Ad imageAd image

ನಿರ್ದೇಶಕ ಅನೀಶ್ ಕಿಡ್ನ್ಯಾಪ್ : ಐಶ್ವರ್ಯಾ ಸೇರಿ 11 ಆರೋಪಿಗಳು ಅರೆಸ್ಟ್

Bharath Vaibhav
ನಿರ್ದೇಶಕ ಅನೀಶ್ ಕಿಡ್ನ್ಯಾಪ್ : ಐಶ್ವರ್ಯಾ ಸೇರಿ 11 ಆರೋಪಿಗಳು ಅರೆಸ್ಟ್
WhatsApp Group Join Now
Telegram Group Join Now

ಬೆಂಗಳೂರು : ಬೆಂಗಳೂರಲ್ಲಿ ನಿರ್ದೇಶಕ ಅನೀಶ್ ಕಿಡ್ನ್ಯಾಪ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಆರೋಪಿಗಳನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ಆಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿತ್ತು.

ಜೀವನದ ಭಾಷೆ ಎಂಬ ಸಿನಿಮಾವನ್ನು ಅನಿಶ್ ನಿರ್ದೇಶನ ಮಾಡುತ್ತಿದ್ದ ಹಿಂದೆ ಭರವಸೆಯ ಜೀವನ ಎಂಬ ಶಾರ್ಟ್ ಮೂವಿ ಸಹ ಮಾಡಿದ್ದ.

ನಂತರ ಜೀವನದ ಭಾಷೆ ಎಂಬ ಸಿನಿಮಾ ನಿರ್ದೇಶನ ಮಾಡುತ್ತಿದ್ದ. ಆದರೆ ಕಾರಣಾಂತರಗಳಿಂದ ಸಿನೆಮಾ ನಿಲ್ಲಿಸಿ ಮುಂಬೈಗೆ ಶಿಫ್ಟ್ ಆಗಿದ್ದ. ಬಳಿಕ ನಟಿ ಐಶ್ವರ್ಯಗೆ ಕಾರು ಮಾರಾಟದ ಬಗ್ಗೆ ತಿಳಿಸಿದ್ದ. ನಟಿ ಐಶ್ವರ್ಯ ಮೂಲಕ ಆರೋಪಿಗಳು ಮಾಹಿತಿ ಕಲೆಹಾಕಿದ್ದಾರೆ.

ದುನಿಯಾ ವಿಜಿ ಅಭಿನಯದ ಭೀಮ ಚಿತ್ರದಲ್ಲಿ ಐಶ್ವರ್ಯ ನಟಿಸಿದ್ದರು. ಕಾರು ಖರೀದಿ ಮಾಡುವುದಾಗಿ ಆರೋಪಿಗಳು ಅನೀಶನನ್ನು ಸಂಪರ್ಕಿಸಿದ್ದಾರೆ.ನಟಿಯ ಮೂಲಕ ನಿರ್ದೇಶಕನನ್ನು ಬೆಂಗಳೂರಿಗೆ ಕರೆಸಿದ್ದಾರೆ.

ಕಾರು ಖರೀದಿ ಮಾಡುತ್ತೇವೆ ಎಂದು ಕರೆಸಿ ಕಿಡ್ನಾಪ್ ಮಾಡಿದ್ದರು. ಬೆಳಕಿಗೆ ಬಂದಿದೆ ನಿರ್ದೇಶಕ ಅನೀಶ್ ಜೊತೆಗೆ ಐದು ಲಕ್ಷ ಹಣದ ವಿಚಾರಕ್ಕೆ ಜಗಳ ಆಗಿತ್ತು. ಇದೇ ವಿಚಾರಕ್ಕೆ ಪ್ಲಾನ್ ಮಾಡಿ ಕಿಡ್ನ್ಯಾಪ್ ಮಾಡಿರುವುದು ಪತ್ತೆಯಾಗಿದೆ. ಸದ್ಯ 11 ಆರೋಪಿಗಳನ್ನು ಬೆಂಗಳೂರಿನ ಆಡುಗೋಡಿ ಪೊಲೀಸರು ಅರೆಸ್ಟ್ ಮಾಡಿ, ತನಿಖೆ ಮುಂದುವರಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!