ನಿಪ್ಪಾಣಿ :– ಆರೋಗ್ಯ ಇಲಾಖೆಯಿಂದ 5 ಪಿಎಚ್ ಸಿ ಗಳ ಕಟ್ಟಡ ನಿರ್ವಹಣೆಗೆ 1ಕೋಟಿ 44 ಲಕ್ಷ ರೂಪಾಯಿಗಳ ನಿಧಿ ಮಂಜೂರು. ಬೇಡಕಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕಿ ಶಶಿಕಲಾ ಜೊಲ್ಲೆ ಅಂಕರಿಂಗ್ – ಹೌದು ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ಕಾರದಗಾ,ಬೇನಾಡಿ, ಸೌಂದಲಗಾ,ಹಾಗೂ ಬೋರಗಾವ ಪಟ್ಟಣದ ಒಟ್ಟು ಐದು ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ವಹಣೆಗಾಗಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಒಟ್ಟು ಒಂದು ಕೋಟಿ 44 ಲಕ್ಷ ರೂಪಾಯಿ ನಿಧಿ ಮಂಜೂರಾಗಿದ್ದು ಗುರುವಾರ ಬೆಳಿಗ್ಗೆ ಬೇಡಕಿಹಾಳದ ಪಿಎಚ್‌ಸಿಯಲ್ಲಿ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರ ಮುಖ್ಯ ಉಪಸ್ಥಿತಿಯಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಪ್ರಾರಂಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಬಿಜೆಪಿ ಮಹಿಳಾ ಕಾರ್ಯಕರ್ತರಿಂದ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಾದ ರಾಮಗೌಡ ಪಾಟೀಲ್ ರಾಮಚಂದ್ರ ಡೋಮನೆ, ರಾಜು ಹನಬರಟ್ಟಿ ,ಸಂಜಯ ಚೌಗುಲೆ ಬಾಳಾಸಾಹೇಬ ಶಿಂದೆ, ಪ್ರಕಾಶ ತಾರದಾಳೆಯವರಿಂದ ಶ್ರೀ ಫಲಾರ್ಪಣೆ, ಮತ್ತು ರಮೇಶ ಹಣಬರಟ್ಟಿ, ಶಿವರಾಜ ಚೌಗುಲೆ ಸುರೇಶ್ ಪಾಟೀಲ್ ಅವರಿಂದ ಗುದ್ದಲಿ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಶಶಿಕಲಾ ಜೊಲ್ಲೆ ಮಾತನಾಡಿ “ಒಟ್ಟು ಮಂಜೂರಾದ ಒಂದು ಕೋಟಿ 44 ಲಕ್ಷ ರೂಪಾಯಿಗಳ ನಿಧಿಯಲ್ಲಿ ಐದು ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡದ ನಿರ್ವಹಣೆ ಕಾಮಗಾರಿಗಳಲ್ಲಿ ಪ್ರಮುಖವಾಗಿ ಮಹಿಳೆ ಹಾಗೂ ಪುರುಷರ ವಾರ್ಡ್ಗಳಲ್ಲಿಯ ದುರುಸ್ತಿ ಕಾಮಗಾರಿ,ಶೆಡ್ ನಿರ್ಮಾಣ,ವಿದ್ಯುತ್ ಹಾಗೂ ನೆಲಹಾಸು ಕಾಮಗಾರಿಗೆ ಒತ್ತು ನೀಡಲಾಗಿದೆ.
ಎಂದು ತಿಳಿಸಿದರು. ದರ್ಜೆಯುತ ಹಾಗೂ ಸಕಾಲಕ್ಕೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಿದರು. ಕಾರ್ಯಕ್ರಮ ದಲ್ಲಿ ತಾಲೂಕ ವೈದ್ಯಾಧಿಕಾರಿ ಸುಕುಮಾರ್ ಭಾಗಾಯಿ ಉಪ ಕಾರ್ಯಕಾರಿ ಅಭಿಯಂತರರಾದ ಹೆಚ್ ಅರುಣ್ ಕುಮಾರ್ ಗುತ್ತಿಗೆದಾರ ಲಕ್ಷ್ಮಿಕಾಂತ್ ಭೀಮ ನಾಯಿಕ್ ಸಹಾಯಕ ಶಿವಾನಂದ ಗುಂದಗಿ ಪಿ ಹೆಚ್ ಸಿ ವೈದ್ಯಾಧಿಕಾರಿ ಲಕ್ಷ್ಮಿ ನಾಗನೂರಿ, ಪವನ್ ಪಾಟೀಲ, ಶ್ರೀಕಾಂತ್ ಬನ್ನೆ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ:- ಮಹಾವೀರ