Ad imageAd image

10ನೇ ತರಗತಿ ಜಸ್ಟ್ ಪಾಸಾದ ಬಾಲಕ : ಬ್ಯಾನರ್ ವೈರಲ್

Bharath Vaibhav
10ನೇ ತರಗತಿ ಜಸ್ಟ್ ಪಾಸಾದ ಬಾಲಕ : ಬ್ಯಾನರ್ ವೈರಲ್
WhatsApp Group Join Now
Telegram Group Join Now

ಈ ಬಾರಿಯ 10ನೇ ತರಗತಿ ಫಲಿತಾಂಶ ಗುರುವಾರದಂದು ಪ್ರಕಟವಾಗಿದ್ದು, ಕಳೆದ ಬಾರಿಗಿಂತ ಈ ಬಾರಿ ಫಲಿತಾಂಶ ಇಳಿಮುಖವಾಗಿದೆ. ಎಂದಿನಂತೆ ಬಾಲಕಿಯರು ಮೇಲುಗೈ ಸಾಧಿಸಿದ್ದು, ಫಲಿತಾಂಶ ಇಳಿಮುಖವಾದ ಕುರಿತು ಹಲವಾರು ವಿಶ್ಲೇಷಣೆಗಳು ಕೇಳಿ ಬರುತ್ತಿವೆ.

ಇದರ ಮಧ್ಯೆ 10ನೇ ತರಗತಿ ಪಾಸ್ ಆದ ವಿದ್ಯಾರ್ಥಿಯೊಬ್ಬನನ್ನು ಅಭಿನಂದಿಸಿ ಸ್ನೇಹಿತರ ಬಳಗ ಹಾಕಿರುವ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲರಲ್ಲೂ ನಗೆತರಿಸಿದೆ.

ಹ್ಯಾಸ್ಲಿನ್ (ಬ್ರೂಸ್ಲಿ) ಎಂಬ ವಿದ್ಯಾರ್ಥಿಯನ್ನು ಅಭಿನಂದಿಸಿ ಈ ಪೋಸ್ಟರ್ ಹಾಕಲಾಗಿದ್ದು ಇದರಲ್ಲಿ, ಅಪ್ಪ ಅಮ್ಮನ ಆಶೀರ್ವಾದದಿಂದ, ಊರವರ ಬೈಗುಳದಿಂದ, ಊರವರ ಪ್ರೋತ್ಸಾಹದಿಂದ, ಟ್ಯೂಷನ್ ಮಹಾತ್ಮೆಯಿಂದ, ಶಾಲೆಯ ಕಿರಿಕಿರಿಯಿಂದ, ಶಿಕ್ಷಕರ ಬೋಧನೆಯಿಂದ, ಸೈಕಲ್, ಕ್ರಾಕ್ಸ್, ಪಿಯುಸಿ ಫೀಸ್ ಆಮಿಷದಿಂದ, ಎಲ್ಲರ ಕುತೂಹಲ ಬ್ರೂಸ್ಲಿ ಪಾಸು, ಫೇಲೊ ಇಂದು ಆ ಚರ್ಚೆಗೆ ತೆರೆ ಬಿದ್ದಿದೆ.

ತೋಚಿದ್ದು ಗೀಚಿ Fail ಆಗುವವನು ಹರಕೆಯ ಬಲದಿಂದ, ಪ್ರಯತ್ನದ ಫಲದಿಂದ ಹೇಗೂ ಒಟ್ಟಾರೆ ನಮ್ಮ ಬ್ರೂಸ್ಲಿ ಜಸ್ಟ್ ಪಾಸ್ ಆಗಿರೋದೇ ನಮಗೆಲ್ಲ ಸಂಭ್ರಮ ಸಂಭ್ರಮ. SSLC ಪರೀಕ್ಷೆಯಲ್ಲಿ 300 ಅಂಕ ಪಡೆದು ಉತ್ತೀರ್ಣನಾದ ಹ್ಯಾಸ್ಲಿನ್ ನಿಮಗೆ ಅಭಿನಂದನೆಗಳು ಎಂದು ಬರೆಯಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!