Ad imageAd image

12 ಆಮ್ ಆದ್ಮಿ ಶಾಸಕರನ್ನು ಅಮಾನತು ಮಾಡಿದ ದೆಹಲಿ ಸ್ಪೀಕರ್ 

Bharath Vaibhav
12 ಆಮ್ ಆದ್ಮಿ ಶಾಸಕರನ್ನು ಅಮಾನತು ಮಾಡಿದ ದೆಹಲಿ ಸ್ಪೀಕರ್ 
WhatsApp Group Join Now
Telegram Group Join Now

ನವದೆಹಲಿ : ದೆಹಲಿ ವಿಧಾನಸಭಾ ಕಲಾಪದಲ್ಲಿ ಭಾರೀ ಕೋಲಾಹಲವೇ ನಡೆದಿದ್ದು, ಸ್ಪೀಕರ್ ವಿಜೇಂದರ್ ಗುಪ್ತಾ 12 ಮಂದಿ ಆಮ್‌ ಆದ್ಮಿ ಪಕ್ಷದ ಸದಸ್ಯರನ್ನು ಅಮಾನತು ಮಾಡಿದ್ದಾರೆ

ಮಂಗಳವಾರ (ಫೆಬ್ರವರಿ 25) ಸದನದಲ್ಲಿ ಎಲ್-ಜಿ ವಿಕೆ ಸಕ್ಸೇನಾ ಅವರ ಭಾಷಣದ ವೇಳೆ ಘೋಷಣೆಗಳನ್ನು ಎತ್ತಿದ್ದಕ್ಕಾಗಿ ಆಮ್ ಆದ್ಮಿ ಪಕ್ಷದ 112 ಶಾಸಕರನ್ನು ಒಂದು ದಿನದ ಮಟ್ಟಿಗೆ ಸಭೆಯಿಂದ ಉಚ್ಚಾಟಿಸಿದ್ದಾರೆ.ಪ್ರತಿಪಕ್ಷದ ನಾಯಕಿ ಅತಿಶಿ, ಮಾಜಿ ಸಚಿವ ಗೋಪಾಲ್ ರೈ ಸೇರಿದಂತೆ 12 ಶಾಸಕರು ಅಮಾನತುಗೊಂಡಿದ್ದಾರೆ.

ಎಎಪಿ ಅಧಿಕಾರಾವಧಿಯ ಮದ್ಯನೀತಿ, ದೆಹಲಿಯ ಸಾರ್ವಜನಿಕ ಸಾರಿಗೆ ಮತ್ತು ಆರೋಗ್ಯ ಸೇವೆಗಳ ಲೆಕ್ಕ ಪರಿಶೋಧನೆ ಹಾಗೂ ಇತರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿಗಳನ್ನು ಸದನದಲ್ಲಿ ಮಂಡಿಸಲಿದ್ದು ಇದಕ್ಕೂ ಮುನ್ನ ಲೆಫ್ಟಿನೆಂಟ್ ಗವರ್ನರ್ ಭಾಷಣ ಮಾಡಲು ಮುಂದಾದಾಗ ಎಎಪಿ ಸದಸ್ಯರು ಘೋಷಣೆಗಳನ್ನು ಕೂಗಲಾರಂಭಿಸಿದರು.

70 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 48 ಶಾಸಕರನ್ನು ಹೊಂದಿದ್ದು ಆಡಳಿತದ ಚಿಕ್ಕಾಣಿ ಹಿಡಿದಿದ್ದರೆ, ಎಎಪಿ 22 ಶಾಸಕರನ್ನು ಹೊಂದಿದ್ದು ವಿಪಕ್ಷ ಸ್ಥಾನದಲ್ಲಿದೆ

WhatsApp Group Join Now
Telegram Group Join Now
Share This Article
error: Content is protected !!