Ad imageAd image

ಟ್ಯಾಂಕ್ ನಲ್ಲಿದ್ದ ವಿಷಕಾರಿ ನೀರು ಸೇವಿಸಿ 12 ಮಕ್ಕಳು ಅಸ್ವಸ್ಥ

Bharath Vaibhav
ಟ್ಯಾಂಕ್ ನಲ್ಲಿದ್ದ ವಿಷಕಾರಿ ನೀರು ಸೇವಿಸಿ 12 ಮಕ್ಕಳು ಅಸ್ವಸ್ಥ
WhatsApp Group Join Now
Telegram Group Join Now

ಬೆಳಗಾವಿ: ಶಾಲೆಯಲ್ಲಿರುವ ಟ್ಯಾಂಕಿನ ನೀರು ಸೇವಿಸಿ 12 ಮಕ್ಕಳು ಅಸ್ವಸ್ಥಗೊಂಡ ಘಟನೆ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ನಡೆದಿದೆ.

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಅಸ್ವಸ್ಥ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇನ್ನು ನೀರಿನ ಟ್ಯಾಂಕ್ ಗೆ ಅಪರಿಚಿತ ವ್ಯಕ್ತಿಗಳು  ಕೀಟನಾಶಕ ಬೆರೆಸಿರುವುದು ದೃಢವಾಗಿದೆ. ಇಂದು ಬೆಳಗ್ಗಿನ ಜಾವ 6 ಗಂಟೆಯ ಸುಮಾರಿಗೆ ಟ್ಯಾಂಕ್‌ನಲ್ಲಿ ನೀರು ಸಂಗ್ರಹಿಸಲಾಗಿದೆ.

ಇದೇ ಟ್ಯಾಂಕಿನ ಮೂಲಕ ನೀರು ಸಂಗ್ರಹ ಮಾಡಲಾಗಿದೆ. ಆ ಬಳಿಕವೇ ಕಿಡಿಗೇಡಿಗಳು ಕೀಟನಾಶಕ ಬೆರೆಸಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ನೀರು ಕುಡಿದ ತಕ್ಷಣ ವಿದ್ಯಾರ್ಥಿಗಳಲ್ಲಿ ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡಿದೆ. ಶಾಲೆಯಲ್ಲಿ 41 ಮಕ್ಕಳಿದ್ದಾರೆ. ಅಲ್ಲದೇ ಈ ಶಾಲೆಯ ಪಕ್ಕದಲ್ಲೇ 20 ಅಧಿಕ ಮನೆಗಳಿದ್ದು, ಅವರು ಈ ಟ್ಯಾಂಕಿನ ನೀರನ್ನೇ ಅವಲಂಭಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!