ಚಿಕ್ಕೂಡಿ: ತಾಲೂಕಿನ ಕರೋಶಿ ಗ್ರಾಮದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 104 ನೇ ವಾರ್ಷಿಕ ಸಭೆಯು ಅದ್ದೂರಿಯಾಗಿ ಜರುಗಿತು.ಕರೋಶಿ ಸಂಘದ ಸಭಾಭವನದಲ್ಲಿ ನಡೆದ ವಾರ್ಷಿಕ ಸಭೆಯು ದೀಪ ಪ್ರಜ್ವಲಿಸಿ ಉದ್ಘಾಟಿಸಲಾಯಿತ್ತು .
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ, ಚಂದರಗಿ ಕ್ರೀಡಾ ಶಾಲೆಯ ಉಪಾಧ್ಯಕ್ಷ ಮಹೇಶ್ ಬಾತೆ ಮಾತನಾಡಿ ಎಲ್ಲರ ಆಶೀರ್ವಾದ ಹಾಗೂ ಸಹಕಾರದಿಂದ ಈ ಸಂಸ್ಥೆ ಅತಿ ಉತ್ತಮ ರೀತಿಯಿಂದ ನಡೆದಿದೆ . ಈ ಆರ್ಥಿಕ ವರ್ಷದಲ್ಲಿ ಸಂಸ್ಥೆ 39 ಲಕ್ಷ 30 ಸಾವಿರ 716 ರೂಪಾಯಿಗಳ ಇವುಗಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇಕಡಾ 10% ಡಿವಿಡೆಂಟ್ ನೀಡುತ್ತಿವೆ ಎಂದು ಘೋಷಿಸಿದರು.
1546 ಸದಸ್ಯರಿದ್ದು, ಶೇರ್ ಬಂಡವಾಳ ಒಂದು ಕೋಟಿ 30 ಐದು ಲಕ್ಷ 96, ಸಾವಿರ ರೂಪಾಯಿಗಳು, ನಿಧಿಗಳು ಮೂರು ಕೋಟಿ 12 ಲಕ್ಷ 25 ಸಾವಿರ 813 ರೂಪಾಯಿಗಳು, ಟೆವುಗಳು ಆರ್ ಕೋಟಿ ಎಪ್ಪತ್ತೊಂದು ಲಕ್ಷ 63,631 ರೂಪಾಯಿಗಳು ಇವೆ. ಸಂಘದ ಸಭಾಭವನವು ನವೀಕರಣ ಮಾಡಲಾಗಿದ್ದು, ಇದರ ಲಾಭ ಸದಸ್ಯರು ಹಾಗೂ ಗ್ರಾಮಸ್ಥರು ಪಡೆದುಕೊಳ್ಳಬೇಕು. ಸದಸ್ಯರು ಇಟ್ಟ ವಿಶ್ವಾಸಕ್ಕೆ ಕಪ್ಪು ಚುಕ್ಕೆ ತರಲ್ಲ, ಸಂಸ್ಥೆ ಮೇಲೆ ಇದೆ ತರಹ ನಂಬಿಕೆ, ಆಶೀರ್ವಾದ ಇರ್ಲಿ ಎಂದು ಕೋರಿದರೂ.

ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕರಾದ ಸತ್ಯಪ್ಪ ಸೋಲಾಪುರೆ ಮಾತನಾಡಿ ಸಂಸ್ಥೆಯಲ್ಲಿ ಒಟ್ಟು 1546 ಸದಸ್ಯರಿದ್ದು, ಒಂದು ಕೋಟಿ 35 ಲಕ್ಷ 96 ಸಾವಿರ,90 ರೂಪಾಯಿಗಳು ಶೇರ್ ಬಂಡವಾಳ, ನಿಧಿಗಳು 3 ಕೋಟಿ 12 ಲಕ್ಷ 25 ಸಾವಿರ 813 ರುಪಾಯಿ, ಟೆವುಗಳು ಆರು ಕೋಟಿ ಎಪ್ಪತ್ತೊಂದು ಲಕ್ಷ 63, ಸಾವಿರ 631 ರೂಪಾಯಿ, ಗುಂತಾವನೆಗಳು 5 ಕೋಟಿ 2 ಲಕ್ಷ 82, ಸಾವಿರ 87 ರೂಪಾಯಿ, ಸಾಲ ವಿತರಣೆ 11 ಕೋಟಿ 67 ಲಕ್ಷ 69 ಸಾವಿರ 664 ರೂಪಾಯಿಗಳಿದ್ದು , ಸಂಸ್ಥೆಗೆ 39 ಲಕ್ಷ 30 ಸಾವಿರ 716 ನೀವಳ ಲಾಭ ಆಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸದಸ್ಯರ ಮಕ್ಕಳಿಗೆ ಸಂಘದ ವತಿಯಿಂದ ಸನ್ಮಾನಿಸಿ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು.
ಈ ಸಭೆಯಲ್ಲಿ ಅಧ್ಯಕ್ಷರಾದ ಮಹೇಶ ಭಾತೆ, ನಿರ್ದೇಶಕರಾದ ದುಂಡಯ್ಯ ಪೂಜಾರಿ, ಜ್ಞಾನೇಶ್ವರ್ ಮಂಗುರೆ , ಶಿವಾಜಿ ಸಿಂಗಾಯಿ, ಅಬ್ದುಲ್ಮುನಾಫ್. ಪಟೇಲ್, ರಮೇಶ್ ಕುಂಬಾರ, ದುಂಡಪ್ಪ ಮಜಲಟ್ಟಿ, ಶ್ರೀಮತಿ ಶಿವಲೀಲಾ ಜಗದೀಶ್ ಮೊಗದೊಮ, ಶ್ರೀಮತಿ ಶೈಲಜಾ ಬಾಳಪ್ಪ ಮುಗಳಿ, ಇಮಾಮಹುಸೇನ ಪಟೇಲ್, ಅರುಣ್ ಬಿದ್ರೆ , ಬಿಡಿಸಿಸಿ ಬ್ಯಾಂಕ್ ನಿರೀಕ್ಷಕ ಸಂತೋಷ್ ಪಾಟೀಲ್ ಸೆರಿದಂತೆ ಅಪಾರ ಸಂಖ್ಯೆಯಲ್ಲಿ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಬಸವರಾಜ್ ಮಡಿವಾಳ ಸ್ವಾಗತಿಸಿದರು, ಶ್ರೀಮತಿ ಸಾವಿತ್ರಿ ಜೀದೆ ವಂದಿಸಿದರು.
ವರದಿ: ರಾಜು ಮುಂಡೆ




