ಬಾಗಲಕೋಟೆ : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಕೃತ್ಯವೊಂದು ನಡೆದಿದ್ದು, ಆಸ್ತಿಗಾಗಿ ಅಜ್ಜಿಯನ್ನೇ ಅಣ್ಣ ಮಕ್ಕಳು ಕೊಂದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ತೇರದಾಳದ ಪ್ರಭುಲಿಂಗ ದೇವಸ್ಥಾನದ ಬಳಿ 60 ವರ್ಷದಿಂದ ತರಕಾರಿ ಮಾರಾಟ ಮಾಡುತ್ತಿದ್ದ ಚಂದ್ರವ್ವ ನೀಲಗಿ ದಾನಜ್ಜಿ ಎಂದೇ ಫೇಮಸ್ ಆಗಿದ್ದರು.
ಹಾಗೂ ಅಣ್ಣನ ಮಕ್ಕಳ ನಡುವೆ ಆಸ್ತಿ ವಿವಾದ ಉಂಟಾಗಿದ್ದು, 11 ಎಕರೆ ಆಸ್ತಿಗಾಗಿ ಆಕೆಯ ಅಣ್ಣನ ಮಕ್ಕಳೇ ಕೊಲೆ ಮಾಡಿದ್ದಾರೆ.
ಮೊದಲು ಚಿಕ್ಕೋಡಿ ಆಸ್ಪತ್ರೆಗೆ ದಾಖಲಿಸಿ ಹೈಡ್ರಾಮಾ ನಡೆಸಿದ್ದ ಆರೋಪಿಗಳು ಬಳಿಕ ದಾನಜ್ಜಿಯ ಅಂತ್ಯಸಂಸ್ಕಾರ ಮಾಡಲು ತರಾತುರಿಯಲ್ಲಿ ಸಿದ್ದತೆ ನಡೆಸಿದ್ದರು. ನಂತರ ಸ್ಥಳೀಯರಿಗೆ ಅನುಮಾನ ಬಂದು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಯಲಿಗೆ ಬಂದಿದೆ.
ದಾನಜ್ಜಿ ಪ್ರಭುಲಿಂಗ ದೇವರಿಗೆ ಬೆಳ್ಳಿಯ ಬಾಗಿಲು ಕೂಡ ಮಾಡಿಸಿದ್ದರು. ಅಲ್ಲದೇ ಊರಿನಲ್ಲಿ ದಾನ ಧರ್ಮ ಮಾಡುವ ಮೂಲಕ ದಾನಜ್ಜಿ ಎಂಬ ಹೆಸರು ಪಡೆದು ಜನರ ಮೆಚ್ಚುಗೆಗೆ ಪಾತ್ರವಾಗಿದ್ದರು.
ದೇವಸ್ಥಾನದ ಬಳಿ ಅಜ್ಜಿ 60 ವರ್ಷದಿಂದ ತರಕಾರಿ ಮಾರಾಟ ಮಾಡುತ್ತಿದ್ದರು. ಕೂಡಿಟ್ಟ ಹಣದಲ್ಲಿ 16 ಲಕ್ಷ ಮೌಲ್ಯದ ಬೆಳ್ಳಿ ಬಾಗಿಲು ಕೂಡ ಮಾಡಿಸಿಕೊಟ್ಟಿದ್ದರು. ಆದರೆ ಪಾಪಿಗಳು ಆಸ್ತಿಗಾಗಿ ಅಜ್ಜಿಯನ್ನೇ ಕೊಂದು ರಾಕ್ಷಸರ ಹಾಗೆ ವರ್ತಿಸಿದ್ದಾರೆ.




