ಪ್ರಯಾಗ್‌ರಾಜ್: ಮಹಾ ಕುಂಭಮೇಳಕ್ಕೆ ಕೋಟಿ ಕೋಟಿ ಭಕ್ತರು ಬರುತ್ತಿರುವ ಹಿನ್ನೆಲೆಯಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಇದರ ಜೊತೆಗೆ ಅಪಘಾತದ ಸಂಖ್ಯೆ ಕೂಡ ಹೆಚ್ಚಾಗುತ್ತಿದ್ದು, ಉತ್ತರ ಪ್ರದೇಶದ ತ್ರಿವೇಣಿ ಸಂಗಮಕ್ಕೆ ಹೋಗಿ ವಾಪಸ್ ಬರುವ ಸಮಯದಲ್ಲೇ ಭಕ್ತರು ಭೀಕರ ಅಪಘಾತಕ್ಕೆ ಬಲಿಯಾಗಿದ್ದಾರೆ.
ಪ್ರಯಾಗ್‌ರಾಜ್ ರಸ್ತೆಯಲ್ಲೇ ಈ ರೀತಿಯಾಗಿ ಭೀಕರ ಅಪಘಾತ ಸಂಭವಿಸಿದ್ದು, ಮಿರ್ಜಾಪುರ ಹೆದ್ದಾರಿಯಲ್ಲಿ ಬಸ್ & ಬೊಲೆರೊ ನಡುವಿನ ಭೀಕರ ಅಪಘಾತಕ್ಕೆ 10 ಜನ ಬಲಿಯಾಗಿದ್ದಾರೆ. ಇದೇ ಅಪಘಾತದಲ್ಲಿ 19 ಮಂದಿ ಗಾಯಗೊಂಡಿದ್ದು, ತ್ರಿವೇಣಿ ಸಂಗಮಕ್ಕೆ ತೆರಳಿ ಪವಿತ್ರ ಸ್ನಾನ ಮುಗಿಸಿ ಇವರು ತಮ್ಮ ಊರುಗಳಿಗೆ ತೆರಳುತ್ತಿದ್ದರು.
ಈ ಅಪಘಾತ ಸಂಭವಿಸಿದ ಬೊಲೆರೊದಲ್ಲಿ ಬರುತ್ತಿದ್ದವರು ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯವರು, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಭಕ್ತರು ಮಧ್ಯಪ್ರದೇಶ ಮೂಲದವರು ಎಂದು ತಿಳಿದುಬಂದಿದೆ