ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಗರಣಗಳ ಮೇಲೆ ಹಗರಣಗಳು ನಡೆಯುತ್ತಲೇ ಇವೆ. ಇದೀಗ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಒಟ್ಟು 1.15 ಲಕ್ಷ ನೌಕರರ 2 ಸಾವಿರ ಕೋಟಿಗೂ ಅಧಿಕ ಪಿ ಎಫ್ ಹಣವನ್ನು ನಿಗಮದ ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ.ಹೌದು 1.15 ಲಕ್ಷ ಸಾರಿಗೆ ನೌಕರರಿಗೆ ಇದೀಗ ಬಿಗ್ ಶಾಕ್ ಎದುರಾಗಿದ್ದು, ಸಾರಿಗೆ ಸಿಬ್ಬಂದಿಯ ಪಿಎಫ್ ಹಣವನ್ನು ನಿಗಮದ ಅಧಿಕಾರಿಗಳು ನುಂಗಿ ನೀರು ಕುಡಿದರಾ? ಎನ್ನುವ ಅನುಮಾನ ಮೂಡಿದೆ. ಸಾರಿಗೆ ಸಂಸ್ಥೆಯಯಲ್ಲಿನ ಡ್ರೈವರ್ ಮತ್ತು ಕಂಡಕ್ಟರ್ಗಳ ಪಿಎಫ್ ಹಣವನ್ನು ಇದೀಗ ಅಧಿಕಾರಿಗಳು ನುಂಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
4 ನಿಗಮಗಳ ಅಧಿಕಾರಿಗಳಿಂದ ಸಿಬ್ಬಂದಿಗಳ ಪಿಎಫ್ ಹಣ ದುರ್ಬಳಕೆಯಾಗಿದೆ. ಬಿಎಂಟಿಸಿ ಮತ್ತು ಕೆಎಸ್‌ಆರ್ಟಿಸಿ ಸೇರಿ ಒಟ್ಟು 4 ನಿಗಮದ ನೌಕರರ ಹಣವನ್ನು ನಿಗಮದ ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ. ನಿಗಮದ ನೌಕರರ 2792.61 ಕೋಟಿ ಹಣ ನುಂಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.