Ad imageAd image

ಮಾದಪ್ಪನಿಗೆ 1ಕೆಜಿ 600 ಗ್ರಾಂ ಬೆಳ್ಳಿ ತಟ್ಟೆ ಕಾಣಿಕೆ

Bharath Vaibhav
ಮಾದಪ್ಪನಿಗೆ 1ಕೆಜಿ 600 ಗ್ರಾಂ ಬೆಳ್ಳಿ ತಟ್ಟೆ ಕಾಣಿಕೆ
WhatsApp Group Join Now
Telegram Group Join Now

ಚಾಮರಾಜನಗರ :ಜಿಲ್ಲೆಯ ಹನೂರು ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಶ್ರೀ ಮಲೆ ಮಹದೇಶ್ವರ ಸ್ವಾಮಿ ಮೂರ್ತಿಗೆ ಮೈಸೂರು ಮೂಲದ ದಾನಿಗಳು 1 ಕೆಜಿ 600 ಗ್ರಾಂನ ಬೆಳ್ಳಿ ಆರತಿ ತಟ್ಟೆಯನ್ನು ಕಾಣಿಕೆಯಾಗಿ ನೀಡಿದ್ದಾರೆ.

ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ಸುಜ್ಜಲೂರು ಗ್ರಾಮದ ಎಂ. ನಾಗಮಣಿ ಕುಟುಂಬದವರು ವಿಶೇಷವಾದ ಬೆಳ್ಳಿ ಆರತಿ ತಟ್ಟೆಯನ್ನು ನೀಡಿದ್ದಾರೆ. ಅರತಿ ತಟ್ಟೆಯ ಮುಂಭಾಗ ಬಸವ, ಮಲೆ ಮಹದೇಶ್ವರ, ಹುಲಿವಾಹನ, ನಾಗರ ಸರ್ಪ, ಆನೆ ಹಾಗೂ ತ್ರಿಶೂಲವಿದೆ. ಮಹದೇಶ್ವರರ ಗರ್ಭಗುಡಿಯ ಬಲಭಾಗ ದಲ್ಲಿರುವ ಕಟ್ಟೆ ಬಸವ, ಉದಯಿಸುತ್ತಿರುವ ಸೂರ್ಯ, ಮಲೆ ಮಹದೇಶ್ವರ ವಾಹನ ಹುಲಿ, ಕೊರಳಲ್ಲಿರುವ ನಾಗರ ಸರ್ಪ, ಮಹದೇಶ್ವರರು ಬಲಗೈನಲ್ಲಿ ಹಿಡಿದುಕೊಂಡಿರುವ ಡಮರುಗ ಸಹಿತ ತ್ರಿಶೂಲ, ತಟ್ಟೆಯ ಮಧ್ಯಭಾಗದಲ್ಲಿ ಹೆಣ್ಣುಮಕ್ಕಳು ಬಳೆ ಹಾಕಿಕೊಂಡು ಎರಡು ಕೈಯಲ್ಲಿ ಹಿಡಿದುಕೊಂಡಿರುವ
ಹಾಗೆ ದೀಪದ ಬೆಳ್ಳಿತಟ್ಟೆ ನೀಡಿರುವುದು ವಿಶೇಷವಾಗಿದೆ.

ಇದೇ ಮಾದರಿಯಲ್ಲಿ ಆರತಿ ತಟ್ಟೆಯನ್ನು ಮಾಡಿಸಲು ನಾಗಮಣಿರವರು ಬೆಳ್ಳಿ ರಥ ತಯಾರು ಮಾಡಿದ ತಮಿಳುನಾಡಿನ ಸೇಲಂನ ಸೆಲ್ಲಂರವರ ಬಳಿ ಹಲವಾರು ಬಾರಿ ಚರ್ಚೆ ಮಾಡಿ ಆರತಿ ತಟ್ಟೆ ತಯಾರು ಮಾಡಿಸಿ ಭಾನುವಾರ ಅವರ ಸಮ್ಮುಖದಲ್ಲಿಯೇ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್ ಅವರಿಗೆ ಹಸ್ತಾಂತರಿಸಿದ್ದಾರೆ.

ಈ ವೇಳೆ ಪಾರುಪತ್ತೆಗಾರ ಮಲ್ಲಿಕಾರ್ಜುನ್, ಆರ್ಮಿ ಆಫೀಸರ್ ಬಿ.ಎಸ್.ರಾಮಕುಮಾ‌ರ್ ಹಾಜರಿದ್ದರು.

ವಿಶೇಷವಾದ ಆರತಿ ತಟ್ಟೆಯನ್ನು ಈ ಮಾಡಿಸಿಕೊಡಬೇಕೆಂದು ಮೂರು ವರ್ಷಗಳ ಕಾಲದಿಂದ ಕನಸು ಕಂಡಿದ್ದೆ. ಅದರಂತೆ ಆರತಿ ತಟ್ಟೆ ಸಿದ್ದ ಮಾಡಿಸಿ ಕೊಟ್ಟಿದ್ದೇನೆ ಎಂದು ಆರತಿ ತಟ್ಟೆ ದಾನಿಗಳಾದ ನಾಗಮಣಿ ತಿಳಿಸಿದ್ದಾರೆ.

ವರದಿ :ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!