Ad imageAd image

ಬಾಂಜಾರು ಮಲೆಯಲ್ಲಿ ಶೇ.100ರಷ್ಟು ಮತದಾನ

Bharath Vaibhav
ಬಾಂಜಾರು ಮಲೆಯಲ್ಲಿ ಶೇ.100ರಷ್ಟು ಮತದಾನ
WhatsApp Group Join Now
Telegram Group Join Now

ದಕ್ಷಿಣ ಕನ್ನಡ: ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಾಂಜಾರು ಮಲೆಯಲ್ಲಿ ಶೇ.100ರಷ್ಟು ಮತದಾನ ಆಗಿದ್ದು, ಅಧಿಕಾರಿಗಳು ಗ್ರಾಮಸ್ಥರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಹೌದು. ನಿನ್ನೆ ನಡೆದಂತ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ ಮೊದಲ ಬಾರಿಗೆ ನಕ್ಸಲ್ ಪೀಡಿತ ಬಾಂಜಾರುಮಲೆಯಲ್ಲಿ ಶೇ.100 ಮತದಾನವಾಗಿ, ದಾಖಲೆ ನಿರ್ಮಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಬಾಂಜಾರುಮಲೆಯ ಮತಗಟ್ಟೆ ಸಂಖ್ಯೆ 86ರ ಸಮುದಾಯ ಭವನದಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇಲ್ಲಿ 51 ಮಹಿಳೆಯರು, 60 ಪುರುಷರು ಸೇರಿ ಒಟ್ಟು 111 ಮತದಾರರಿದ್ದಾರೆ.

2019ರಲ್ಲಿ ಇಲ್ಲಿ ಶೇ.99ರಷ್ಟು ಮತದಾನವಾಗಿತ್ತು. ಈ ಬಾರಿ ಜಿಲ್ಲಾ ಸ್ವೀಪ್ ಸಮಿತಿ ಮಾರ್ಗದರ್ಶನದಂತೆ ಬೆಳ್ತಂಗಡಿ ತಾಲೂಕಿನ ಸ್ವೀಪ್ ಸಮಿತಿ ಅಧ್ಯಕ್ಷ ವೈಜಣ್ಣ ಹಾಗೂ ತಂಡ ಶೇ.100ರಷಅಟು ಮತದಾನ ಮಾಡುವಂತೆ ಊರ ಜನರಲ್ಲಿ ಜಾಗೃತಿ ಮೂಡಿಸಿತ್ತು.

ಈ ಪರಿಣಾಮವಾಗಿ ನೆಟ್ವರ್ಕ್, ರಸ್ತೆ, ಮೂಲ ಸೌಕರ್ಯವಿಲ್ಲದ ಪುಟ್ಟ ಗ್ರಾಮ ಬಂಜಾರುಮಲೆಯಲ್ಲಿ ಶೇ.100ರಷ್ಟು ಮತದಾನ ನಡೆಯುವ ಮೂಲಕ, ಜಿಲ್ಲೆಗೆ ಮಾದರಿ ನಡೆಯನ್ನು ತೋರಿದಂತೆ ಆಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!