Ad imageAd image

ಐಪಿಎಸ್ ಶಾಲೆಗೆ ಸತತ 8 ನೇ ಬಾರಿಗೆ ಶೇ..100 ಫಲಿತಾಂಶ

Bharath Vaibhav
ಐಪಿಎಸ್ ಶಾಲೆಗೆ ಸತತ 8 ನೇ ಬಾರಿಗೆ ಶೇ..100 ಫಲಿತಾಂಶ
WhatsApp Group Join Now
Telegram Group Join Now

ಐ.ಸಿ.ಎಸ್.ಇ. 10 ನೇ ತರಗತಿ ಪರೀಕ್ಷೆ

ತುರುವೇಕೆರೆ: ಪಟ್ಟಣದ ಇಂಡಿಯನ್ ಪಬ್ಲಿಕ್ ಸ್ಕೂಲ್ ಶಾಲೆಯು 2024-25 ನೇ ಸಾಲಿನ ಐ.ಸಿ.ಎಸ್.ಇ. 10 ನೇ ತರಗತಿ ಪರೀಕ್ಷೆಯಲ್ಲಿ ಸತತ 8 ನೇ ಬಾರಿಗೆ ಶೇ..100 ಫಲಿತಾಂಶ ಪಡೆದಿದೆ ಎಂದು ಶಾಲೆಯ ಆಡಳಿತಾಧಿಕಾರಿ ಡಾ.ರುದ್ರಯ್ಯ ಹಿರೇಮಠ ತಿಳಿಸಿದರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪರೀಕ್ಷೆ ಬರೆದಿದ್ದ 30 ವಿದ್ಯಾರ್ಥಿಗಳೂ ಸಹ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ ಸತತ 8 ನೇ ಬಾರಿಗೆ ಶಾಲೆಯು ಶೇ..100 ಫಲಿತಾಂಶ ಬರಲು ಕಾರಣರಾಗಿದ್ದಾರೆ. ಮೋಕ್ಷಿತ್ ಬಿ. (ಶೇ..94) ಪ್ರಥಮ, ಸ್ನೇಹ ಸಿ.ಎಸ್.(ಶೇ..92) ದ್ವಿತೀಯ ಹಾಗೂ ವಿಸ್ಮಯಿ ಎಂ.ಗೌಡ (ಶೇ..90), ರೇವಂತ್ ಎಸ್. (ಶೇ..90) ತೃತೀಯ ಸ್ಥಾನ, ಭೂಮಿಕ ಟಿ.ಎಸ್. (ಶೇ..89) ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.

ಐ.ಸಿ.ಎಸ್.ಇ.ಯಲ್ಲಿ ಸತತವಾಗಿ ಶೇ..100 ಫಲಿತಾಂಶ ಪಡೆಯುವುದು ಅಷ್ಟು ಸುಲಭದ ವಿಷಯವಲ್ಲ, ಆದರೆ ನಮ್ಮ ಶಾಲೆಯು ಸತತ 8 ನೇ ಬಾರಿಗೆ ಶೇ..100 ಫಲಿತಾಂಶ ಪಡೆದು ಉತ್ತಮ ಸಾಧನೆ ಮಾಡಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಐ.ಸಿ.ಎಸ್.ಇ. ಪಠ್ಯಕ್ರಮದ ಶಾಲೆ ತೆರೆಯಲು ಸಹಕಾರ ನೀಡಿದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಡಾ.ಕರಿವೃಷಭದೇಶೀಕೇಂದ್ರ ಶಿವಯೋಗೀಶ್ವರ ಮಹಾಸ್ವಾಮೀಜಿಗಳು, ಕಾರಣಕರ್ತರಾಗಿದ್ದು, ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. 2024-25 ನೇ ಸಾಲಿನಲ್ಲಿ ಇಂಡಿಯನ್ ಪಬ್ಲಿಕ್ ಸ್ಕೂಲ್ ಶಾಲೆಯು ಐ.ಸಿ.ಎಸ್.ಇ. 10 ನೇ ತರಗತಿ ಪರೀಕ್ಷೆಯಲ್ಲಿ ಶೇ..100 ಫಲಿತಾಂಶ ಬರಲು ಶ್ರಮವಹಿಸಿದ ಶಾಲೆಯ ಪ್ರಾಂಶುಪಾಲೆ ಪುಷ್ಪಾ ಎಸ್.ಪಾಟೀಲ್, ಶಿಕ್ಷಕ ವರ್ಗ, ಪೋಷಕರಿಗೆ, ವಿದ್ಯಾರ್ಥಿಗಳಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಹೇಳಿದರು.

ವರದಿ: ಗಿರೀಶ್ ಕೆ ಭಟ್, ತುರುವೇಕೆರೆ

WhatsApp Group Join Now
Telegram Group Join Now
Share This Article
error: Content is protected !!