———————————————————ಮಳೆಯಿಂದ ಫಲಿತಾಂಶ ಕಾಣದ ಪಂದ್ಯ
ಕೋಲ್ಕತ್ತಾ: ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೧೨ ನೇ ಪಂದ್ಯ ಮಳೆಯ ರದ್ದುಗೊಂಡಿದ್ದು, ಉಭಯ ತಂಡಗಳಿಗೆ ತಲಾ ಒಂದು ಪಾಯಿಂಟ್ ನೀಡಲಾಯಿತು.
ಪಂಜಾಬ್ ಕಿಂಗ್ಸ್ ಇದರೊಂದಿಗೆ ೫ ಪಾಯಿಂಟ್‌ಗಳೊAದಿಗೆ ಮೊದಲನೇ ಸ್ಥಾನಕ್ಕೆ ಜಿಗಿಯಿತು.
ಒಂದು ಪಾಯಿಂಟ್ ಕೆಕೆಆರ್ ಪಾಯಿಂಟ್ ಖಾತೆ ತೆರೆಯಿತಲ್ಲದೇ ೮ ನೇ ಸ್ಥಾನದಲ್ಲಿದೆ.
ಕಳೆದ ರಾತ್ರಿ ಇಲ್ಲಿನ ಈಡೆನ್ ಗಾರ್ಡನ್ ಮೈದಾನದಲ್ಲಿ ಮಳೆ ಸುರಿಯಲು ಆರಂಭಿಸಿದಾಗ ಬ್ಯಾಟ್ ಮಾಡುತ್ತಿದ್ದ ಕೆಕೆಆರ್ ೨.೫ ಓವರುಗಳಲ್ಲಿ ೨ ವಿಕೆಟ್‌ಗೆ ೨೫ ರನ್‌ಗಳಿಸಿತ್ತು. ತದನಂತರ ಮಳೆ ನಿಲ್ಲದ ಕಾರಣ ಪಂದ್ಯ ಫಲಿತಾಂಶ ಕಾಣಲು ಸಾಧ್ಯವಾಗಲಿಲ್ಲ.




