Ad imageAd image

■ ದಾಂಡೇಲಿಗೆ ಪೇಪರ್ ಮಿಲ್ಲಿನ ಹೊರಬೀಳುವ ರಾಸಾಯನಿಕ ನೀರು ಮತ್ತು ವಿಷಯುಕ್ತ ಧೂಳೇ ಕಂಟಕ….!

Bharath Vaibhav
■ ದಾಂಡೇಲಿಗೆ ಪೇಪರ್ ಮಿಲ್ಲಿನ ಹೊರಬೀಳುವ ರಾಸಾಯನಿಕ ನೀರು ಮತ್ತು ವಿಷಯುಕ್ತ ಧೂಳೇ ಕಂಟಕ….!
WhatsApp Group Join Now
Telegram Group Join Now

ದಾಂಡೇಲಿ: ಹೌದು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ವಿಧಾನಸಭಾ ಕ್ಷೇತ್ರದ ದಾಂಡೇಲಿ ನಗರದ ಜನತೆಗೆ ಹಾಗೂ ಪರಿಸರಕ್ಕೆ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಲಿನಿಂದ ಹೊರಬೀಳುವ ರಾಸಾಯನಿಕ ನೀರು ಮತ್ತು ದಿನಂಪ್ರತಿ ಯಂತ್ರಗಳು ಉಗುಳುವ ರಾಸಾಯನಿಕ ಮಿಶ್ರಿತ ಧೂಳೇ ಕಂಟಕವಾಗಿರುವ ಲಕ್ಷಣಗಳು ಪೂರಕವಾಗಿದ್ದು, ಇದಕ್ಕೆ ಇಂಬು ನೀಡುವಂತೆ ದಾಂಡೇಲಿಯ ಸ್ಥಳೀಯ ಪ್ರಗತಿಪರರು ಹೇಳಿರುವ ಪ್ರಕಾರ ದಾಂಡೇಲಿ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಲಿನಿಂದ ದಿನಂಪ್ರತಿ ಮಿಲ್ಲಿನ ಪಕ್ಕದಲ್ಲೇ ಇರುವ ಹಳ್ಳಕ್ಕೆ ರಾಸಾಯನಿಕ ನೀರು ಬಿಡುಗಡೆ ಮಾಡುತ್ತಿದ್ದಾರೆ.

ಎಂಬುದಕ್ಕೆ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಲಿನಿಂದ ಹೊರಬೀಳುವ ನೀರು ಪಕ್ಕದಲ್ಲೇ ಇರುವ ಹಳ್ಳಕ್ಕೆ ಸೆರುತ್ತಿರುವುದರಿಂದ ಈ ಹಳ್ಳದ ನೀರಿನ ಬಣ್ಣವೇ ಹಳದಿ ಬಣ್ಣಕ್ಕೆ ತಿರುಗಿ, ಇದೇ ನೀರು ಹಳ್ಳದ ನೀರು ಕಾಳಿ ನದಿಗೆ ಸೇರುತ್ತಿದ್ದು, ಇದೇ ನೀರನ್ನು ದಾಂಡೇಲಿ ನಗರದ ಜನತೆ ಹಾಗೂ ಕುಡಿಯುವುದಕ್ಕೆ ಹಾಗೂ ಬಹುಪಯೋಗಿ ಕೆಲಸಕ್ಕೆ ಉಪಯೋಗಿಸುತ್ತಿರುವುದರಿಂದ ಬಹುಶಃ ಭಾಗಶಃ ಜನತೆಯ ಆರೋಗ್ಯ ಮೇಲೆ ದುಷ್ಪರಿಣಾಮ ಬೀರಿರುವ ಸಾಧ್ಯತೆಗಳು ಇವೆ ಎಂಬುದಕ್ಕೆ ಪೂರಕ ಅಂಶಗಳು ಇವೆ. ಮತ್ತೊಂದು ಕಡೆ ಈ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಲಿನಿಂದ ದಿನಂಪ್ರತಿ ಹೊರಸೂಸುವ ರಾಸಾಯನಿಕ ಮಿಶ್ರಿತ ಧೂಳು ಸಹ ಹೆಚ್ಚಾಗುತ್ತಿದ್ದು, ಜನತೆಯ ಉಸಿರಾಟದ ಮೇಲೆ ದುಷ್ಪರಿಣಾಮ ಬೀರಿರುವ ಲಕ್ಷಣಗಳ ಉಧಾಹರಣೆಗಳು ಸಹ ಇವೆ. ಇನ್ನೊಂದು ಕಡೆ ದಾಂಡೇಲಿ ನಗರಾದ್ಯಂತ ಒಂದು ರೌಂಡ್ ಸಂಚಾರ ಮಾಡಿದ್ರೆ ಸಾಕು ಕೆಟ್ಟ ವಾಸನೆ ಸಹ ಬರುತ್ತಿದ್ದು, ಇದರಿಂದ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.

ಇದಕ್ಕೆ ಸ್ಪಷ್ಟ ಉದಾಹರಣೆ ಎಂಬಂತೆ ಇಲ್ಲಿ ವಾಸ ಮಾಡುವ ಬಹುತೇಕರಿಗೆ ಉಸಿರಾಟದ ಸಮಸ್ಯೆ ಜೊತೆಗೆ ವಿವಿಧ ಆರೋಗ್ಯ ಸಮಸ್ಯೆಗಳು ಇರುವುದಕ್ಕೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ದಾಖಲಾತಿ ಹಾಗೂ ಮೆಡಿಕಲ್ ಶಾಪ್ ಗಳಲ್ಲಿ ಖರೀಧಿ ಮಾಡುವ ಮಾತ್ರೆ ಹಾಗೂ ಔಷಧಿಗಳನ್ನು ಅವಲೋಕಿಸಿದಾಗ ಇದು ಕಲುಷಿತ ನೀರು ಹಾಗೂ ಉಸಿರಾಟದ ತೊಂದರೆಯಿಂದ ಸಂಭವಿಸಬಹುದಾದ ತೊಂದರೆಯಿಂದಲೇ ಆಗಿರುವ ಲಕ್ಷಣಗಳು ಗೋಚರಿಸಿದ್ದು, ಆರೋಗ್ಯ ಪರಿಸರಕ್ಕೆ ಹಾನಿಯಾಗಿರುವ ಸಾಧ್ಯತೆ ಇದೆ.

ಇನ್ನೊಂದು ಕಡೆ ನಗರಸಭೆಯಿಂದ ಯು.ಜಿ. ಡಿ ಸ್ಕೀಮ್ ಮಾಡಲಾಗಿದ್ದು ವಿಪರ್ಯಾಸ ಎಂದರೇ ಈ ವಿಷಯುಕ್ತ ನೀರನ್ನು ಸಹ ಪೈಪ್ ಮೂಲಕ ಹಳ್ಳಕ್ಕೆ ಬಿಟ್ಟಿರುವ ವಾಸ್ತವಗಳು ಬೆಳಕಿಗೆ ಬಂದಿವೆ. ಆದ್ದರಿಂದ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಅವರು ಇಲ್ಲಿನ ಸ್ಥಳೀಯರ ಮನವಿ ಮೇರೆಗೆ ಭೇಟಿಕೊಟ್ಟು ಸಮಗ್ರವಾಗಿ ವರದಿ ತಯಾರಿಸಿ ರಾಜ್ಯ ಪರಿಸರ ಮಾಲಿನ್ಯ ನಿಗಮದ ಅಧ್ಯಕ್ಷರು ಆದ ನರೇಂದ್ರಸ್ವಾಮಿ ಹಾಗೂ ಕಾರವಾರ ಪರಿಸರ ಮಾಲಿನ್ಯ ಅಧಿಕಾರಿಗಳ ಗಮನಕ್ಕೆ ತೆಗೆದುಕೊಂಡು ಬಂದು ಬೆಳಕಿಗೆ ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದರೂ ಪರಿಸರ ಮಾಲಿನ್ಯ ಅಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳು ಈ ಹಾನಿಕಾರಕ ಅಂಶಗಳನ್ನು ತಡೆಗಟ್ಟುವರೇ ಎಂಬುದನ್ನು ಕಾದುನೋಡಬೇಕಿದೆ.

ವರದಿ: ಬಸವರಾಜು

WhatsApp Group Join Now
Telegram Group Join Now
Share This Article
error: Content is protected !!