ಪ್ರಯಾಗ್ರಾಜ್: ಮಹಾಶಿವರಾತ್ರಿಯಂದು ಭಾನುವಾರ ಪ್ರಯಾಗ್ರಾಜ್ನ(Prayagraj) ಸಂಗಮ್ ಘಾಟ್ಗಳಲ್ಲಿ ಅಂದಾಜು 10 ಲಕ್ಷ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ ಎಂದು ವರದಿಯಾಗಿದೆ.
ಬೆಳಿಗ್ಗೆಯಿಂದಲೇ ಯಾತ್ರಿಕರು ಆಗಮಿಸಲು ಪ್ರಾರಂಭಿಸಿದರು, ದಡದ(Sangam ghats) ಉದ್ದಕ್ಕೂ ಜಪಗಳು ಮತ್ತು ಪ್ರಾರ್ಥನೆಗಳು ನಡೆದವು.
ಮುಂಜಾನೆಯಿಂದಲೇ ಭಕ್ತರು ‘ಓಂ ನಮಃ ಶಿವಾಯ’ ಘೋಷಣೆಗಳೊಂದಿಗೆ ಸಂಗಮದಲ್ಲಿ ಮುಳುಗಿ, ಮಂಕಮೇಶ್ವರ್ ಮತ್ತು ಸೋಮೇಶ್ವರ್ ಮಹಾದೇವ್ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು.
ಮಹಾಶಿವರಾತ್ರಿಯು ಮಾಘ ಮೇಳದ ಕೊನೆಯ ಮತ್ತು ಪ್ರಮುಖ ಸ್ನಾನದ ದಿನವಾಗಿದ್ದು, ಲಕ್ಷಾಂತರ ಜನರು ಸಂಗಮದಲ್ಲಿ (ಗಂಗಾ-ಯಮುನಾ-ಸರಸ್ವತಿ) ಪವಿತ್ರ ಮುಳುಗೇಳುವ ಮೂಲಕ ಪುನೀತರಾದರು.
ಹರಿಯಾಣ, ಉತ್ತರ ಪ್ರದೇಶ ಮತ್ತು ದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದು, ಬೆಳಿಗ್ಗೆಯಿಂದಲೇ ಸಂಗಮ ಘಟ್ಟಗಳು ಭಕ್ತಿಮಯವಾಗಿ ಮಾರ್ಪಟ್ಟಿದ್ದವು.




