ಚೇಳೂರು : ಕುರಿ ಮಂದೆಯೊಳಗೆ ನುಗ್ಗಿದ ಬೀದಿ ನಾಯಿಗಳ ಹಾವಳಿಗೆ 06 ಕುರಿಗಳು ಬಲಿಯಾಗಿ, 02 ಕುರಿಗಳು ತೀವ್ರ ಗಾಯಗೊಂಡಿರುವ ಘಟನೆ ಚೇಳೂರು ತಾಲೂಕಿನ ಪಾಳ್ಯಕೆರೆ ಗ್ರಾಂ.ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗೌನುವಾರಪಲ್ಲಿ ಗ್ರಾಮದಲ್ಲಿ ನಡೆದಿದೆ.
ರವಿ ಕುಮಾರ್ ಎಂಬುವರು ಕೊಟ್ಟಿಗೆಯಲ್ಲಿ ಸುಮಾರು 30ಕ್ಕೂ ಹೆಚ್ಚು ಕುರಿಗಳನ್ನು ಕಟ್ಟಲಾಗಿತ್ತು. ಬೆಳಗ್ಗೆ ಸುಮಾರು 08:30 ಸಮಯದಲ್ಲಿ ಕೊಟ್ಟಿಗೆ ಪ್ರವೇಶಿದ ಬೀದಿನಾಯಿಗಳು ಕುರಿಗಳ ಮೇಲೆ ದಾಳಿ ನಡೆಸಿವೆ.ಇವುಗಳ ಚೀರಾಟ ಕೇಳಿ ಅಕ್ಕಪಕ್ಕದವರ ಸಹಾಯದಿಂದ ನಾಯಿಗಳನ್ನು ಓಡಿಸುವಷ್ಟರಲ್ಲಿ 06 ಕುರಿಗಳು ಮೃತಪಟ್ಟಿದ್ದವು. 02 ಕುರಿಗಳು ಗಾಯಗೊಂಡಿದ್ದವು ಎಂದು ಮನೆಯ ಮಾಲೀಕರು ತಿಳಿಸಿದ್ದಾರೆ.
ಇದರಿಂದ ಸುಮಾರು 70 ಸಾವಿರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. 02 ಕುರಿಗಳಿಗೆ ಪಶು ವೈದ್ಯರು ಚಿಕಿತ್ಸೆ ನೀಡಿದರು. ಈ ಕುರಿಗಳು ಬದುಕುಳಿಯುವುದು ಕಷ್ಟ ಎನ್ನುತ್ತಾರೆ ರೈತ.
ಕುರಿ ಮಾಲೀಕ ಕಣ್ಣೀರು ; ಬೆಳಗ್ಗೆ ಸುಮಾರು 08:30 ರಲ್ಲಿ ಊರಿನ ಹೊರವಲಯದಲ್ಲಿ ಇರುವ ಕುರಿದೊಡ್ಡಿ ಒಳಗೆ ಏಕಾಏಕಿ ನುಗ್ಗಿದ ನಾಲೈದು ಬೀದಿ ನಾಯಿಗಳು 06 ಕುರಿಗಳನ್ನು ಕೊಂದು, 02 ಕುರಿಗಳನ್ನು ವಿಚಿತ್ರವಾಗಿ ಗಾಯಗೊಳಿಸಿ, ನಮ್ಮ ಬದುಕನ್ನೆ ಕಿತ್ತುಕೊಂಡಿವೆ ಎಂದು ರವಿ ಕುಮಾರ್ ಕಣ್ಣೀರಿಟ್ಟರು.
ಕುರಿ, ಮೇಕೆ ಸಾಕಾಣಿಕೆಯಿಂದಲೇ ಜೀವನ ನಡೆಸುತ್ತಿರುವ ರೈತ ಇದೀಗ ತೀವ್ರ ನಷ್ಟಕ್ಕೆ ಒಳಗಾಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು.
– ಸುರೇಂದ್ರ ಜಿವಿ
ಕಾಂಗ್ರೆಸ್ ಮುಖಂಡರು ಚೇಳೂರು.
ವರದಿ :ಯಾರಬ್. ಎಂ.
ಚೇಳೂರು ತಾಲ್ಲೂಕು ನ್ಯೂಸ್




