Ad imageAd image

ವೃತ್ತಿಪರ ಕೋರ್ಸ್ ಗಳಿಗೆ ಶೇ.10 ಶುಲ್ಕ ಹೆಚ್ಚಳ 

Bharath Vaibhav
ವೃತ್ತಿಪರ ಕೋರ್ಸ್ ಗಳಿಗೆ ಶೇ.10 ಶುಲ್ಕ ಹೆಚ್ಚಳ 
WhatsApp Group Join Now
Telegram Group Join Now

ಬೆಂಗಳೂರು: ರಾಜ್ಯದಲ್ಲಿ ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕೋರ್ಸ್ ಗಳ ಶುಲ್ಕವನ್ನು ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಅನ್ವಯವಾಗುವಂತೆ ಶೇಕಡ 10ರಷ್ಟು ಹೆಚ್ಚಳ ಮಾಡಿ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಸರ್ಕಾರಿ ಕಾಲೇಜುಗಳು, ಸರ್ಕಾರಿ ಅನುದಾನಿತ ಕಾಲೇಜುಗಳು, ಮೈಸೂರು ವಿವಿ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಘಟಕದ ಕಾಲೇಜುಗಳಲ್ಲಿ ಶೇಕಡ 50ರಷ್ಟು ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಸೀಟುಗಳಿಗೆ 42,116 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ.

ಖಾಸಗಿ ಕಾಲೇಜುಗಳಲ್ಲಿರುವ ಸರ್ಕಾರಿ ಕೋಟಾದ ಸೀಟುಗಳಿಗೆ 76,135 ರೂ. ಅಥವಾ 84,596 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಕಾಮೆಡ್ -ಕೆ ಕೋಟಾ ಸೀಟುಗಳಿಗೆ 1,86,111 ರೂ. ಅಥವಾ 2,61,477 ರೂ. ಪಾವತಿಸಬೇಕಿದೆ.

ಅನುದಾನ ರಹಿತ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಇತರೆ ಶುಲ್ಕವಾಗಿ ವಾರ್ಷಿಕ 20,000 ರೂ. ಮೀರದಂತೆ ಪ್ರಥಮ ವರ್ಷದ ಶುಲ್ಕ ಪಡೆಯಲು ಅವಕಾಶ ಕಲ್ಪಿಸಿ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!