ಶ್ರೀನಗರ: ಕಿಶ್ತ್ವಾರ್ ಜಿಲ್ಲೆಯ ಪದ್ದಾರ್ ತಶೋತಿ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಇದರಿಂದಾಗಿ ಹಠಾತ್ ಪ್ರವಾಹ ಉಂಟಾಗಿ ಲಂಗರ್ (ಸಮುದಾಯ ಅಡುಗೆಮನೆ) ಶೆಡ್ ಕೊಚ್ಚಿಹೋಗಿದ್ದು, ಕನಿಷ್ಠ 10 ಜನರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಕೇಂದ್ರ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಪರಿಸ್ಥಿತಿಯನ್ನು ಅವಲೋಕಿಸಿ, ಜಮ್ಮು ಮತ್ತು ಕಾಶ್ಮೀರದ ವಿರೋಧ ಪಕ್ಷದ ನಾಯಕ ಮತ್ತು ಸ್ಥಳೀಯ ಶಾಸಕ ಸುನಿಲ್ ಕುಮಾರ್ ಶರ್ಮಾ ಅವರ ತುರ್ತು ಸಂದೇಶದ ನಂತರ, ಡಿಸಿ ಕಿಶ್ತ್ವಾರ್, ಪಂಕಜ್ ಕುಮಾರ್ ಶರ್ಮಾ ಅವರೊಂದಿಗೆ ಮಾತನಾಡಿರುವುದಾಗಿ ತಿಳಿಸಿದರು.
“ಜಮ್ಮು-ಕಾಶ್ಮೀರ ಲೋಕೋಪಯೋಗಿ ಇಲಾಖೆ ಮತ್ತು ಸ್ಥಳೀಯ ಶಾಸಕ ಸುನಿಲ್ ಕುಮಾರ್ ಶರ್ಮಾ ಅವರಿಂದ ತುರ್ತು ಸಂದೇಶ ಬಂದ ನಂತರ ಇದೀಗ ಜಿಲ್ಲಾಧಿಕಾರಿ ಕಿಶ್ತ್ವಾರ್ ಪಂಕಜ್ ಕುಮಾರ್ ಶರ್ಮಾ ಅವರೊಂದಿಗೆ ಮಾತನಾಡಿದ್ದಾರೆ.
ಚೋಸಿತಿ ಪ್ರದೇಶದಲ್ಲಿ ಭಾರಿ ಮೇಘಸ್ಫೋಟ ಸಂಭವಿಸಿದ್ದು, ಇದು ಗಣನೀಯ ಸಾವುನೋವುಗಳಿಗೆ ಕಾರಣವಾಗಬಹುದು. ಆಡಳಿತವು ತಕ್ಷಣ ಕಾರ್ಯಪ್ರವೃತ್ತವಾಗಿದೆ; ರಕ್ಷಣಾ ತಂಡವು ಸ್ಥಳಕ್ಕೆ ತೆರಳಿದೆ. ಹಾನಿ ಮೌಲ್ಯಮಾಪನ ಮತ್ತು ಅಗತ್ಯ ರಕ್ಷಣಾ ಮತ್ತು ವೈದ್ಯಕೀಯ ನಿರ್ವಹಣಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ” ಎಂದು ಅವರು X ನಲ್ಲಿ ಬರೆದಿದ್ದಾರೆ.
ಮಚೈಲ್ ಮಾತಾ ಯಾತ್ರೆಯ ಆರಂಭಿಕ ಹಂತವಾದ ಕಿಶ್ತ್ವಾರ್‌ನ ಚಶೋತಿ ಪ್ರದೇಶದಲ್ಲಿ ಹಠಾತ್ ಪ್ರವಾಹ ಸಂಭವಿಸಿದೆ ಎಂದು ಕಿಶ್ತ್ವಾರ್ ಉಪ ಆಯುಕ್ತ ಪಂಕಜ್ ಶರ್ಮಾ ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು.
ದುರಂತ ಘಟನೆಯ ನಂತರ ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊಗಳು ಭಯಾನಕ ದೃಶ್ಯಗಳನ್ನು ತೋರಿಸುತ್ತವೆ.ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಎಲ್‌ಜಿ ಮನೋಜ್ ಸಿನ್ಹಾ ಸಂತಾಪ ಸೂಚಿಸಿದ್ದಾರೆ.




