ಬೆಳಗಾವಿ: ಹೌದು ಬೆಳಗಾವಿ ಜಿಲ್ಲೆಯ ಕಿತ್ತೂರು ಹಾಗೂ ಖಾನಾಪುರ ಕ್ಷೇತ್ರಗಳು ನೆರೆಯ ಉತ್ತರಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತಿದ್ದು, ಇನ್ನೂ ಕೆಲವೇ ದಿನಗಳಲ್ಲಿ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರು ಸಂಸದರಾಗಿ ಒಂದು ವರ್ಷ ಪೂರೈಸಲಿದ್ದಾರೆ. ಆದರೇ ಅದ್ಯಾಕೋ ಏನೋ ಗೊತ್ತಾಗುತ್ತಿಲ್ಲಾ ಕಿತ್ತೂರು ಹಾಗೂ ಖಾನಾಪುರ ಕ್ಷೇತ್ರಗಳ ಜನತೆಯ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ವಿಫಲರಾದರೆನೋ ಅನಿಸುತ್ತಾ ಇದೆ.
ಇದಕ್ಕೆ ಕಾರಣ ಎರಡು ಕ್ಷೇತ್ರಗಳಲ್ಲಿ ಕೇಂದ್ರಸರ್ಕಾರದ ವ್ಯಾಪ್ತಿಗೆ ಬರುವ ಹಲವು ಅಭಿವೃದ್ಧಿ ಕೆಲಸ ಕಾರ್ಯಗಳು ಆಗೇ ನೆನೆಗುದಿಗೆ ಬಿದ್ದಿವೆ, ಪಕ್ಕದ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ರವರ ವಿಶೇಷ ಪ್ರಯತ್ನದಿಂದ ಸವದತ್ತಿ ಎಲ್ಲಮ್ಮನ ಗುಡ್ಡದ ಅಭಿವೃದ್ಧಿಗೆ 150 ಕೋಟಿ ಅನುದಾನ ಕೇಂದ್ರದಿಂದ ಬಿಡುಗಡೆ ಮಾಡಿಸಿಕೊಂಡು ಬಂದಿದ್ದಾರೆ.
ಆದರೇ ಕೆನರಾ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರು ಮಾತ್ರ ಕಿತ್ತೂರು ಖಾನಾಪುರ ಕ್ಷೇತ್ರಗಳ ವ್ಯಾಪ್ತಿಗೆ ಬರುವ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ, ನಿಂತುಹೋದ ರೈಲ್ವೆ ನಿಲ್ದಾಣಗಳು, ಕಿತ್ತೂರು , ಧಾರವಾಡ ರೈಲ್ವೆ ಯೋಜನೆ ಮರೀಚಿಕೆ, ಕಾಡುಪ್ರದೇಶಗಳ ಅಂಚಿನ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಇಲ್ಲಿಯವರೆಗೂ ನೆಟ್ ವರ್ಕ್ ಸೌಲಭ್ಯ ಇಲ್ಲದೇ ಇರುವುದು ಹೀಗೆ ಹತ್ತು ಹಲವಾರು ಸಮಸ್ಯೆಗಳು ಇದ್ದರೂ ಸಹ ಸಂಸದ ಕಾಗೇರಿ ಸಾಹೇಬರು ಮಾತ್ರ ಸುಮ್ಮನೆ ಇರುವುದು ನೋಡಿದ್ರೆ. ಇವರು ಸಹ ಮಾಜಿ ಸಂಸದ ಅನಂತ್ ಕುಮಾರ್ ಹೆಗ್ಡೆ ಕಾಗೇರಿ ಹಾದಿ ಹಿಡಿದರೇನೋ ಎಂಬ ಅನುಮಾನ ಕಾಡುತ್ತಿದ್ದು, ಇದರ ಬಗ್ಗೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ವಿಶ್ಲೇಷಣೆ ವರದಿ ತಯಾರಿಸಿ ಪಕ್ಕದ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಕಿತ್ತೂರು ಕ್ಷೇತ್ರದ ಶಾಸಕ ಬಾಬಾ ಸಾಹೇಬ್ ಪಾಟೀಲ್ ಅಭಿಪ್ರಾಯ ಸಂಗ್ರಹ ಮಾಡಿ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ.
ವರದಿ: ಬಸವರಾಜು