Ad imageAd image

ಹೈಕೋರ್ಟ್ ಆದೇಶದಿಂದಾಗಿ ಕಮಲನಗರ ಹಾಗೂ ಸೊನಾಳ ಗ್ರಾಮಕ್ಕೆ 1.30 ಕೋಟಿ ಅನುದಾನ ಮಂಜೂರು

Bharath Vaibhav
ಹೈಕೋರ್ಟ್ ಆದೇಶದಿಂದಾಗಿ ಕಮಲನಗರ ಹಾಗೂ ಸೊನಾಳ ಗ್ರಾಮಕ್ಕೆ 1.30 ಕೋಟಿ ಅನುದಾನ ಮಂಜೂರು
WhatsApp Group Join Now
Telegram Group Join Now

ಹೈಕೋರ್ಟ್ ಆದೇಶದಿಂದಾಗಿ ಕಮಲನಗರ ಹಾಗೂ ಸೊನಾಳ ಗ್ರಾಮಕ್ಕೆ
1.30 ಕೋಟಿ ಅನುದಾನ ಮಂಜೂರು (WP No. 10662/2022 (GM-RES-(PIL).

ಬೀದರ: ಸಮಾಜ ಸೇವಕ ಗುರುನಾಥ ವಡ್ಡೆಯವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ, ಕರ್ನಾಟಕ ಉಚ್ಛ ನ್ಯಾಯಾಲಯ ಬೆಂಗಳೂರು ಆದೇಶದಿಂದಾಗಿ ಬೀದರ ಜಿಲ್ಲೆಯ ಕಮಲನಗರ ತಾಲೂಕಾ ಕೇಂದ್ರದಲ್ಲಿ ಕಮಲನಗರ ಗ್ರಾಮದ ಪ.ಜಾತಿ. ಮತ್ತು ಪ.ಪಂಗಡ ಕಾಲೋನಿಗಳಲ್ಲಿ ಸಿ.ಸಿ. ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕಾಗಿ 98.65 ಲಕ್ಷ ರೂಪಾಯಿ ಹಾಗೂ ಬೀದರ ಜಿಲ್ಲೆಯ ಕಮಲನಗರ ತಾಲೂಕಿನ ಸೊನಾಳ ಗ್ರಾಮದ ಪರಿಶಿಷ್ಟ ಜಾತಿ (ಬಸವನಗರ) ಕಾಲೋನಿಗಳಲ್ಲಿ ಸಿ.ಸಿ. ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕಾಗಿ ರೂ. 32.00 ಲಕ್ಷ ರೂಪಾಯಿ ಹೀಗೆ ಒಟ್ಟು ರೂ.130.65 ಲಕ್ಷ ಅನುದಾನ ಮಂಜೂರಾಗಿರುತ್ತದೆ. ಈಗಾಗಲೇ ಈ ಎರಡು ಕಾಮಗಾರಿಗಳಿಗೆ ಪಂಚಾಯತ್ ರಾಜ್ ಇಂಜಿನೀಯರಿAಗ್ ವಿಭಾಗ, ಬೀದರದಿಂದ ದಿನಾಂಕ: 03-10-2024 ರಂದು ಟೆಂಡರ್ ಕರೆಯಲಾಗಿದೆ (ಟೆಂಡರ್ ಸಂಖ್ಯೆ: RDPR/2024-25/RD/WORK_INDENT9190, RDPR/2024-25/RD/WORK_INDENT9191). ಸಮಾಜ ಸೇವಕ ಗುರುನಾಥ ವಡ್ಡೆಯವರು ಕಮಲನಗರ ಹಾಗೂ ಸೊನಾಳ ಗ್ರಾಮದ ಬಸವನಗರದಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಲೋನಿಗಳಲ್ಲಿ ಸಿ.ಸಿ. ರಸ್ತೆ ಮತ್ತು ಚರಂಡಿಗಾಗಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಸದರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆದು, ದಿನಾಂಕ: 05-12-2022 ರಂದು ಆದೇಶವಾಗಿರುತ್ತದೆ. ಸದರಿ ಆದೇಶದ ಅನುಸಾರ ಸರ್ಕಾರದಿಂದ ದಿನಾಂಕ: 20-02-2024 ರಂದು 2023-24ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯೋಜನೆಯಡಿ ಬೀದರ ಜಿಲ್ಲೆಯ ಕಮಲನಗರ ತಾಲೂಕಿನ, ಕಮಲನಗರ ಗ್ರಾಮ ಹಾಗೂ ಕಮಲನಗರ ತಾಲೂಕಿನ ಸೊನಾಳ ಗ್ರಾಮದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಾಲೋನಿಯಲ್ಲಿ ಒಟ್ಟು ರೂ.130.65 ಕೋಟಿ ಅನುದಾನ ಮಂಜೂರು ಆಗಿರುತ್ತದೆ.
ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಕ್ಕಾಗಿ ನ್ಯಾಯಾಲಯಕ್ಕೆ ಮೊರೆ ಹೋಗಿ, ಜನ ಸಾಮಾನ್ಯರೂ ಕೂಡ ಅಭಿವೃದ್ಧಿಗಾಗಿ ಸರ್ಕಾರದಿಂದ ಅನುದಾನ ತಂದು, ಮೂಲಭೂತ ಸೌಲಭ್ಯಗಳು ಪಡೆಯಬಹುದು ಎಂಬುದನ್ನು ಸಮಾಜ ಸೇವಕ ಗುರುನಾಥ ತಿಳಿಸಿರುತ್ತಾರೆ.

ವರದಿ : ಸಂತೋಷ ಬಿಜಿ ಪಾಟೀಲ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!