ಬೆಂಗಳೂರು: -ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಶೆಟ್ಟಿಹಳ್ಳಿ ವಾರ್ಡಿನ ವಿಘ್ನೇಶ್ವರ ಬಡಾವಣೆಯಲ್ಲಿ ಅಕ್ಕನ ಬಳಗ ಮಹಿಳಾ ಸಂಘದ ೧೧ನೇ ವಾರ್ಷಿಕೋತ್ಸವ,ಶ್ರೀ ಜಗಜ್ಯೋತಿ ಬಸವೇಶ್ವರ ಹಾಗೂ ಶ್ರೀ ರೇಣುಕಾಚಾರ್ಯ ಜಯಂತೋತ್ಸವದವನ್ನು ಸಂಘದ ಅಧ್ಯಕ್ಷೆ ಶ್ರೀಮತಿ ಪ್ರೇಮ ಆರಾಧ್ಯ ಮತ್ತು ಹಾಗೂ ವೀರ ಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡ ಮತ್ತು ಸಂಘದ ಸಂಸ್ಥಾಪಕ ಅಧ್ಯಕ್ಷ ಸಿ ಎಸ್ ಆರಾದ್ಯ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.
ಕ್ಷೇತ್ರದ ಶಾಸಕ ಎಸ್ ಮುನಿರಾಜು ಅವರು ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.ಈಗಿನ ಪೀಳಿಗೆಗೆ ಆಚಾರ ವಿಚಾರ ಸಂಸ್ಕೃತಿ ಸಂಪ್ರದಾಯ ಪರಂಪರೆ ಹಬ್ಬ ಹರಿದಿನಗಳು ಮರೆ ಮಾಚಿ ಹೋಗುತ್ತಿವೆ ಆ ಒಂದು ನಿಟ್ಟಿನಲ್ಲಿ ಆರಾಧ್ಯ ಅವರ ಧರ್ಮ ಪತ್ನಿ ಶ್ರೀಮತಿ ಪ್ರೇಮಾ ಅಕ್ಕನ ಬಳಗ ಮಹಿಳಾ ಸಂಘದ ವಾರ್ಷಿಕೋತ್ಸವ ಜಗಜ್ಯೋತಿ ಬಸವೇಶ್ವರ ಹಾಗೂ ರೇಣುಕಾಚಾರ್ಯ ಜಯಂತಿಯ ಮೂಲಕ ಧರ್ಮ ಜಾಗೃತಿ ಸೇವೆ ಅಗತ್ಯವಿದೆ ಎಂದು ಶಾಸಕ ಎಸ್ ಮುನಿರಾಜು ಉದ್ಘಾಟಿಸಿ ಮಾತನಾಡಿದರು.
ಶೆಟ್ಟಿಹಳ್ಳಿ ವಾರ್ಡಿನ ಬಿಜೆಪಿ ಅಧ್ಯಕ್ಷ ಬಿ ಸುರೇಶ್ ಮಾತನಾಡಿ ಪೂಜ್ಯರ ಜಯಂತಿ ಮಾಡುವ ಮೂಲಕ ಮಕ್ಕಳಿಗೆ ಪೂಜ್ಯರ ಆದರ್ಶಗಳು ಮತ್ತು ಅವರ ಮಹಿಮೆಯನ್ನು ತಿಳಿಸಿಕೊಡುವ ಕೆಲಸ ಪ್ರತಿಯೋಬ್ಬರು ಮಾಡಿದಾಗ ಮಾತ್ರ ಸಮಾಜದ ಇತಿಹಾಸ ತಿಳಿದಂತೆ ಆಗುತ್ತದೆ ಎಂದು ಸುರೇಶ್ ಹೇಳಿದರು.ಸಿ ಎಸ್ ಆರಾದ್ಯ ಸರ್ವರಿಗೂ ಸ್ವಾಗತಿಸಿದರು.
ಬಸವ ಧಾನ್ಯ ಸೆಂಟರ್ ಅಧ್ಯಕ್ಷೆ ಪೂಜ್ಯ ಶ್ರೀ ಓಂಕಾರೇಶ್ವರಿ ಸಾನಿಧ್ಯ ವಹಿಸಿದ್ದರು.ಈ ಸಂದರ್ಭದಲ್ಲಿ ವೀರ ಶೈವ ಲಿಂಗಾಯತ ಯುವ ಮುಖಂಡ ಬಿ.ಕೆ ಕಿರಣ್, ರಾಮಾರಾಧ್ಯ, ಶಿವಕುಮಾರ್ ಶಿಕ್ಷಕ, ಸ್ವಾಮಿ ಆರಾಧ್ಯ, ಶ್ರೀಕಂಠ ಆರಾಧ್ಯ, ಮಹಿಳಾ ಮುಖಂಡರಾದ ರೇಖಾ,ಸಾಕಮ್ಮ, ಗೀತಾ, ಚೇತನಾ,ನಾಗರತ್ನ, ವನಿತಾ, ಕುಸುಮ, ವಿಜಯಲಕ್ಷ್ಮಿ, ಮಂಜುಳಾ ಸೇರಿದಂತೆ ವೀರ ಶೈವ ಲಿಂಗಾಯತ ಮುಖಂಡರು ಮಹಿಳೆಯರು ವಿಘ್ನೇಶ್ವರ ಬಡಾವಣೆಯ ಸಮಸ್ತ ನಾಗರಿಕರು ಮುಂತಾದವರು ಉಪಸ್ಥಿತರಿದ್ದರು.
ವರದಿ:- ಅಯ್ಯಣ್ಣ ಮಾಸ್ಟರ್