ಮೊಳಕಾಲ್ಮುರು: ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಸಿ ಐ ಟಿ ಯು ತಾಲೂಕು ಸಮಿತಿ ವತಿಯಿಂದ ಕಾರ್ಮಿಕ ದಿನಾಚರಣೆಯನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಾಹಿತಿ ಹಾಗೂ ಸಮಾಜಸೇವಕ ಮೊಳಕಾಲ್ಮೂರು ಶ್ರೀನಿವಾಸ್ ರವರು ನೆರವೇರಿಸಿ ಮಾತನಾಡಿದ ಅವರು, ದೇಶದ ಏಳಿಗೆಗಾಗಿ ಒಂದಲ್ಲ ಒಂದು ಕ್ಷೇತ್ರದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೂ ಒಂದು ದಿನವನ್ನು ಆಚರಣೆಗೆ ಇಟ್ಟಿರುವುದು ತುಂಬಾ ಪ್ರಶಂಸನೀಯ. ದೇಶದ ಪ್ರತಿಯೊಂದು ಕ್ಷೇತ್ರದಲ್ಲಿ ಕಾರ್ಮಿಕರ ಶ್ರಮ ಅಪಾರವಾದದ್ದು .ಇಂತಹ ಕಾರ್ಮಿಕರು ತಮ್ಮ ಬೆವರಿನ ಹನಿಯಿಂದ ದೇಶ ಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ .ಅವರು ಇಲ್ಲದೆ ದೇಶದ ಏಳಿಗೆ ಅಸಾಧ್ಯ .ಇಂತಹ ಕಾರ್ಮಿಕರಿಗೆ ನಾನು ಗೌರವವನ್ನು ಸೂಚಿಸುತ್ತೇನೆ. ಅಲ್ಲದೆ ಸರ್ಕಾರ ಕಾರ್ಮಿಕರಿಗೆ ಇನ್ನು ಉತ್ತಮವಾದಂತಹ ಸೌಕರ್ಯಗಳನ್ನು ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸಿಐಟಿಯು ತಾಲೂಕು ಅಧ್ಯಕ್ಷ ಕಾಂ. ಡಿ. ಎಂ. ಮಲಿಯಪ್ಪ . ಉಪಾಧ್ಯಕ್ಷ ಕಾಮ್ರೆಡ್ ದಾನ ಶೂರ ನಾಯಕ.. ಅಮಾಲಿ ಸಂಘದ ಅಧ್ಯಕ್ಷ ಶಿವಣ್ಣ. ಬಂಡಿ ಸಂಘದ ಅಧ್ಯಕ್ಷ ಬೊಮ್ಮಣ್ಣ.. ಬೀದಿ ಬದಿ ವ್ಯಾಪಾರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ.. ಹಾಗೂ ಲತೀಫ್ ಸರ್ ಸೇರಿದಂತೆ ಸಿಐಟಿಯು ಸಂಘಟನೆಯ ಪದಾಧಿಕಾರಿಗಳು.. ವಿವಿಧ ಸಂಘಟನೆಗಳ ಮುಖಂಡರುಗಳು.. ಸಾರ್ವಜನಿಕರು ಭಾಗವಹಿಸಿದ್ದರು.




