ಬೆಂಗಳೂರು: ರಾಜ್ಯದ ಜನರಿಗೆ ಉತ್ತಮ ವೈದ್ಯಕೀಯ ಸೇವ ಒದಗಿಸುವ ನಿಟ್ಟಿನಲ್ಲಿ 1,032 ಔಷಧಿಗಳನ್ನು ಖರೀದಿಸಿ ಉಚಿತವಾಗಿ ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ವಿಧಾನಸಭೆಯ ಪ್ರಶೋತ್ತರದ ಅವಧಿಯಲ್ಲಿ ಬಿಜೆಪಿಯ ಶಾಸಕ ಡಾ.ಸಿ.ಎನ್.ಅಶ್ವತ್ವವಾರಾಯಣ ಅವರು ಪ್ರಶ್ನೆ ಕೇಳಿ, ರಾಜ್ಯಸರ್ಕಾರ ನಿಯಮಾನುಸಾರ 761 ಔಷಧಿಗಳು ಲಭ್ಯವಿರಬೇಕಿತ್ತು.ಆದರೆ ವಾಸ್ತವವಾಗಿ 231 ಮಾತ್ರ ಇದು ನಾಲ್ಕು ವರ್ಷಗಳಿಂದಲೂ ಔಷಧಿ ಖರೀದಿಗೆ ಟೆಂಡರ್ ಆಗಿಲ್ಲ. ರಾಷ್ಟ್ರೀಯ ಆರೋಗ್ಯ, ಕಾರ್ಯ ಯೋಜನೆಯಡಿ 2024 25ನೇ ಸಾಲಿಗೆ 157 ಕೋಟಿ ರೂ.ಗಳನ್ನು ಉಚಿತ ಜನಾಧಿಗಳ ಸರಬರಾಜಿಗಾಗಿ ಮೀಸಲಿಡಲಾಗಿದೆ.
ಅದರಲ್ಲಿ ಡಿಸೆಂಬವರೆಗೆ 5.5 ಕೋಟಿ ರೂ.ಗಳನ್ನ ಮಾವು ಖರ್ಚು ಮಾಡಿದ್ದು, ಇದು ಶೇ.3.5 ರಷ್ಟು ಸಾಧನೆಯಾಗಿದೆ. ಕಳಹಂತದಲ್ಲಿ ಔಷಧಿಗಳ ಖರೀದಿಗೂ ಸರಿಯಾಗಿ ಅವಕಾಶ ನೀಡುತ್ತಿಲ್ಲ. ಒಂದೆಡ ವೈದ್ಯರು ಹೊರಗಡೆ ಔವಧಿ ಖರೀದಿಸಲು ಚೀಟಿ ಬರೆದುಕೊಟ್ಟಿದೆ ಅವರನ್ನು ಅಮಾನ ಮಾಡಲಾಗುತ್ತಿದೆ. ಸರ್ಕಾರವು ಔಷಧಿಗಳನ್ನು ಪೂರೈಸುತ್ತಿಲ್ಲ. ಕೇಂದ್ರದಿಂದ ಬಿಡುಗಡೆಯಾಗಿರುವ ಅನುದಾನವೂ ಖರ್ಚಾಗುತ್ತಿಲ್ಲ.
ನಕಲಿ ಔಷಧಿಗಳ ಜಾಲ ರಾಜಾರೋಷವಾಗಿ ನಡೆಯುತ್ತಿದೆ.
ಇದರ ಪರಿಶೀಲನೆಗಾಗಿ ಸಿಬ್ಬಂದಿಗಳ ಹೊರವ ಇದೆ. ಔಷಧಿ ಪರಿವೀಕ್ಷಕರ 114 ಹುದ್ದೆಗಳ ಪೈಕಿ 8 ಮಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ. 27 ಸಾವಿರ ಔಷಧಿ ಕಂಪನಿಗಳಿದ್ದು ಅವುಗಳನ್ನು ಪರಿಶೀಲನೆ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಸರ್ಕಾರ ಪೂರೈಸುವ ಔಷಧಿಗಳ ಸಾಮರ್ಥ್ಯ ಶೇ.10 ಧಮ್ಮ ಮಾತ್ರ ಎನ್ನಲಾಗುತ್ತಿದೆ. ಜಿಲ್ಲಾಮಟ್ಟದಲ್ಲಿ ಔಷಧಿಗಳ ಗುಣಮಟ್ಟಿಗಳಿಗೆ ಪ್ರಯೋಗಾಲಯಗಳಿಲ್ಲ, ನಕಲಿ ಔಷಧಿಗಳನ್ನು ಪೂರೈಸಿದವರ ವಿರುದ್ಧ ಈವರೆಗೆ ಯಾವುದೇ ಶಿಸ್ತು ಕ್ರಮಗಳಾಗಿಲ್ಲ ಎಂದು ಸುದೀರ್ಘ ವಿವರಣೆ ನೀಡಿದರು.