ಬೆಂಗಳೂರು: ಬೆಂಗಳೂರಿನ ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಹಾರ ಮೂಲದ 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕನನ್ನು ಬಂಧಿಸಲಾಗಿದೆ.
ಆಟವಾಡುತ್ತಿದ್ದ ಬಾಲಕಿಯನ್ನು ನಿರ್ಮಾಣ ಹಂತದ ಕಟ್ಟಡಕ್ಕೆ ಕರೆದೊಯ್ದು ಅತ್ಯಾಚಾರ ಎಸಗಲಾಗಿದೆ. ಬಿಹಾರದ ಮಹಮ್ಮದ್ ಮುನ್ನ ಎಂಬಾತ ದುಷ್ಕೃತ್ಯ ಎಸಗಿದ್ದಾನೆ.ಕೃತ್ಯದ ಬಳಿಕ ಬಾಲಕಿ ಕೈಗೆ 150 ರೂಪಾಯಿ ಇಟ್ಟು ಆರೋಪಿ ಪರಾರಿಯಾಗಿದ್ದ.
ಮಗಳು ಕಾಣಿಸದೇ ಪೋಷಕರು ಭಯಗೊಂಡಿದ್ದರು. ಕೆಲ ಹೊತ್ತಿನ ನಂತರ ಬಾಲಕಿ ಮನೆಗೆ ಬಂದಿದ್ದಳು. ಬಾಲಕಿಯ ಕೈಯಲ್ಲಿದ್ದ 150 ರೂಪಾಯಿ ನೋಡಿ ಪೋಷಕರು ವಿಚಾರಿಸಿದ್ದಾರೆ. ಹಣದ ಬಗ್ಗೆ ಕೇಳಿದಾಗ ಬಾಲಕಿ ಅತ್ಯಾಚಾರದ ಕುರಿತು ತಿಳಿಸಿದ್ದಾಳೆ.
ಕೂಡಲೇ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಜ್ಞಾನಭಾರತಿ ಠಾಣೆ ಪೊಲೀಸರಿಂದ ತನಿಖೆ ಮುಂದುವರೆದಿದೆ.




