್ಹತೆ ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ಇನ್ನೂ ನಮ್ಮ ಅವಧಿಯಲ್ಲಿ ನಮ್ಮ ಸಮಾಜದ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ. ೯೦ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸ್ಕಾಲರ್ಶಿಪ್ ನೀಡಿದ್ದೇವೆ. ಅಲ್ಲದೇ ಆರ್ಥಿಕವಾಗಿ ಹಿಂದುಳಿದ ಹಿರಿಯ ನಾಗರಿಕರಿಗೆ ಮಾಶಾಸನ ನೀಡಿದ್ದೇವೆ, ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರೇಮಾ ಭಟ್, ಶೈಲಾ ಶೇಟ್, ಮಂಜುನಾಥ ವರ್ಣೇಕರ, ವಿಷ್ಣು ರತ್ನಾಕರ, ಆನಂದ ರಾಯ್ಕರ್೨೦ಕ್ಕೆ ದೈವಜ್ಞ ಬ್ರಾಹ್ಮಣ ಸುವರ್ಣಕಾರ ಸೊಸಾಯಿಟಿ ಚುನಾವಣೆ
ಹುಬ್ಬಳ್ಳಿ: ನಗರದ ದಿ. ದೈವಜ್ಞ ಬ್ರಾಹ್ಮಣ ಸುವರ್ಣಕಾರ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ನಿರ್ದೇಶಕ ಮಂಡಳಿ ಚುನಾವಣೆಯು ಸೆ. ೨೦ ರಂದು ಶನಿವಾರ ನಗರದ ಸಿಬಿಟಿಯ ಹೊಸಕಿಲ್ಲಾ ೩ನೇ ಕ್ರಾಸ್‌ನ ಶ್ರೀನಿಧಿ ಅನೆಕ್ಸ್ ನ ಮೊದಲನೆಯ ಮಹಡಿಯಲ್ಲಿರುವ ಸೊಸೈಟಿಯಲ್ಲಿ ಜರುಗಲಿದೆ ಎಂದು ಅಭ್ಯರ್ಥಿ ಸತೀಶ್ ಸದಾನಂದ ಶೇಜವಾಡಕರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾನವು ಸೆ. ೨೦ರಂದು ಬೆ. ೯ ರಿಂದ ಸಂಜೆ ೪ ಗಂಟೆವರೆಗೆ ಇರಲಿದೆ. ಚುನಾವಣೆಗಾಗಿ ಆನಂದ ರಾಯ್ಕರ್, ಮಹೇಶ್ ಶೇಟ್, ಮಂಜುನಾಥ ವರ್ಣೇಕರ, ಮಂಜುನಾಥ ಪಾಲನಕರ, ವಿಷ್ಣು ರಾಯ್ಕರ್, ಶ್ರೀಪಾದ ರೇವಣಕರ, ಸತೀಶ್ ಶೇಜವಾಡಕರ ಇವರು ಉಮೇದು ವಾರರಾಗಿ ಸಾಮಾನ್ಯ ಸ್ಥಾನಕ್ಕೆ ೭ ಅಭ್ಯರ್ಥಿಗಳು ಹಾಗೂ ಅ ವರ್ಗದ ಮೀಸಲು ಸ್ಥಾನಕ್ಕೆ ಅಮೃತ ಜನ್ನು ಅವರು ಸ್ಪರ್ಧೆ ಮಾಡಿದ್ದು ಇವರನ್ನು ಸಮಾಜದ ಸೊಸೈಟಿ ಮತದಾರರು ಬಹುಮತದಿಂದ ಆರಿಸಿ ಸೊಸೈಟಿಯ ಸೇವೆ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
೧೦ ಅಭ್ಯರ್ಥಿಗಳ ಪೈಕಿ ಪ್ರೇಮಾ ಭಟ್ ಹಾಗೂ ಶೈಲಾ ಶೇಟ್ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ೧೮೭೫ ಷೇರುದಾರರು ಇದ್ದು, ೧೪೭೫ ಷೇರುದಾರರು ಚುನಾವಣೆಗೆ ಅರ್ಹತೆ ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ಇನ್ನೂ ನಮ್ಮ ಅವಧಿಯಲ್ಲಿ ನಮ್ಮ ಸಮಾಜದ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ. ೯೦ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸ್ಕಾಲರ್ಶಿಪ್ ನೀಡಿದ್ದೇವೆ. ಅಲ್ಲದೇ ಆರ್ಥಿಕವಾಗಿ ಹಿಂದುಳಿದ ಹಿರಿಯ ನಾಗರಿಕರಿಗೆ ಮಾಶಾಸನ ನೀಡಿದ್ದೇವೆ, ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರೇಮಾ ಭಟ್, ಶೈಲಾ ಶೇಟ್, ಮಂಜುನಾಥ ವರ್ಣೇಕರ, ವಿಷ್ಣು ರತ್ನಾಕರ, ಆನಂದ ರಾಯ್ಕರ್ ಇತರರಿದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!