ಚಿಟಗುಪ್ಪ : ತಾಲ್ಲೂಕಿನ ಬೆಳಕೇರಾ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಿಡಿಒ,ಅಧ್ಯಕ್ಷ ಮತ್ತು ಸದಸ್ಯನ ನಡುವೆ ಪರಸ್ಪರ ವಾಗ್ವಾದ ನಡೆದಿರುವ ಘಟನೆ ಜರುಗಿದೆ.
ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಪಿಡಿಒ ಪೋಲಿಸ್ ಇಲಾಖೆಯ 112ಗೆ ಕರೆಮಾಡಿದಾಗ ಪೋಲಿಸರು ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದ ಪ್ರಸಂಗ ಜರುಗಿದೆ.
ಗ್ರಾಮ ಪಂಚಾಯತ ಅಧ್ಯಕ್ಷ ಉಪಾದ್ಯಕ್ಷ ಹಾಗು ಸದಸ್ಯರ ಸಮ್ಮುಖದಲ್ಲಿ ಮಂಗಳವಾರದ ಸಾಮಾನ್ಯ ಸಭೆಯಲಿ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ ಹಾಲಿ ಸದಸ್ಯ ಮಾಣಿಕ ಹಿಪ್ಪರಗಿ ತಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಕಾಮಗಾರಿಗಳಿಗಾಗಿ ಮತ್ತು ಇತರೆ ಖರ್ಚು ಮಾಡಿದ ಹಣವನ್ನು ಬಿಡುಗಡೆಗೊಳಿಸುವಂತೆ ಪಿಡಿಒಗೆ ಕೇಳಿದಾಗ ಸೂಕ್ತ ದಾಖಲೆಗಳನ್ನು ನೀಡಿದರೆ ಮತ್ತು ತಾಂತ್ರಿಕ ಇಲಾಖೆಯಿಂದ ದೃಡೀಕರಣ ಸಿಕ್ಕರೆ ಹಣ ಬಿಡುಗಡೆಗೆ ಪ್ರಯತ್ನಿಸುತ್ತೇನೆ ಎಂದು ಪಿಡಿಒ ಭಾಗ್ಯಜ್ಯೋತಿ ಹೇಳಿದ್ದಾರೆ.
ಈ ವಿಷಯವಾಗಿ ಮಾತಿಗೆ ಮಾತು ಬೆಳೆದು ಪರಸ್ಪರ ದೋಷಾರೋಪಣೆಗಳ ನಡೆದವು.ಗ್ರಾಮ ಪಂಚಾಯತ ಅಧ್ಯಕ್ಷೆ ಪರ್ವೀನ್ ಬೇಗಂ ಮತ್ತು ಸದಸ್ಯ ದೇವಿಂದ್ರ ಸಭೆಗೆ ಅಡ್ಡಿಪಡಿಸಬೇಡಿ ಎಂದು ಮಾಣಿಕ ಹಿಪ್ಪರಗಿ ಮನವರಿಕೆಗೆ ಪ್ರಯತ್ನ ಮಾಡಿದರು.
ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಪಿಡಿಒ ಪೋಲಿಸರಿಗೆ ಕರೆ ಮಾಡಿದ್ದಾರೆ.ಪೋಲಿಸ್112 ಸಿಬ್ಬಂದಿಗಳು ಬಂದು ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ.
ವರದಿ : ಸಜೀಶ ಲಂಬುನೋರ