ರಾಜಕೋಟ್: ಡರೇಲ್ ಮಿಚೆಲ್ ಅವರ ಅಜೇಯ ಶತಕ (೧೩೧) ನೆರವಿನಿಂದ ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಭಾರತ ವಿರುದ್ಧ ಕಳೆದ ರಾತ್ರಿ ಇಲ್ಲಿ ಮುಗಿದ ದ್ವಿತೀಯ ಏಕದಿನ ಪಂದ್ಯವನ್ನು ೭ ವಿಕೆಟ್ ಗಳಿಂದ ಗೆದ್ದುಕೊಂಡಿತು.
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಈಗ ಭಾರತ ಮೊದಲ ಪಂದ್ಯವನ್ನು ಗೆದ್ದರೆ, ದ್ವಿತೀಯ ಪಂದ್ಯವನ್ನು ನ್ಯೂಜಿಲೆಂಡ್ ಗೆದ್ದುಕೊಂಡಿದೆ. ಮೂರು ಪಂದ್ಯಗಳ ಏಕದಿನ ಸರಣೀ ೧-೧ ರಲ್ಲಿ ಸಮಗೊಂಡಿದೆ. ಮೂರನೇ ಹಾಗೂ ಕಡೆಯ ಪಂದ್ಯ ಸರಣಿ ವಿಜೇತರನ್ನು ನರ್ಧರಿಸಲಿದೆ.
ಸ್ಕೋರ್ ವಿವರ
ಭಾರತ ೫೦ ಓವರುಗಳಲ್ಲಿ ೭ ವಿಕೆಟ್ಗೆ ೨೮೪
ಕೆ.ಎಲ್. ರಾಹುಲ್ ಅಜೇಯ ೧೧೨ ( ೯೨ ಎಸೆತ, ೧೧ ಬೌಂಡರಿ, ೧ ಸಿಕ್ಸರ್), ಶುಭಮಾನ್ ಗಿಲ್ (೫೬) ೫೩ ಎಸೆತ, ೯ ಬೌಂಡರಿ, ೧ ಸಿಕ್ಸರ್) ಕ್ರಿಸ್ಟಿಯನ್ ಕ್ರ್ಕ್ ೫೬ ಕ್ಕೆ ೩)
ನ್ಯೂಜಿಲೆಂಡ್ ೪೭.೩ ಓವರುಗಳಲ್ಲಿ ೩ ವಿಕೆಟ್ ಗೆ ೨೮೬
ಡರೆಲ್ ಮಿಚೆಲ್ ೧೩೧ ( ೧೧೭ ಎಸೆತ, ೧೧ ಬೌಂಡರಿ, ೨ ಸಿಕ್ಸರ್)
ವಿಲ್ ಯಂಗ್ ೮೭ ( ೯೮ ಎಸೆತ, ೭ ಬೌಂಡರಿ) ಪ್ರಸಿದ್ಧ ಕೃಷ್ಣ ೪೯ ಕ್ಕೆ ೧)
ಪಂದ್ಯ ಶ್ರೇಷ್ಠ: ಡರೆಲ್ ಮಿಚೆಲ್
ಕಿವೀಸ್ಗೆ ೭ ವಿಕೆಟ್ಗಳ ಜಯ: ಸರಣಿ ೧-೧




