Ad imageAd image

ಪ್ರಧಾನಮಂತ್ರಿ ಆವಾಸ್ ಯೋಜನೆಯ ಹಣ ಬರುತ್ತಿದ್ದಂತೆ 11 ಮಹಿಳೆಯರು ಪ್ರೇಮಿಗಳ ಜತೆ ಪರಾರಿ

Bharath Vaibhav
ಪ್ರಧಾನಮಂತ್ರಿ ಆವಾಸ್ ಯೋಜನೆಯ ಹಣ ಬರುತ್ತಿದ್ದಂತೆ 11 ಮಹಿಳೆಯರು ಪ್ರೇಮಿಗಳ ಜತೆ ಪರಾರಿ
WhatsApp Group Join Now
Telegram Group Join Now

ಪ್ರಧಾನಮಂತ್ರಿ ಆವಾಸ್ ಯೋಜನೆಯ ಮೊದಲ ಕಂತಿನ ಹಣ ಕೈಗೆ ಬರುತ್ತಿದ್ದಂತೆ 11 ಮಹಿಳೆಯರು ಪ್ರೇಮಿಗಳ ಜತೆ ಪರಾರಿಯಾಗಿದ್ದಾರೆ.

ಈ ಮಹಿಳೆಯರ ಗಂಡಂದಿರು ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಿದ್ದು, ಇದೀಗ ಎರಡನೇ ಕಂತಿನ ಹಣವನ್ನು ತಡೆಹಿಡಿಯಲಾಗಿದೆ.
ಉತ್ತರ ಪ್ರದೇಶದ ಮಹಾರಾಜ್​ಗಂಜ್​ ಜಿಲ್ಲೆಯ ನಿಚ್ಲಾಲ್ ಬ್ಲಾಕ್​ನಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದೆ.

ಒಂಬತ್ತು ಗ್ರಾಮಗಳ 11 ಮಹಿಳೆಯರು ತಮ್ಮ ಖಾತೆಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯ ಮೊದಲ ಕಂತು ಜಮೆಯಾದ ನಂತರ ಪತಿಯನ್ನು ತೊರೆದು ಪ್ರೇಮಿಗಳೊಂದಿಗೆ ಓಡಿಹೋಗಿದ್ದಾರೆ.

ಈ ಮಹಿಳೆಯರ ಗಂಡಂದಿರು ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಿದ್ದು, ಇದೀಗ ಎರಡನೇ ಕಂತಿನ ಹಣವನ್ನು ತಡೆಹಿಡಿಯಲಾಗಿದೆ.

2023-24ನೇ ಹಣಕಾಸು ವರ್ಷದಲ್ಲಿ ಮಹಾರಾಜ್‌ಗಂಜ್ ಜಿಲ್ಲೆಯ ನಿಚ್ಲಾಲ್ ಬ್ಲಾಕ್‌ನ 108 ಗ್ರಾಮಗಳಲ್ಲಿ 2350 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಶೇ.90ಕ್ಕೂ ಹೆಚ್ಚು ಫಲಾನುಭವಿಗಳ ಮನೆಗಳು ಪೂರ್ಣಗೊಂಡಿವೆ.

ಮಹಿಳೆಯರನ್ನೂ ಈ ಯೋಜನೆಯಲ್ಲಿ ಸೇರಿಸಲಾಗಿದೆ. ಇದರಡಿ ಬ್ಲಾಕ್ ವ್ಯಾಪ್ತಿಯ ತುತ್ತಿಬರಿ, ಶಿತಾಲಾಪುರ, ಚಾಟಿಯ, ರಾಮನಗರ, ಬಕುಲ್ದಿಹಾ, ಖೇಷರ, ಕಿಶುನಪುರ, ಮೇಧೌಳಿ ಗ್ರಾಮಗಳ 11 ಮಹಿಳಾ ಫಲಾನುಭವಿಗಳ ಖಾತೆಗೆ ಮೊದಲ ಕಂತಿನ 40 ಸಾವಿರ ರೂ. ಬಂದಿದ್ದು, ಎಲ್ಲ 11 ಮಹಿಳೆಯರು ತಮ್ಮ ಪತಿಯನ್ನು ತೊರೆದು ಓಡಿ ಹೋಗಿದ್ದಾರೆ.

ಮಹಿಳೆಯರ ಗಂಡಂದಿರು ಒತ್ತಡದಲ್ಲಿದ್ದಾರೆ, ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ತಮ್ಮ ಸ್ವಂತ ಮನೆ ಕನಸು ನನಸಾಗಬಹುದು ಎಂದು ಗಂಡಂದಿರು ಭರವಸೆ ಹೊಂದಿದ್ದರು, ಆದರೆ ಮನೆ ನಿರ್ಮಿಸುವ ಮೊದಲೇ ಕನಸು ಭಗ್ನವಾಗಿದೆ.

ಇಲಾಖೆ ಬ್ಲಾಕ್ ನ ಎಲ್ಲ ಗ್ರಾಮಗಳಲ್ಲಿ ತನಿಖೆ ಆರಂಭಿಸಲಾಗಿದೆ,ಮಹಿಳೆಯರನ್ನು ಗುರುತಿಸಲಾಗಿದೆ ಎಂದು ನಿಚ್ಲಾಲ್ ಬ್ಲಾಕ್‌ನ ಬ್ಲಾಕ್ ಡೆವಲಪ್‌ಮೆಂಟ್ ಅಧಿಕಾರಿ ಶಮಾ ಸಿಂಗ್ ಹೇಳಿದ್ದಾರೆ. ಈ ಕುರಿತು ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಸೂಚನೆ ಬಂದರೂ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ನಗರ ಪ್ರದೇಶದಲ್ಲಿ ನಿವಾಸಿಗಳಿಗೆ ಅಂದ್ರೆ ಸ್ವಂತ ಸೂರಿಲ್ಲದ ಕುಟುಂಬಗಳಿಗೆ ಸರ್ಕಾರ ಮನೆ ನಿರ್ಮಾಣಕ್ಕೆ ಹಂತ ಹಂತವಾಗಿ ಕಂತುಗಳ ರೂಪದಲ್ಲಿ ಹಣ ಬಿಡುಗಡೆ ಮಾಡುತ್ತದೆ. ಈ ಹಣ ಮನೆಯ ಮಹಿಳಾ ಸದಸ್ಯರ ಖಾತೆಗೆ ಮಾತ್ರ ಜಮೆ ಮಾಡಲಾಗುತ್ತದೆ. ಇದೀಗ ಹಣ ಬರುತ್ತಿದ್ದಂತೆ ಮಹಿಳೆಯರು ತಮ್ಮ ಪ್ರೇಮಿಗಳ ಜೊತೆ ಪಲಾಯನ ಆಗುತ್ತಿದ್ದಾರೆ.

ಒಂದು ವೇಳೆ ಅನ್ಯ ಕೆಲಸಕ್ಕೆ ಹಣ ಬಳಕೆಯಾಗಿರೋದು ಕಂಡು ಬಂದ್ರೆ ಅಧಿಕಾರಿಗಳು ಪಡೆದುಕೊಂಡು ಮೊತ್ತವನ್ನು ವಸೂಲಿ ಮಾಡುತ್ತಾರೆ. ಪತ್ನಿಯರು ಹಣದ ಜೊತೆ ಪರಾರಿಯಾಗಿರುವ ಕಾರಣ ಕೆಲವರ ಮನೆ ನಿರ್ಮಾಣ ಸ್ಥಗಿತಗೊಂಡಿದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!