ಬೆಂಗಳೂರು : ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಗ್ಗನಹಳ್ಳಿಯಲ್ಲಿ ದಿನಾಂಕ: 04-05-2025 ರಿಂದಾ ದಿನಾಂಕ:06-05-2025ರ ವರೆಗೆ ಶ್ರೀ ಶ್ರೀ ಹನುಮಂತ ದೇವರ, ಶ್ರೀ ಪೂಜಮ್ಮ ದೇವಿ ಮತ್ತು ಅಣ್ಣಮ್ಮ ದೇವಿಯ ಜಾತ್ರಾ ಮಹೋತ್ಸವ ಬಹು ವಿಜೃಂಭಣೆಯಿಂದ ಜರುಗಲಿದೆ.
ದಿ:04-05-2025ರಂದು ಭಾನುವಾರ ಸಾಯಂಕಾಲ 5-00ಗಂಟೆಗೆ ಶ್ರೀ ಹನುಮಂತ ದೇವರ ದೇವಸ್ಥಾನ ಹತ್ತಿರ ಗಂಗೆಫೂಜೆ, ಶ್ರೀ ಪೂಜಮ್ಮ ದೇವಿ ದೇವಸ್ಥಾನ ಬಳಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಅಂದೇ ರಾತ್ರಿ 12-00ಗಂಟೆಗೆ ಕೊಂಡ ಅಗ್ನಿ ಸ್ಪರ್ಶ ಪೂಜಾ ನಡೆಯಲಿದೆ.
ದಿ: 05-05-2025ರಂದು ಸೋಮವಾರ ಬೆಳಿಗ್ಗೆ 08 ಗಂಟೆಗೆ ಶ್ರೀ ಹನುಮಂತ ದೇವರಿಗೆ ಬೆಲ್ಲದ ಆರುತಿ, ಶ್ರೀಪೂಜಮ್ಮ,ಅಣ್ಣಮ್ಮ, ಜಲಗೇರಮ್ಮ ಮತ್ತು ಸರ್ಕಲ್ ಮಾರಮ್ಮ ದೇವಿಗೆ ಮದ್ಯಾಹ್ನ 2ಕ್ಕೆ ತಂಬಿಟ್ಟು ಆರತಿ ನಂತರ ಕೊಂಡ ಹಾಯುವುದು ಮತ್ತು ಸಂಜೆ 6ಗಂಟೆಗೆ ಹೆಗ್ಗನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಮೈದಾನದಲ್ಲಿ ‘ಕುರುಕ್ಷೇತ್ರ’ ಪೌರಾಣಿಕ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.
ದಿ:06-05-2025ರಂದು ಮಂಗಳವಾರ ಸಂಜೆ 5ಗಂಟೆಗೆ ಪಲ್ಲಕ್ಕಿ ಮೆರವಣಿಗೆ ಜಾನಪದ ನೃತ್ಯ, ವಾದ್ಯಗಳೊಂದಿಗೆ, ವೀರಗಾಸೆ, ಡೊಳ್ಳು ಕುಣಿತ ದೊಂದಿಗೆ ಹೆಗ್ಗನಹಳ್ಳಿ ಸರ್ಕಾರಿ ಶಾಲಾ ಮೈದಾನರಿಂದ ಹೆಗ್ಗನಹಳ್ಳಿ ಮುಖ್ಯ ರಸ್ತೆ, ಡೈರಿ ಸರ್ಕಲ್, ಪೀಣ್ಯ 2ನೇ ಹಂತ, ರಾಮಯ್ಯ ಬಡಾವಣೆ, ಫ್ರೆಂಡ್ಸ್ ಕಾಲೊನಿ, ಮಾರುತಿ ನಗರ, ಅಂದ್ರಹಳ್ಳಿ ಮುಖ್ಯ ರಸ್ತೆ, ಶ್ರೀಗಂಧ ನಗರ,ಕೆಟಿಜಿ ರಸ್ತೆ, ಪುನಿತ್ ರಾಜಕುಮಾರ್ ರಸ್ತೆ, ಹೆಗ್ಗನಹಳ್ಳಿ ಕ್ರಾಸ್, ಓಂ ಶಕ್ತಿ ದೇವಸ್ಥಾನ ರಸ್ತೆ, ಪಟಾಕಿ ಗೋಡನ್, ಶಿವಾನಂದ ನಗರ, ಈ ರಾಜಬೀದಿಗಳಲ್ಲಿ ಮೆರವಣಿಗೆ ನಡೆಯಲಿದ್ದು, ಶ್ರೀ ಹನುಮಂತ ದೇವರ ದೇವಸ್ಥಾನ ಆವರಣಕ್ಕೆ ತಲುಪುವ ಮೂಲಕ ಮುಕ್ತಾಯ ಗೊಳ್ಳಲಿದೆ ಎಂದು ಹೆಗ್ಗನಹಳ್ಳಿ ಗ್ರಾಮಸ್ಥರು ದೇವಸ್ಥಾನಗಳ ಭಕ್ತ ಮಂಡಳಿಯವರು ತಿಳಿಸಿದ್ದಾರೆ.
ವರದಿ : ಅಯ್ಯಣ್ಣ ಮಾಸ್ಟರ್